4 ದಿನ ಕಳೆದಿದ್ದರೆ, ನಂದಮೂರಿ ಹರಿಕೃಷ್ಣ ಜನ್ಮದಿನ: ಆದ್ರೆ ವಿಧಿ ಲಿಖಿತವೇ ಬೇರೆ.!
Recommended Video

ಈ ದುರಂತ ಘಟಿಸದೇ ಇದ್ದಿದ್ದರೆ, ಇನ್ನೂ ನಾಲ್ಕು ದಿನಗಳಲ್ಲಿ ನಂದಮೂರಿ ಹರಿಕೃಷ್ಣ ತಮ್ಮ 62ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಿದ್ರು. ಆದ್ರೆ, ವಿಧಿ ಲಿಖಿತವೇ ಬೇರೆ ಆಗಿದೆ. ಮತ್ತೊಂದು ಜನ್ಮದಿನವನ್ನ ಸೆಲೆಬ್ರೇಟ್ ಮಾಡಿಕೊಳ್ಳುವ ಮುನ್ನವೇ ನಂದಿಮೂರಿ ಹರಿಕೃಷ್ಣ ಇಹಲೋಕ ತ್ಯಜಿಸಿದ್ದಾರೆ.
ನಂದಮೂರಿ ಹರಿಕೃಷ್ಣ ಹೇಳಿ ಕೇಳಿ ಟಾಲಿವುಡ್ ನಟ ಹಾಗೂ ರಾಜಕಾರಣಿ. ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ನಂದಮೂರಿ ಹರಿಕೃಷ್ಣ ಅವರ ಬರ್ತಡೇಯನ್ನ ಫ್ಯಾನ್ಸ್ ಗ್ರ್ಯಾಂಡ್ ಆಗಿ ಆಚರಣೆ ಮಾಡುತ್ತಾರೆ.

ಆದ್ರೆ, ''ಈ ಬಾರಿ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡ. ಅದಕ್ಕೆ ಖರ್ಚು ಮಾಡುವ ಹಣವನ್ನ ಕೇರಳ ಪ್ರವಾಹ ಪೀಡಿತರಿಗೆ ಹಾಗೂ ಆಂಧ್ರದ ಪ್ರವಾಹ ಸಂತ್ರಸ್ಥರಿಗೆ ನೀಡಿ'' ಎಂದು ನಂದಮೂರಿ ಹರಿಕೃಷ್ಣ ತಮ್ಮ ಅಭಿಮಾನಿಗಳಲ್ಲಿ ಪತ್ರ ಮುಖೇನ ಮನವಿ ಮಾಡಿದ್ದರು.
ಅಭಿಮಾನಿಗಳಿಗೆ ನಂದಮೂರಿ ಹರಿಕೃಷ್ಣ ಬರೆದಿದ್ದ ಪತ್ರ ಟ್ವಿಟ್ಟರ್ ನಲ್ಲಿ ಸದ್ಯ ವೈರಲ್ ಆಗಿದೆ.
ಅಭಿಮಾನಿಯ ಮದುವೆಯಲ್ಲಿ ಪಾಲ್ಗೊಳ್ಳಲು ನೆಲ್ಲೂರಿಗೆ ಇಂದು ಬೆಳಗ್ಗೆ ತೆರಳುತ್ತಿದ್ದ ನಂದಮೂರಿ ಹರಿಕೃಷ್ಣ ತೆಲಂಗಾಣದ ನಲ್ಗೊಂಡ ಬಳಿ ಅಪಘಾತಕ್ಕೀಡಾದರು. ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದೊಯ್ದರೂ, ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಕಾರಣ ನಂದಮೂರಿ ಹರಿಕೃಷ್ಣ ಸಾವನ್ನಪ್ಪಿದರು.


Click it and Unblock the Notifications











