»   » ಅಂಬರೀಶ್ ಮನೆಗೆ ರಮ್ಯಾ 'ನೀರ್ ದೋಸೆ' ರವಾನೆ

ಅಂಬರೀಶ್ ಮನೆಗೆ ರಮ್ಯಾ 'ನೀರ್ ದೋಸೆ' ರವಾನೆ

By: ಉದಯರವಿ
Subscribe to Filmibeat Kannada

ಇದು ಮೊದಲೇ ದೋಸೆ ಚಿತ್ರ. ತೂತು ಇರಲ್ಲ ಅಂದ್ರೆ ಹೇಗೆ? ಎಲ್ಲರ ಮನೆ ದೋಸೆನೂ ತೂತೆ ಅಲ್ಲವೆ? ನೀರ್ ದೋಸೆ ಚಿತ್ರದ ಕಥೆಯೂ ಹಾಗೆಯೇ ಆಗಿದೆ. ಈ ಚಿತ್ರಕ್ಕೆ ಆರಂಭದಿಂದಲೂ ಒಂದಲ್ಲ ಒಂದು ವಿವಾದಗಳು ಎದುರಾಗುತ್ತಲೇ ಇವೆ. ಈಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಆಗಷ್ಟೇ ರುಬ್ಬಿಟ್ಟುಕೊಂಡ ಹಿಟ್ಟಿನಿಂದ ನೀರ್ ದೋಸೆ ಮಾಡಲಾಗುತ್ತದೆ. ಆದರೆ ಇಲ್ಲಿ ಹಿಟ್ಟು ರುಬ್ಬಿಟ್ಟುಕೊಂಡು ಬಹಳ ದಿನಗಳೇ ಆಗಿವೆ. ಆದರೆ ಇನ್ನೂ ನೀರ್ ದೋಸೆ ಹುಯ್ಯಲು ಸಾಧ್ಯವಾಗುತ್ತಿಲ್ಲ. ಈಗ ಈ ಚಿತ್ರ ವಿವಾದದ ಕೇಂದ್ರಬಿಂದು ಆಗಿರುವವರು ರಮ್ಯಾ.

ಲಕ್ಕಿ ಗರ್ಲ್ ರಮ್ಯಾ 'ನೀರ್ ದೋಸೆ' ಚಿತ್ರದ‌ ವಿವಾದ ಈಗ ರೆಬಲ್ ಸ್ಟಾರ್ ಅಂಬರೀಶ್ ಮನೆಗೆ ರವಾನೆಯಾಗಿದೆ. ಕಳೆದೆರಡು ದಿನಗಳಿಂದ ಈ ಚಿತ್ರ ಹಲವಾರು ಕಾರಣಗಳಿಗಾಗಿ ಭಾರಿ ವಿವಾದಕ್ಕೆ ಗುರಿಯಾಗಿರುವುದು ಗೊತ್ತೆ ಇದೆ. [ಇದನ್ನು ಓದಿ: ರಮ್ಯಾ ಮೇಲೆ ಜಗ್ಗೇಶ್ ಟ್ವೀಟ್ ಬಾಣ]
,
ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ರಮ್ಯಾ ಈ ಚಿತ್ರದಲ್ಲಿ ಅಭಿನಯಿಸಬೇಕಾಗಿತ್ತು. ಆದರೆ ಆಗಿದ್ದೇ ಬೇರೆ.

ರಮ್ಯಾ ಚಿತ್ರಕ್ಕೆ ಯಾಕೆ ಈ ವಿವಾದ?

ರಮ್ಯಾ ಅವರು ಮಂಡ್ಯ ಸಂಸದೆಯಾಗಿ ಆಯ್ಕೆಯಾದರು. ಬಳಿಕ ತಾವು ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿರುವುದು
ಈಗ ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

ಅಂಬರೀಶ್ ಮಧ್ಯಸ್ಥಿಕೆಗೆ ರಮ್ಯಾ ಆಗ್ರಹ

ಮಂಗಳವಾರ (ಅ.29) ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ, ನೀರ್ ದೋಸೆ ವಿವಾದ ಸಂಬಂಧ ಅಂಬರೀಷ್ ಅವರು ಮಧ್ಯಸ್ಥಿಕೆ ವಹಿಸಿ ವಿವಾದಕ್ಕೆ ಅಂತ್ಯ ಹಾಡಬೇಕು ಎಂದಿದ್ದಾರೆ. ಈ ಬಗ್ಗೆ ಅಂಬರೀಷ್ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದೂ ಹೇಳಿದ್ದಾರೆ.

ಜುಲೈನಲ್ಲೇ ಡೇಟ್ ಕೊಟ್ಟಿದ್ದೆ ಆದರೂ...

ಈ ಹಿಂದೆ ತಾವು ನೀರ್ ದೋಸೆ ಚಿತ್ರೀಕರಣದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದೆ. ಈ ಸಂಬಂಧ ಜುಲೈನಲ್ಲೇ ಡೇಟ್ ಕೊಟ್ಟಿದ್ದೆ. ಅಲ್ಲದೆ ನನ್ನ ಭಾಗದ ಚಿತ್ರೀಕರಣ ಮುಗಿಸಿಕೊಡುವಂತೆ ನಿರ್ದೇಶಕರಿಗೆ ಹಲವು ಬಾರಿ ಫೋನ್ ಮಾಡಿ ಹೇಳಿದ್ದೆ. ಆಗ ಚಿತ್ರೀಕರಣ ಮಾಡದೆ ಸುಮ್ಮನಿದ್ದು, ಈಗ ಬಂದಿದ್ದಾರೆ. ಆದರೆ ಈಗ ನನಗೆ ಸಾಧ್ಯವಿಲ್ಲ ಎಂದಿದ್ದಾರೆ ರಮ್ಯಾ.

ವಿವಾದದ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ

ಇತ್ತೀಚೆಗೆ ರಮ್ಯಾ ವಿರುದ್ಧ ಚಿತ್ರದ ನಾಯಕ ನಟ ಜಗ್ಗೇಶ್ ಅವರು ವಾಗ್ದಾಳಿ ನಡೆಸಿರುವುದು ವಿವಾದದ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ. ಮನುಷ್ಯ ಎಷ್ಟೇ ದೊಡ್ಡವನಾಗಿ ಬೆಳೆದರೂ ತಾನು ನಡೆದು ಬಂದ ದಾರಿ ಮತ್ತು ವೃತ್ತಿಯನ್ನು ಮರೆಯಬಾರದು ಎಂದಿದ್ದರು ಜಗ್ಗೇಶ್.

ನವರಸ ನಾಯಕ ಜಗ್ಗೇಶ್ ಗರಂ ಆಗಲು ಕಾರಣ

ಅವರು ಈ ರೀತಿ ರಮ್ಯಾ ಮೇಲೆ ಗರಂ ಆಗಲು ಈ ನೀರ್ ದೋಸೆ ಚಿತ್ರಕ್ಕೆ ಅವರು ಕೈ ಎತ್ತಿದ್ದೇ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದ. 'ನೀರ್‌ದೋಸೆ' ಚಿತ್ರಕ್ಕೆ ಆಯ್ಕೆಯಾಗಿದ್ದ ರಮ್ಯಾ ಕೆಲವು ದಿನ ನಟಿಸಿದ್ದರು. ಸಂಸದೆಯಾದ ಬಳಿಕ 'ನೀರ್‌ದೋಸೆ' ಚಿತ್ರದಲ್ಲಿ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಿಲ್ಲ.

ಈಗ ವಿವಾದ ಅಂಬರೀಶ್ ಅಂಗಳಕ್ಕೆ ಬಂದಿದೆ

ಈ ಬಗ್ಗೆ ಜಗ್ಗೇಶ್‌ ಟ್ವೀಟರ್‌ನಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಟ್ವಿಟ್ಟರ್ ನಲ್ಲಿ ಹೊಗೆಯಾಡುತ್ತಿದ್ದ ವಿವಾದ ಮಾಧ್ಯಮಗಳಲ್ಲಿ ಭುಗಿಲೆದ್ದು ಈಗ ಅಂಬರೀಶ್ ಅಂಗಳಕ್ಕೆ ಬಂದಿದೆ. ನೋಡೋಣ ಅಂಬಿ ಏನಾದರು ಬೆಂಕಿಯನ್ನು ಶಮನಗೊಲಿಸುತ್ತಾರೋ ಹೇಗೋ ಎಂದು.

English summary
Kannada actress cum politician Ramya is embroiled in a controversy in connection with her film Neer Dose projects. The film was delayed as Ramya has not completed shooting for her portions. This has upset "Neer Dose" producer M Sudheendra and the film's lead actor Jaggesh. Now Ramya wants Rebel Star Ambarish Intervention.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada