'ಮತ್ತೆ ಮದುವೆ'ಗೆ ಸಜ್ಜಾದ ನರೇಶ್-ಪವಿತ್ರಾ ಲೋಕೇಶ್ ಸಿನಿಮಾ ಮೊದಲ ದಿನ ಗಳಿಕೆ ಲೆಕ್ಕಾಚಾರವೇನು?

ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ ಮಳ್ಳಿ ಪೆಳ್ಳಿ (ಮತ್ತೆ ಮದುವೆ) ಸಿನಿಮಾ ಮೇ 26ರಂದು ರಿಲೀಸ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ವಿವಾದಾತ್ಮಕ ಸಿನಿಮಾಗಳಲ್ಲಿ ಇದೂ ಒಂದು. ಮೊದಲ ದಿನ ಸಿನಿಮಾಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಪ್ರತಿಕ್ರಿಯೆ ಸಿಕ್ಕಿತ್ತು.

'ಮಳ್ಳಿ ಪೆಳ್ಳಿ' ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಕೇವಲ ತೆಲುಗು ರಾಜ್ಯಗಳಲ್ಲಿ ಮಾತ್ರ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಲಾಗಿತ್ತು.

Naresh, Pavitra Lokesh Starrer Malli Pelli Movie Box Office Collection Prediction

'ಮಳ್ಳಿ ಪೆಳ್ಳಿ' ಸಿನಿಮಾ ನರೇಶ್ ಅವರ ನೈಜ ಬದುಕಿನ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಎಮೋಷನ್ಸ್, ಕಾಮಿಡಿ ಜೊತೆ ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಅನ್ನೋದನ್ನು ಈ ಸಿನಿಮಾ ಮೂಲಕ ಹೇಳಲಾಗಿದೆ. ಈ ಓಲ್ಡ್ ಏಜ್ ಲವ್‌ ಸ್ಟೋರಿಗೆ ಪ್ರೇಕ್ಷಕರ ಇಂಟ್ರೆಸ್ಟ್ ಇದೆಯೇ? ಬಾಕ್ಸಾಫೀಸ್‌ನಲ್ಲಿ ಮೊದಲ ದಿನ ಗಳಿಸಿದ್ದೆಷ್ಟು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಮಳ್ಳಿ ಪೆಳ್ಳಿ ಕಥೆಯೇನು?

ನರೇಂದ್ರ (ವಿಕೆ ನರೇಶ್) ಜನಪ್ರಿಯ ನಟ. ತೆಲುಗು ಚಿತ್ರರಂಗದ ಪ್ರಭಾವಿ ಕುಟುಂಬದಿಂದ ಬಂದವರು. ಅದಾಗಲೇ ಮೂರು ಬಾರಿ ಮದುವೆಯಾಗಿರೋ ನಟನಿಗೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತೆ. ಅದೂ ತನ್ನ ಸಹ ನಟಿ ಪಾರ್ವತಿ (ಪವಿತ್ರಾ ಲೋಕೇಶ್) ಮೇಲೆ ಲವ್ ಆಗುತ್ತೆ.

ಪಾರ್ವತಿ (ಪವಿತ್ರಾ ಲೋಕೇಶ್)ಗೂ ಅದಾಗಲೇ ಮದುವೆ ಆಗಿರುತ್ತೆ. ಇವರಿಬ್ಬರಲ್ಲೂ ಪ್ರೀತಿ ಹುಟ್ಟುತ್ತೆ. ಅದನ್ನು ತಮ್ಮ ಬದುಕಿನಲ್ಲಿ ಹೇಗೆ ಎದುರಿಸುತ್ತಾರೆ ಅನ್ನೋದೇ ಸಿನಿಮಾ ಕಥೆ.

Naresh, Pavitra Lokesh Starrer Malli Pelli Movie Box Office Collection Prediction

ಮೊದಲ ದಿನದ ಅಂದಾಜು ಗಳಿಕೆ ಎಷ್ಟು?

ಕಳೆದ ಕೆಲವು ತಿಂಗಳಿನಿಂದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಚರ್ಚೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ಹೆಚ್ಚು ಪ್ರಚಾರದ ಅವಶ್ಯಕತೆ ಇರಲಿಲ್ಲ. ಆದರೂ ಕೇವಲ ತೆಲುಗು ರಾಜ್ಯಗಳಲ್ಲಿ ಮಾತ್ರ ರಿಲೀಸ್ ಮಾಡಿದ್ದಾರೆ. ಹೀಗಾಗಿ ಮೊದಲ ದಿನದ ಗಳಿಕೆ ಬಗ್ಗೆ ಟ್ರೇಡ್ ಅನಲಿಸ್ಟ್‌ಗಳು ಈಗಾಗಲೇ ಒಂದು ಲೆಕ್ಕಾಚಾರ ಹಾಕಿದ್ದಾರೆ.

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮಳ್ಳಿ ಪೆಳ್ಳಿ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಆಗಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಅಂದಾಜಿ 30 ಲಕ್ಷ ರೂ.ಯಿಂದ 50 ಲಕ್ಷ ರೂ. ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ರಿಲೀಸ್‌ಗೂ ಮುನ್ನವೇ ಶರತ್ ಬಾಬು ನಿಧನ

'ಮಳ್ಳಿ ಪೆಳ್ಳಿ' ಸಿನಿಮಾದಲ್ಲಿ ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆ ತೆಲುಗಿನ ಪ್ರಮುಖ ನಟರು ನಟಿಸಿದ್ದಾರೆ. ಅನನ್ಯಾ ನಾಗಲ್ಲ, ವನಿತಾ ವಿಜಯ್‌ಕುಮಾರ್, ಜಯಸುಧಾ, ಅನ್ನಪೂರ್ಣ ಅಂತ ನಟರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇವರೊಂದಿಗೆ ದಕ್ಷಿಣ ಭಾರತದ ಜನಪ್ರಿಯ ನಟ ಶರತ್ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಈ ಸಿನಿಮಾ ಬಿಡುಗಡೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಶರತ್ ಬಾಬು ನಿಧನರಾಗಿದ್ದಾರೆ. ಇದು ಶರತ್ ಬಾಬು ನಟನೆಯ ಕೊನೆಯ ಸಿನಿಮಾ. ಏನೇ ಇದ್ದರೂ, 'ಮಳ್ಳಿ ಪೆಳ್ಳಿ' ಅಂದಾಜು ಕಲೆಕ್ಷನ್ ಹೊರಬಿದ್ದಿದೆ. ಇನ್ನು ಚಿತ್ರತಂಡ ಅಧಿಕೃತವಾಗಿ ಮಾಹಿತಿ ಹೊರಹಾಕಬೇಕಿದೆ.

More from Filmibeat

English summary
VK Naresh, Pavitra Lokesh Starrer Malli Pelli Movie Box Office Collection Prediction, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X