Toxic: ಕ್ರೈಸ್ತರ ದೇವದೂತ ಸಂತ ಮಿಕಯೇಲ್‌ಗೆ ಅಪಮಾನ; 'ಟಾಕ್ಸಿಕ್' ವಿರುದ್ಧ ದೂರು.. ಮುಂದೇನು?

ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ವಿಶ್ವದಾದ್ಯಂತ ಬಿಡುಗಡೆಗೆ ವೇದಿಕೆ ಅದ್ಧೂರಿಯಾಗಿ ಸಜ್ಜಾಗುತ್ತಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಈ ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ. ಕ್ರೈಸ್ತ್ರ ಸಮುದಾಯದ ಒಕ್ಕೂಟವೊಂದು 'ಟಾಕ್ಸಿಕ್' ಸಿನಿಮಾದ ಟೀಸರ್‌ನಲ್ಲಿ ಪ್ರಸಾರವಾದ ದೃಶ್ಯಗಳಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರು ನೀಡಿದ್ದಾರೆ.

'ಟಾಕ್ಸಿಕ್' ಸಿನಿಮಾ ಕನ್ನಡದ ಮತ್ತೊಂದು ಪ್ರಾಮಿಸಿಂಗ್ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡುವುದಕ್ಕೆ ವೇದಿಕೆಗಳು ಸಜ್ಜಾಗುತ್ತಿವೆ. ಇನ್ನೊಂದು ಕಡೆ 'ಟಾಕ್ಸಿಕ್' ಸಿನಿಮಾ ಬ್ಯುಸಿನೆಸ್ ಕೂಡ ಶುರುವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಒಂದೊಂದೇ ಏರಿಯಾದ ಹಕ್ಕುಗಳ ವ್ಯಾಪಾರವನ್ನು ಕುದುರಿಸುತ್ತಾ ಬರುತ್ತಿದೆ. ಈ ಗ್ಯಾಪ್‌ನಲ್ಲೇ ಇಂತಹದ್ದೊಂದು ದೂರು ದಾಖಲಿಸಲಾಗಿದೆ.

National christian Federation complained KFCC against Yash Movie Toxic

'ಕೆಜಿಎಫ್ ಚಾಪ್ಟರ್ 2' ಬಳಿಕ ನಾಲ್ಕು ವರ್ಷಗಳಾದ್ಮೇಲೆ ಯಶ್ ನಟಿಸುತ್ತಿರುವ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಅವರ ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಅದ್ಯಾವಾಗ 'ಟಾಕ್ಸಿಕ್' ಟೀಸರ್ ದಾಖಲೆ ವೀವ್ಸ್ ಕಂಡಿತೋ ಆಗಲೇ ಸಿನಿಮಾ ಕ್ರೇಜ್ ಮತ್ತಷ್ಟು ಹೆಚ್ಚಾಗಿತ್ತು. ಆದರೆ, ಟೀಸರ್‌ನ ಕೆಲವು ದೃಶ್ಯಗಳು ವಿವಾದಕ್ಕೂ ಎಡೆ ಮಾಡಿಕೊಟ್ಟಿದ್ದವು. ಮಹಿಳಾ ಒಕ್ಕೂಟ ಟೀಸರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದವು. ಈಗ ಕ್ರೈಸ್ತ ಸಮುದಾಯ ಕಿಡಿಕಾರಿದೆ. ಅಷ್ಟಕ್ಕೂ ಕ್ರೈಸ್ತ್ರ ಸಮುದಾಯ ಆರೋಪವೇನು? ಯಾರಿಗೆಲ್ಲ ದೂರು ನೀಡಲಾಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಟಾಕ್ಸಿಕ್' ಟೀಸರ್‌ನಲ್ಲಿ ಕೆಲವು ಹಸಿ ಬಿಸಿ ದೃಶ್ಯಗಳು ಇವೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕೆಗಳನ್ನು ಮಾಡಿದರೆ, ಇನ್ನು ಕೆಲವರು ಸಪೋರ್ಟ್ ಮಾಡಿದ್ದರು. ಮಹಿಳೆಯರು ಈ ದೃಶ್ಯಗಳ ವಿರುದ್ಧ ದೂರನ್ನು ನೀಡಿ ಅಸಮಧಾನ ಹೊರ ಹಾಕಿದ್ದರು. ಅಲ್ಲಿಗೆ ಮುಗೀತು ಅಂದುಕೊಳ್ಳುವಾಗಲೇ ಈಗ ಕ್ರೈಸ್ತ ಸಮುದಾಯ ಅಸಮಧಾನ ಹೊರ ಹಾಕಿದೆ. ದೃಶ್ಯಗಳನ್ನು ಸಿನಿಮಾದಿಂದ ತೆಗೆಯುವಂತೆ ಬೇಡಿಕೆ ಇಟ್ಟು ದೂರನ್ನು ನೀಡಿದೆ.

National christian Federation complained KFCC against Yash Movie Toxic

ಯಶ್ 'ಟಾಕ್ಸಿಕ್' ಟೀಸರ್‌ನಲ್ಲಿ ಕ್ರೈಸ್ತರ ದೇವದೂತ ಸಂತ ಮಿಕಯೇಲ್‌ಗೆ ಅಪಮಾನ ಆಗಿದೆ ಅನ್ನೋದು ನ್ಯಾಷನಲ್‌ ಕ್ರಿಶ್ಚಿಯನ್‌ ಫೆಡರೇಷನ್‌ (National christian Federation) ಆರೋಪ. ಈ ಸಂಘ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರ ನೀಡಿದೆ. ಹಾಗೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್‌ಗೂ ಕೂಡ ದೂರನ್ನು ನೀಡಿದೆ.

'ಟಾಕ್ಸಿಕ್' ಟೀಸರ್‌ನಲ್ಲಿ ಕ್ರೈಸ್ತರ ದೇವದೂತರಾದ ಸಂತ ಮಿಕಯೇಲ್‌ ಪ್ರತಿಮೆಯ ಮುಂದೆ ಅಶ್ಲೀಲ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ಇದರಿಂದ ಕ್ರೈಸ್ತ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ಈಗಾಗಲೇ ಯೂಟ್ಯೂಬ್‌ನಲ್ಲಿ ಇರುವ ದೃಶ್ಯಗಳನ್ನು ತೆಗೆಯಬೇಕು. ಜೊತೆಗೆ ಸಿನಿಮಾದಿಂದಲೂ ಈ ಅಶ್ಲೀಲ ದೃಶ್ಯಗಳನ್ನು ತೆಗೆಯಲು ಸೂಚನೆ ನೀಡುವಂತೆ ನ್ಯಾಷನಲ್‌ ಕ್ರಿಶ್ಚಿಯನ್‌ ಫೆಡರೇಷನ್‌ ಅಧ್ಯಕ್ಷ ಪ್ರದೀಪ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಕ್ರೈಸ್ತರ ದೇವದೂತ ಸಂತ ಮಿಕಯೇಲ್ ಎದುರು ಚಿತ್ರಿಸಿರುವ ದೃಶ್ಯಗಳನ್ನು ತೆಗೆಯುವುದಷ್ಟೇ ಅಲ್ಲೇ, ಅಪಮಾನ ಮಾಡಿದ್ದಕ್ಕಾಗಿ ಕ್ರೈಸ್ತ ಸಮುದಾಯಕ್ಕೆ ಕ್ಷಮೆ ಕೇಳಬೇಕು. ಒಂದು ವೇಳೆ ಈ ದೃಶ್ಯಗಳನ್ನು ತೆಗೆಯದೆ ಹೋದಲ್ಲಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ದೂರಿನ ಬಗ್ಗೆ 'ಟಾಕ್ಸಿಕ್' ತಂಡ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ. ತಂಡಕ್ಕೆ ಎದುರಾಗಿರುವ ಮತ್ತೊಂದು ಸಂಕಷ್ಟವನ್ನು ಹೇಗೆ ಬಗೆ ಹರಿಸಿಕೊಳ್ಳುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
National christian Federation complained KFCC against Yash Movie Toxic. They alleged that Toxic team insulted Christian Angel Saint Michael;
Read more about: yash toxic complaint
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X