ನಂದಮೂರಿ ಹರಿಕೃಷ್ಣ ದುರ್ಮರಣಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ತಾರೆಯರು
ತೆಲುಗು ಚಿತ್ರರಂಗದ ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಪುತ್ರ ನಂದಮೂರಿ ಹರಿಕೃಷ್ಣ ಇಂದು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಅಭಿಮಾನಿಯ ಮದುವೆಯಲ್ಲಿ ಪಾಲ್ಗೊಳ್ಳಲು ನೆಲ್ಲೂರಿಗೆ ತೆರಳುತ್ತಿದ್ದ ನಂದಮೂರಿ ಹರಿಕೃಷ್ಣ ತೆಲಂಗಾಣದ ನಲ್ಗೊಂಡ ಬಳಿ ಅಪಘಾತಕ್ಕೀಡಾದರು. ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದೊಯ್ದರೂ, ಫಲಕಾರಿ ಆಗಲಿಲ್ಲ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಕಾರಣ ನಂದಮೂರಿ ಹರಿಕೃಷ್ಣ ಕೊನೆಯುಸಿರೆಳೆದರು.
ಬೆಳ್ಳಂಬೆಳಗ್ಗೆಯೇ ಬರಸಿಡಿಲಿನಂತೆ ಬಡಿದ ನಂದಮೂರಿ ಹರಿಕೃಷ್ಣ ಅವರ ಸಾವಿನ ಸುದ್ದಿ ಕೇಳಿ ಇಡೀ ಟಾಲಿವುಡ್ ಆಘಾತಗೊಂಡಿದೆ. ತೆಲುಗು ಚಿತ್ರರಂಗದ ಗಣ್ಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ನಂದಮೂರಿ ಹರಿಕೃಷ್ಣ ಅವರ ದುರ್ಮರಣಕ್ಕೆ ಕಂಬನಿ ಮಿಡಿದು ತಾರೆಯರು ಮಾಡಿರುವ ಟ್ವೀಟ್ ಗಳು ಇಲ್ಲಿವೆ ನೋಡಿರಿ...
ಮಿಸ್ ಯು ಅಣ್ಣ...
''ನಿನ್ನ ನೋಡಿ ತುಂಬಾ ದಿನ ಆಗಿದೆ'' ಎಂದು ಕೆಲವೇ ವಾರಗಳ ಹಿಂದೆಯಷ್ಟೇ ಹೇಳಿದ್ದರು. ಇಂದು ಅವರಿಲ್ಲ. ನಿಮ್ಮನ್ನ ಮಿಸ್ ಮಾಡಿಕೊಳ್ಳುವೆ ಅಣ್ಣ'' - ನಾಗಾರ್ಜುನ ಅಕ್ಕಿನೇನಿ.
ಆಘಾತಗೊಂಡಿರುವೆ
''ನಂದಮೂರಿ ಹರಿಕೃಷ್ಣ ಅವರ ದುರ್ಮರಣದ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ'' ಎಂದು ನಟಿ ರಾಧಿಕಾ ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಹೃದಯ ಛಿದ್ರಗೊಂಡಿದೆ
''ನಂದಮೂರಿ ಹರಿಕೃಷ್ಣ ಅವರ ಸಾವಿನ ಸುದ್ದಿ ಕೇಳಿ ಹೃದಯ ಛಿದ್ರಗೊಂಡಿದೆ. ತಾರಕ್, ಕಲ್ಯಾಣ್ ರಾಮ್ ಸೇರಿದಂತೆ ಇಡೀ ಕುಟುಂಬಕ್ಕೆ ನನ್ನ ಸಂತಾಪಗಳು'' - ನಟ ಸಿದ್ಧಾರ್ಥ್.
ವಿದೇಶದಲ್ಲಿ ಇರುವ ಅಲ್ಲು ಅರ್ಜುನ್
''ನಾನು ವಿದೇಶದಲ್ಲಿ ಇರುವೆ. ಈಗಷ್ಟೇ ಈ ಕೆಟ್ಟ ಸುದ್ದಿ ಕೇಳಿ ಆಘಾತಗೊಂಡಿರುವೆ. ನಂದಮೂರಿ ಕುಟುಂಬಕ್ಕೆ ನನ್ನ ಸಂತಾಪಗಳು'' - ನಟ ಅಲ್ಲು ಅರ್ಜುನ್
ಮನಸ್ಸಿಗೆ ನೋವಾಗಿದೆ
''ಅಕಾಲಿಕ ಮರಣ ಹೊಂದಿದ ಹರಿಕೃಷ್ಣ ಅವರ ಸಾವಿನ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇಡೀ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ'' - ಮಹೇಶ್ ಬಾಬು
ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ
''ಹರಿಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಕಷ್ಟದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಶಕ್ತಿ ಸಿಗಲಿ'' - ಸಮಂತಾ ಅಕ್ಕಿನೇನಿ
ಬಹುಬೇಗ ಅಗಲಿದರು
''ಹರಿಕೃಷ್ಣ ಅವರು ತುಂಬಾ ಬೇಗ ನಮ್ಮನ್ನೆಲ್ಲ ಅಗಲಿದರು. ತಾರಕ್ ಮತ್ತು ಕಲ್ಯಾಣ್ ರಾಮ್... ನೀವಿಬ್ಬರೂ ಧೈರ್ಯವಾಗಿರಿ'' - ರಾನಾ ದಗ್ಗೂಬಾಟಿ
ನಿರ್ಭೀತ ಆತ್ಮ
''ಹರಿಕೃಷ್ನ ಅವರೊಂದಿಗೆ ಹಲವು ಚಿತ್ರಗಳಲ್ಲಿ ಆತ್ಮೀಯವಾಗಿ ಕೆಲಸ ಮಾಡಿರುವೆ. ಅವರದ್ದು ನಿರ್ಭೀತ ಆತ್ಮ'' - ಬಿವಿಎಸ್ ರವಿ
ಅತ್ಯುತ್ತಮ ನಟ
''ನಂದಮೂರಿ ಹರಿಕೃಷ್ಣ ಅವರು ಅಕಾಲಿಕ ಮರಣ ಹೊಂದಿದ ಸುದ್ದಿ ಕೇಳಿ ತೀವ್ರ ನೋವುಂಟಾಯಿತು. ಅವರು ನಿಜಕ್ಕೂ ಅತ್ಯುತ್ತಮ ನಟ ಹಾಗೂ ಒಳ್ಳೆಯ ಮಾತುಗಾರ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು'' - ಸಾಯಿಕುಮಾರ್.


Click it and Unblock the Notifications











