twitter
    For Quick Alerts
    ALLOW NOTIFICATIONS  
    For Daily Alerts

    ತುಳುನಾಡಿನ ರಾಣಿ 'ಅಬ್ಬಕ್ಕ'ಳನ್ನು ಮರೆತು '192021' ಅಂತ ತಲೆಗೆ ಹುಳ ಬಿಟ್ಟ ನಿರ್ದೇಶಕ ಮಂಸೋರೆ: ಈ ಸಿನಿಮಾ ವಿಶೇಷತೆಯೇನು?

    |

    ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಇಮೇಜ್ ಹುಟ್ಟು ಹಾಕಿಕೊಂಡಿರುವ ನಿರ್ದೇಶಕ ಮಂಸೋರೆ. 'ಆಕ್ಟ್ 1978', 'ಹರಿವು', 'ನಾತಿಚಾರಾಮಿ' ಯಂತಹ ವಿಶಿಷ್ಟ ಸಿನಿಮಾಗಳನ್ನೇ ನಿರ್ದೇಶಿಸುತ್ತಾ ಬಂದಿರುವ ಮಂಸೋರೆ ಹೊಚ್ಚ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಟೈಟಲ್‌ನಿಂದಲೇ ಮಂಸೋರೆ ಕುತೂಹಲವನ್ನು ದುಪ್ಪಟ್ಟು ಮಾಡಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅಬ್ಬರ ಶುರುವಾಗುತ್ತಿದ್ದಂತೆ ಮಂಸೋರೆ ಕೂಡ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈ ಹಾಕಿದ್ದರು. ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿತ್ತು. ಅದುವೇ ತುಳುನಾಡಿನ ರಾಣಿ ಅಬ್ಬಕ್ಕ. ವೀರರಾಣಿ ಅಬ್ಬಕ್ಕನ ಕಥೆಯನ್ನು ತೆರೆಮೇಲೆ ತರಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಕೊರೊನಾ ಈ ಕನಸಿಗೆ ತಣ್ಣೀರು ಸುರಿದಿದೆ. ಹಾಗಾಗಿ ಹೊಚ್ಚ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಹೊಚ್ಚ ಹೊಸ ಸಿನಿಮಾದ ಬಗ್ಗೆ ನಿರ್ದೇಶಕ ಮಂಸೋರೆ ಫಿಲ್ಮಿ ಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

    ಹೊಸ ಪ್ರಯೋಗಕ್ಕೆ ಕೈ ಹಾಕಿದ ಮಂಸೋರೆ

    ಹೊಸ ಪ್ರಯೋಗಕ್ಕೆ ಕೈ ಹಾಕಿದ ಮಂಸೋರೆ

    ನಿರ್ದೇಶಕ ಮಂಸೋರೆ ಸಿನಿಮಾಗಳನ್ನು ಇಷ್ಟಪಡುವಂತ ಸಿನಿಪ್ರಿಯರಿಗೆ ಖುಷಿ ಸುದ್ದಿಯೊಂದಿಗೆ. ಮಂಸೋರೆ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಇದು ಸತ್ಯ ಘಟನೆಯನ್ನು ಆಧರಿಸಿದ ಸಿನಿಮಾ. ಸದಾ ತೆರೆಮೇಲೆ ಹೊಸ ಕತೆಗಳನ್ನು ತರುವ ಮಂಸೋರೆ ಈ ಬಾರಿ ಕೂಡ ಮತ್ತೆ ಅಂತಹದ್ದೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. " ಈ ಘಟನೆಗಳಿಗೆ ಸಂಬಂಧಿಸಿದಂತೆ ಸುಮಾರು ದಿನಗಳಿಂದ ಬರೆದಿಟ್ಟುಕೊಂಡಿದ್ದೆ. ಅದಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಡಿಟೈಲ್ಸ್ ಸಿಕ್ಕಿತು. ನನಗೂ ಇಂತಹ ರಿಯಲ್ ಸ್ಟೋರಿ ಮೇಲೆ ಮಾಡಲು ಚಾಲೆಂಜಿಂಗ್ ಆಗಿರುತ್ತೆ. ಇವತ್ತು ರಿಯಲಿಸ್ಟಿಕ್ ಸಿನಿಮಾಗಳಿಗೆ ಜನರು ಆಸಕ್ತಿ ತೋರುತ್ತಿದ್ದಾರೆ. ಹಿಂದೆಲ್ಲಾ ಇದು ಅವಾರ್ಡ್‌ಗೆ ಫೆಸ್ಟಿವಲ್‌ಗೆ ಅಂತಿದ್ದರು. ಆದರೆ, ಈಗ ಹಾಗಾಗಿಲ್ಲ. ಎಲ್ಲಾ ಕಡೆನೂ ಒಳ್ಳೆ ರೆಸ್ಪಾನ್ಸ್ ಇದೆ. ಈಗ ಕಾಲ ಕೂಡಿ ಬಂದಿದೆ." ಎಂದು ನಿರ್ದೇಶಕ ಮಂಸೋರೆ ಫಿಲ್ಮಿ ಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

    '192021' ಈ ಟೈಟಲ್ ವಿಶೇಷತೆ ಏನು?

    '192021' ಈ ಟೈಟಲ್ ವಿಶೇಷತೆ ಏನು?

    ಸಿನಿಮಾ ಟೈಟಲ್ '192021'. ಕೇವಲ ಟೈಟಲ್ ಅಚ್ಚರಿಯನ್ನು ಹುಟ್ಟಿಸಿದೆ. ಮೇಲ್ನೋಟಕ್ಕೆ ಕೊರೊರಾ ಎಂಟ್ರಿ ಕೊಟ್ಟಲ್ಲಿಂದ 2019. 2020 ಹಾಗೂ 2021 ಈ ಮೂರು ವರ್ಷ ಸಾಕಷ್ಟು ಬದಲಾವಣೆಗಳು ಕಾಣಲು ಸಿಕ್ಕಿವೆ. ಹೀಗಾಗಿ ಈ ಮೂರು ವರ್ಷದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುತ್ತಿರುಬಹುದು ಎಂಬ ಅನುಮಾನ ಮೂಡಿದೆ. " ಈ ಟೈಟಲ್‌ನಲ್ಲಿ ನಾಲ್ಕೈದು ಅರ್ಥಗಳಿವೆ. ಇದೊಂದು ಲೈಫ್‌ಗೆ ಸಂಬಂಧಪಟ್ಟ ಟೈಟಲ್ ಆಗಿರಬಹುದಾ? ವರ್ಷನಾ? ಹೀಗೆ ಟೈಟಲ್ ಬಗ್ಗೆ ಈಗ ವಿವರಕೊಡುವುದಕ್ಕಿಂತ ಟ್ರೈಲರ್ ಮೂಲಕವೇ ಕೊಡೋಣ ಅಂತ ಇದ್ದೀನಿ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌತುಕವನ್ನು ಹುಟ್ಟಾಕುವುದೇ ಚಾಲೆಂಜ್. ಕೆಲವೊಮ್ಮೆ ಇದೇ ಸಿನಿಮಾ ಅಂತ ಕಲ್ಪಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಟೈಟಲ್ ಬಗ್ಗೆ ಟ್ರೈಲರ್‌ನಲ್ಲಿ ಹೇಳುತ್ತೇವೆ." ಎಂದು ನಿರ್ದೇಶಕ ಮಂಸೋರೆ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

    'ಅಬ್ಬಕ್ಕ' ಸಿನಿಮಾ ಮುಂದೂಡಿದ್ದೇಕೆ

    'ಅಬ್ಬಕ್ಕ' ಸಿನಿಮಾ ಮುಂದೂಡಿದ್ದೇಕೆ

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, 'ಅಬ್ಬಕ್ಕ' ಸಿನಿಮಾದ ಚಿತ್ರೀಕರಣ ಶುರುವಾಗಬೇಕಿತ್ತು. 16ನೇ ಶತಮಾನದ ತುಳುನಾಡಿನ ಹೋರಾಟಗಾರ್ತಿಯ ಚರಿತ್ರೆಯನ್ನು ತೆರೆಮೇಲೆ ತರಬೇಕಿತ್ತು. ಆದರೆ, ಮಂಸೋರೆ ಪ್ಯಾನ್ ಇಂಡಿಯಾ 'ಅಬ್ಬಕ್ಕ' ಸಿನಿಮಾವನ್ನು ಕೊರೊನಾ ಕಾರಣದಿಂದ ಮುಂದೂಡಿದ್ದಾರೆ. "ಅಬ್ಬಕ್ಕ ಸಂಪೂರ್ಣವಾಗಿ ಒಂದು ವರ್ಷ ಹಿಡಿದಿದೆ. ಇದೇ ಜನವರಿ 26ಕ್ಕೆ ಸಿನಿಮಾ ಅನೌನ್ಸ್ ಆಗಬೇಕಿತ್ತು. ತೆಲುಗು ನಿರ್ಮಾಪಕರು ಹಣ ಹೂಡಲು ರೆಡಿಯಾಗಿದ್ದರು. ಕೊರೊನಾದಿಂದ ಅವರ ತೆಲುಗು ಸಿನಿಮಾ ಬಿಡುಗಡೆ ನಿಂತಿದೆ. ಹೀಗಾಗಿ ಒಂದು ವರ್ಷ ಮುಂದಕ್ಕೆ ಹಾಕೋಣ ಎಂಬ ತೀರ್ಮಾನಕ್ಕೆ ಬರಬೇಕಾಯಿತು. ಹೀಗಾಗಿ ಈ ಗ್ಯಾಪ್‌ನಲ್ಲಿ ಒಂದು ನೈಜ ಘಟನೆ ಆಧರಿಸಿದ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದೇನೆ." ಎಂದು ನಿರ್ದೇಶಕ ಮಂಸೋರೆ ತಿಳಿಸಿದ್ದಾರೆ.

    ಕಲಾವಿದರ ಸಂಖ್ಯೆ ದೊಡ್ಡದಿದೆ

    ಕಲಾವಿದರ ಸಂಖ್ಯೆ ದೊಡ್ಡದಿದೆ

    "ಥಿಯೇಟರ್ ಹಾಗೂ ಸಿನಿಮಾ ಕಲಾವಿದರು ಮಿಕ್ಸ್ ಆಗುತ್ತಾರೆ. ಕಥೆ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುವ ಕಥೆ. ಹೀಗಾಗಿ ಬೆಂಗಳೂರು ಹಾಗೂ ಕರಾವಳಿ ಭಾಗದ ಕಲಾವಿದರು ಈ ಸಿನಿಮಾದಲ್ಲಿ ಇರುತ್ತಾರೆ. 'ಆಕ್ಟ್ 1978'ನಲ್ಲಿರುವ ಕೆಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೊಸ ಮುಖಗಳನ್ನು ನೋಡಬಹುದು. ಫೇಮಸ್ ಆಗಿರುವ ಮುಖಗಳೂ ಇರುತ್ತವೆ. ಈ ಸಿನಿಮಾ ಅತಿ ಹೆಚ್ಚು ಕಲಾವಿದರು ಇರುತ್ತಾರೆ. ಸಿನಿಮಾ ಅಕ್ಟೋಬರ್ ಇಲ್ಲಾ ನವೆಂಬರ್ ಹಾಗೆ ಸಿನಿಮಾ ರಿಲೀಸ್ ಆಗುತ್ತೆ." ಎಂದು ಮಂಸೋರೆ ಹೇಳಿದ್ದಾರೆ.

    English summary
    National Award winning Kannada movie director Mansore new film titled '192021'. Mansore supposed to Direct Pan India Movie Abbakka. Due corona he postponed and took 192021 as new project.
    Wednesday, January 19, 2022, 11:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X