This Week Release: 'ನವಗ್ರಹ' ಜೊತೆ ರಿಲೀಸ್ ಆಗುತ್ತಿರುವ 3 ಕನ್ನಡ ಸಿನಿಮಾಗಳು ಯಾವುವು?
ಶುಕ್ರವಾರ ಬಂತು ಅಂದರೆ ಸಿನಿಪ್ರಿಯರಿಗೆ ಹಬ್ಬ. ಹೊಚ್ಚ ಹೊಸ ಸಿನಿಮಾಗಳು ರಿಲೀಸ್ ಆಗುತ್ತವೆ. ಈ ವಾರ 16 ವರ್ಷಗಳ ಹಿಂದೆ ತೆರೆಕಂಡಿದ್ದ ಸಿನಿಮಾ ರಿಲೀಸ್ ಆಗುತ್ತಿದೆ. ಇದರೊಂದಿಗೆ ಪ್ರತಿವಾರ ಒಂದಿಷ್ಟು ಹೊಸಬರ ಸಿನಿಮಾಗಳು ಕೂಡ ರಿಲೀಸ್ ಆಗುತ್ತಿವೆ.
ಸದ್ಯ ಚಿತ್ರಮಂದಿರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ರಿಲೀಸ್ ಆಗಿದೆ. ಆ ಸಿನಿಮಾ ಥಿಯೇಟರ್‌ನಲ್ಲಿ ರನ್ನಿಂಗ್ ಇದೆ. ಅದೇ ಮುಂದಿನ ವಾರ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ 'ಭೈರತಿ ರಣಗಲ್' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಗ್ಯಾಪ್‌ನಲ್ಲಿ ಕನ್ನಡದ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿವೆ.

ಈ ವಾರ ರಿಲೀಸ್ ಆಗುತ್ತಿರುವ ನಾಲ್ಕು ಸಿನಿಮಾಗಳಲ್ಲಿ ಒಂದು 'ನವಗ್ರಹ' ಮರು ಬಿಡುಗಡೆಯಾಗುತ್ತಿದೆ. ಇನ್ನುಳಿದ ಮೂರು ಸಿನಿಮಾಗಳು ಹೊಸಬರ ಸಿನಿಮಾಗಳು. ಹಾಗಿದ್ದರೆ, ಈ ವಾರ ರಿಲೀಸ್ ಆಗುತ್ತಿರುವ ನಾಲ್ಕು ಸಿನಿಮಾಗಳ ವಿಶೇಷತೆ ಏನು? ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಈ ಸಿನಿಮಾಗಳು ಸೆಳೆಯಬಹುದೇ? ತಿಳಿಯಲು ಮುಂದೆ ಓದಿ.
ದರ್ಶನ್ 'ನವಗ್ರಹ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಕಷ್ಟದಲ್ಲಿರುವಾಗ ಅವರೇ ನಟಿಸಿದ ಸಿನಿಮಾ 'ನವಗ್ರಹ' ಮರು ಬಿಡುಗಡೆಗೆ ಸಜ್ಜಾಗಿದೆ. 2008ರಲ್ಲಿ ತೆರೆಕಂಡಾಗ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. 16 ವರ್ಷಗಳ ಹಿಂದೆ 'ನವಗ್ರಹ' ಕನ್ನಡ ಚಿತ್ರರಂಗಕ್ಕೆ ಹೊಸ ಪ್ರಯೋಗ ಅನಿಸಿತ್ತು. ಹೀರೋ ಆಗಿ ಮಿಂಚುತ್ತಿದ್ದ ದರ್ಶನ್ ಖಳನಾಯಕನಾಗಿ ನಟಿಸಿದ್ದರು. ಕನ್ನಡದ ಜನಪ್ರಿಯ ಖಳನಾಯಕರ ಪುತ್ರರು ಈ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಅದೇ ಸಿನಿಮಾವನ್ನು ಮತ್ತೆ ರೀ ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಟಿಕೆಟ್‌ಗಳು ಕೂಡ ಭರ್ಜರಿಯಾಗಿ ಸೇಲ್ ಆಗುತ್ತಿವೆ.

ಐವರು ನಿರ್ದೇಶಕರ ಬಿಟಿಎಸ್
ಕನ್ನಡದಲ್ಲಿ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಬಿಟಿಎಸ್' ಸಿನಿಮಾ. ಐವರು ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ 'ಬಿಟಿಎಸ್' ಅಂದರೆ, 'ಬಿಹೈಂಡ್ ದಿ ಸೀನ್ಸ್'. ಐವರು ನಿರ್ದೇಶಕರು ಐದು ಕಥೆಗಳನ್ನು ನಿರ್ದೇಶನ ಮಾಡಿದ್ದಾರೆ. ಪೂರ್ವ ಭಾರದ್ವಾಜ್, ಕುಲದೀಪ್ ಕಾರಿಯಪ್ಪ, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ರಾಜೇಶ್ ಎನ್. ಶಂಕದ್ ಡೈರೆಕ್ಟರ್ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಬಹುದು ಅನ್ನೋ ನಿರೀಕ್ಷೆಯಿದೆ.
'ಸಂಗೀತ ಸಂತೋಷ'
ಲಾಕ್‌ಡೌನ್ ಸಮಯದಲ್ಲಿ ರೂಪುಗೊಂಡ ಸಿನಿಮಾ 'ಸಂಗೀತ ಸಂತೋಷ'. ಇದೊಂದು ಲವ್, ಕಾಮಿಡಿ ಹಾಗೂ ಸಸ್ಪೆನ್ಸ್ ಸಿನಿಮಾ. ಕನ್ನಡ ಚಿತ್ರರಂಗದ ಹಿರಿಯ ನಟರಾದ ಅವಿನಾಶ್, ದೊಡ್ಡಣ್ಣ ಸೇರಿದಂತೆ ಕವನಾ, ಅಮಿತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ, ಮಡೆನೂರು ಮನು, ಹನೀಶ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದು, ನವೆಂಬರ್ 8ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ.
'ಯು'
ಕ್ರೈಂ ಥ್ರಿಲ್ಲರ್ ಇಷ್ಟ ಪಡುವವರಿಗೆ ಕನ್ನಡದಲ್ಲೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಯು'. ರಾಜೇಶ್ ನಟರಂಗ, ದೇವರಾಜ್ ಅಂತಹ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನವೆಂಬರ್ 8 ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಒಂದು ಸರಣಿ ಸಾವಿನ ಹಿನ್ನೆಲೆಯನ್ನು ಇಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ.


Click it and Unblock the Notifications











