ನವೀನ್ ಶಂಕರ್ ಸಿನಿಮಾದ ಟ್ರೈಲರ್ ಚಿಂದಿ:"ಅನ್ನ ಬೆಳೆಯೋ ಮಣ್ಣಿಗೆ ರೈತನೇ ಕ್ಷೇತ್ರಪತಿ".. ಜೈಕಾರ ಹಾಕಿದ ನೆಟ್ಟಿಗರು

ಸ್ಯಾಂಡಲ್‌ವುಡ್‌ನಲ್ಲಿ ನವೀನ್ ಶಂಕರ್ ಸಿನಿಮಾಗಳು ಹೊಸ ಕ್ರೇಜ್ ಹುಟ್ಟಾಕುತ್ತಿವೆ. ಇತ್ತೀಚೆಗಷ್ಟೇ ತೆರೆಕಂಡಿದ್ದ 'ಹೊಯ್ಸಳ' ಸಿನಿಮಾದಲ್ಲಿ ನವೀನ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇಡೀ ಸಿನಿಮಾದುದ್ದಕ್ಕೂ ಈ ಪಾತ್ರವೇ ಹೈಲೈಟ್ ಆಗಿತ್ತು.

ಈ ಸಿನಿಮಾ ಮುನ್ನ 'ಗುಲ್ಟು' ಮೂಲಕ ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದರು. 'ಹೊಂದಿಸಿ ಬರೆಯಿರಿ' ಹೊಸ ಆಯಾಮ ಕೊಟ್ಟ ಸಿನಿಮಾ. ಓಟಿಟಿಗೆ ಈ ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು 'ಹೊಯ್ಸಳ'ದಲ್ಲಿ ನವೀನ್ ಪಾತ್ರವನ್ನು ಮರೆಯೋ ಹಾಗೇ ಇಲ್ಲ.

Naveen Shankar new movie Kshetrapati trailer getting good response

ಈಗ ಈ ಎಲ್ಲಾ ಸಿನಿಮಾಗಳಿಗಿಂತಲೂ ಅದ್ಭುತ ಸಿನಿಮಾ ಕೊಡುವ ಉತ್ಸಾಹದಲ್ಲಿ ನವೀನ್ ಶಂಕರ್ ಇದ್ದಾರೆ. ಈ ನಟನ ಹೊಚ್ಚ ಸಿನಿಮಾ 'ಕ್ಷೇತ್ರಪತಿ'ಯ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು, ಟ್ರೈಲರ್‌ಗೆ ಚಿಂದಿ ರೆಸ್ಪಾನ್ಸ್ ಸಿಕ್ಕಿದೆ.

ನವೀನ್ ಶಂಕರ್ ಅಭಿನಯದ ಈ 'ಕ್ಷೇತ್ರಪತಿ' ಸಿನಿಮಾ ಪೊಲಿಟಿಕಲ್ ಡ್ರಾಮ ಕಥೆ ಹೊಂದಿದೆ. ಶ್ರೀಕಾಂತ್ ಕಟಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆ. ಹಾಗಾಗಿ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ‌. ಈ ಸಿನಿಮಾವನ್ನು ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

Naveen Shankar new movie Kshetrapati trailer getting good response

'ಹೊಂದಿಸಿ ಬರೆಯಿರಿ' ಸಿನಿಮಾದಲ್ಲಿ ನಾಯಕ -ನಾಯಕಿಯಾಗಿ ನಟಿಸಿ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಜನರ ಮನಸ್ಸು ಗೆದ್ದಿದ್ದರು. ಈಗ 'ಕ್ಷೇತ್ರಪತಿ' ಸಿನಿಮಾದಲ್ಲೂ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯರಂಗ, ಹರ್ಷ ಅರ್ಜುನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

'ಕೆಜಿಎಫ್' ಖ್ಯಾತಿಯ ರವಿ ಬಸ್ರೂರ್ 'ಕ್ಷೇತ್ರಪತಿ'ಗೆ ಸಂಗೀತ ನೀಡಿದ್ದಾರೆ. ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Naveen Shankar new movie Kshetrapati trailer getting good response, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X