Devil Vs Akhanda 2:ದರ್ಶನ್ ಸಿನಿಮಾಗೆ ಮತ್ತೊಂದು ಸಂಕಷ್ಟ; 'ಡೆವಿಲ್' ಜೊತೆ ಬಾಲಯ್ಯ 'ಅಖಂಡ 2' ರಿಲೀಸ್

ಎಲ್ಲವೂ ಸರಿಯಾಗಿ ಇದ್ದಿದ್ದರೆ, ಟಾಲಿವುಡ್‌ನ 'ಗಾಡ್ ಆಫ್ ಮಾಸಸ್' ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಅದ್ಧೂರಿಯಾಗಿ ರಿಲೀಸ್ ಆಗಬೇಕಿತ್ತು. ಆದರೆ, ಈ ಸಿನಿಮಾ ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ಹಾಗೂ ಇರೋಸ್ ನಡುವಿನ ವ್ಯವಹಾರಿಕ ವೈಮನಸ್ಸಿನಿಂದ ಸಿನಿಮಾ ಬಿಡುಗಡೆಯನ್ನು ಕೋರ್ಟ್ ತಡೆ ಹಿಡಿದಿತ್ತು. ಹೀಗಾಗಿ ಡಿಸೆಂಬರ್ 5ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಮುಂದೂಡಲ್ಪಟ್ಟಿತ್ತು.

ಈಗ 'ಅಖಂಡ 2' ತನಗೆ ಎದುರಾಗಿದ್ದ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿಕೊಂಡು ಥಿಯೇಟರ್‌ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಡಿಸೆಂಬರ್ 5ರನ್ನು ಮಿಸ್ ಮಾಡಿಕೊಂಡಿದ್ದ ಚಿತ್ರತಂಡ ಡಿಸೆಂಬರ್ 19 ಇಲ್ಲವೇ ಡಿಸೆಂಬರ್ 23ಕ್ಕೆ ಗ್ರ್ಯಾಂಡ್ ರಿಲೀಸ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅಂದುಕೊಂಡಿದ್ದಕ್ಕಿಂತ ಮುಂಚಿತವಾಗಿ, ಅಂದರೆ, ಡಿ. 12 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದು ನಂದಮೂರಿ ಬಾಲಕೃಷ್ಣ ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

Nandamuri Balakrishna movie Akhanda 2 releasing on Dec 12th Darshan movie Devil may face trouble

ಆದರೆ, 'ಅಖಂಡ 2' ಡಿಸೆಂಬರ್ 12 ರಂದು ರಿಲೀಸ್ ಆಗುತ್ತಿದ್ದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್‌'ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಡಿಸೆಂಬರ್ 11 ರಿಂದ ಡಿಸೆಂಬರ್ 24ರವರೆಗೆ ಎರಡು ವಾರಗಳ ಕಾಲ 'ಡೆವಿಲ್'ದೇ ರಾಜ್ಯಬಾರ ಎಂದುಕೊಂಡಿದ್ದ ತಂಡಕ್ಕೆ ಕೊಂಚ ಮಟ್ಟಿಗೆ ನಿರಾಸೆಯಾಗಿದೆ. ಹಾಗೇ ಮತ್ತೊಂದು ಸವಾಲು ಅನ್ನೂ ಎದುರಿಸಬೇಕಾಗಿದೆ.

'ಡೆವಿಲ್' ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಬಿಡುಗಡೆ ಹಂತಕ್ಕೆ ಬಂದು ನಿಂತಿತ್ತು. ಡಿಸೆಂಬರ್ 12ಕ್ಕೆ ರಿಲೀಸ್ ಆಗಬೇಕಿದ್ದ ಈ ಸಿನಿಮಾವನ್ನು ಒಂದು ದಿನ ಮುಂಚಿತವಾಗಿ ಅಭಿಮಾನಿಗಳಿಗಾಗಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್‌ಗೆ ರೆಡಿಯಾಗಿದ್ದ ಸಿನಿಮಾಗೆ ಈಗ ಬಾಲಕೃಷ್ಣ ಸಿನಿಮಾ 'ಅಖಂಡ 2' ಪೈಪೋಟಿ ನೀಡಲಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ 'ಡೆವಿಲ್'ಗೆ ಕೊಂಚ ಮಟ್ಟಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಇನ್ನೊಂದು ಕಡೆ ಎಲ್ಲವೂ ಸರಿಯಾಗಿದ್ದ 'ಅಖಂಡ 2' ಕೂಡ ಕಳೆದ ಒಂದು ವಾರದಿಂದ ಕಾನೂನು ಹಾಗೂ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿತ್ತು. ಡಿಸೆಂಬರ್ 5ರಂದು ರಿಲೀಸ್ ಎಂದು ಸಾಕಷ್ಟು ಪ್ರಚಾರ ಮಾಡಿತ್ತು. ಸಿನಿಮಾ ಬಿಡುಗಡೆ ಸ್ಥಗಿತಗೊಂಡಿದ್ದರಿಂದ ಪ್ರಚಾರ ಮಾಡಿದ್ದೆಲ್ಲವೂ ವ್ಯರ್ಥವಾಗಿತ್ತು. ಈಗ ಡಿಸೆಂಬರ್ 12ರಂದು ಅದೇ ಜೋಷ್‌ನಲ್ಲಿ ರಿಲೀಸ್ ಆಗುತ್ತಿದೆ.

ಇನ್ನು ಡಿಸೆಂಬರ್ 11ರಂದು ಸಂಜೆ ವೇಳೆಗೆ ಸಿನಿಮಾದ ಪ್ರೀಮಿಯರ್ ಕೂಡ ನಡೆಯಲಿದೆ. ಹೀಗಾಗಿ ಸಂಜೆ ಹೊತ್ತಿಗೆ 'ಅಖಂಡ 2'ಗಾಗಿ ಥೀಯೇಟರ್‌ಗಳು ಡಿವೈಡ್ ಆಗುವ ಸಾಧ್ಯತೆಯಿದೆ. ಡಿಸೆಂಬರ್ 12 ರಿಂದ ಥಿಯೇಟರ್‌ಗಳಲ್ಲಿ 'ಅಖಂಡ 2' ಮಾಸ್ ಎಂಟ್ರಿ ಕೊಡುತ್ತಿದೆ. ಹೀಗಾಗಿ 'ಡೆವಿಲ್' ಹಾಗೂ 'ಅಖಂಡ 2' ಈ ಎರಡೂ ಸಿನಿಮಾಗಳಲ್ಲಿ ಯಾವುದಕ್ಕೆ ಹೆಚ್ಚು ರೆಸ್ಪಾನ್ಸ್ ಸಿಗುತ್ತೆ ಅನ್ನೋದು ನೋಡಬೇಕಿದೆ.

'ಡೆವಿಲ್' ಒಂದು ದಿನ ಮುನ್ನವೇ ರಿಲೀಸ್ ಆಗುತ್ತಿದೆ. ಹೀಗಾಗಿ ಪ್ರೇಕ್ಷಕರಿಂದ ಒಳ್ಳೆಯ ಓಪನಿಯನ್ ಬಂದರೆ, ಮತ್ತೆ 'ಡೆವಿಲ್' ಅನ್ನು ಯಾರಿಂದಲೂ ಅಲ್ಲಾಡಿಸುವುದಕ್ಕೆ ಆಗುವುದಿಲ್ಲ. ಇನ್ನೊಂದು ಕಡೆ 'ಅಖಂಡ 2' ಕೂಡ ಈಗಾಗಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿದೆ. ಬಾಲಯ್ಯನ ಲುಕ್ ಹಾಗೂ ಟ್ರೈಲರ್‌ಗಳು ಪ್ರೇಕ್ಷಕರಿಗೆ ಪ್ರಾಮಿಸಿಂಗ್ ಎನಿಸಿವೆ. ಹೀಗಾಗಿ ಕರ್ನಾಟಕದಲ್ಲಿ 'ಡೆವಿಲ್' ಹೆಚ್ಚು ರೆಸ್ಪಾನ್ಸ್ ಸಿಗುತ್ತಾ? ಇಲ್ಲಾ ಬಾಲಯ್ಯನ 'ಅಖಂಡ 2'ಗೆ ಹೆಚ್ಚು ಪ್ರತಿಕ್ರಿಯೆ ಸಿಗುತ್ತಾ? ಬಾಕ್ಸಾಫೀಸ್‌ನಲ್ಲಿ ಗೆಲ್ಲೋದು ಯಾರು? ಬಾಲಯ್ಯನ ಎದುರು ದರ್ಶನ್ ಆರ್ಭಟಿಸುತ್ತಾರಾ? ಅನ್ನೋದು ನೋಡಬೇಕಿದೆ.

More from Filmibeat

Read more about: darshan balakrishna movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X