»   » ರಮ್ಯಾ ಮೇಲೆ 'ನೀರ್ ದೋಸೆ' ಟ್ವೀಟಾಸ್ತ್ರ ಬಿಟ್ಟ ಜಗ್ಗೇಶ್

ರಮ್ಯಾ ಮೇಲೆ 'ನೀರ್ ದೋಸೆ' ಟ್ವೀಟಾಸ್ತ್ರ ಬಿಟ್ಟ ಜಗ್ಗೇಶ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಜೊತೆ ಆರ್ಯನ್, ಜಗ್ಗೇಶ್ ಜೊತೆ ನೀರ್ ದೋಸೆ ಹಾಗೂ ಪ್ರಜ್ವಲ್ ದೇವರಾಜ್ ಜೊತೆ ದಿಲ್ ಕಾ ರಾಜಾ ಚಿತ್ರಗಳನ್ನು ಮಂಡ್ಯ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಆದಷ್ಟು ಬೇಗ ಮುಗಿಸಿಕೊಟ್ಟು ತಮ್ಮ ಕ್ಷೇತ್ರಕ್ಕಾಗಿ ಸೇವೆ ಸಲ್ಲಿಸುವಲ್ಲಿ ಕಾಲದೂಡುತ್ತಾರೆ ಎಂಬ ಸುದ್ದಿ ಎಲ್ಲರಿಗೂ ತಿಳಿದೇ ಇದೆ.

ಸಂಸದೆಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಸಮಯ ಸಾಲುತ್ತಿಲ್ಲವಂತೆ ಹೀಗಾಗಿ ಬೇರೆ ಯಾವುದೇ ಚಿತ್ರವನ್ನು ರಮ್ಯಾ ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಕೆಲ ಚಿತ್ರಗಳನ್ನು ಒಪ್ಪಿಕೊಂಡು ಅಡ್ವಾನ್ಸ್ ಪಡೆದಿದ್ದ ರಮ್ಯಾ ಅವರು ಅಡ್ವಾನ್ಸ್ ವಾಪಸ್ ಮಾಡಿದ್ದರಂತೆ. ಆದರೆ, ಜಗ್ಗೇಶ್ ಯಾಕೋ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಒಂದಷ್ಟು ಟ್ವೀಟ್ ಅಸ್ತ್ರಗಳನ್ನು ಬಿಟ್ಟಿದ್ದಾರೆ.

ಒಟ್ಟಾರೆ, ಹತ್ತು ವರ್ಷ ಸ್ಯಾಂಡಲ್ ವುಡ್ ನ ಅನಭಿಷಿಕ್ತ ರಾಣಿಯಾಗಿ ಮೆರೆದ ರಮ್ಯಾ ಸಿನಿಮಾ ಜೀವನ ರಾಜಕೀಯದಿಂದ ಅಂತ್ಯವಾಗುತ್ತಾ ಅನ್ನೋ ಅನುಮಾನ ಬೇಸರ ಸಿನಿಪ್ರೇಮಿಗಳನ್ನ ಕಾಡತೊಡಗಿದೆ. ಇನ್ನು ರಮ್ಯಾ ಮದುವೆ ಯಾವಾಗ ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡುತ್ತಿದೆ. ಜಗ್ಗೇಶ್ ಟ್ವೀಟ್ ಗೆ ರಮ್ಯಾ ಮೇಡಂ ಇನ್ನು ಉತ್ತರ ನೀಡಿಲ್ಲ. ಬಿಜೆಪಿ vs ಕಾಂಗ್ರೆಸ್ ನಟ vs ನಟಿ ಅಭಿಪ್ರಾಯ ಅಭಿಮತಗಳು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುತ್ತಿದೆ ಅಷ್ಟೇ

ರಮ್ಯಾ ಎಲ್ಲಿದ್ದಾರೆ

ರಮ್ಯಾ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಮಂಡ್ಯ ಕ್ಷೇತ್ರದ ನಿವಾಸಿಗಳ ಕಷ್ಟ ಸುಖ ಕೇಳುತ್ತಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಲು ಸದಾ ಸಿದ್ಧ ಎನ್ನುತ್ತಿರುವ ರಮ್ಯಾ ಗ್ರಾಮಸ್ಥ ನೀಡಿದ ಅಕ್ಕಿ ರೊಟ್ಟಿ ಚಟ್ನಿ ತಿಂದು ಖುಷಿ ಪಡುತ್ತಿದ್ದಾರೆ. ವಿಠಲಪುರ, ಸಂತೆಬಾಚಳ್ಳಿ, ಮದ್ದೂರು, ಪಾಂಡವಪುರ ಹೀಗೆ ರಮ್ಯಾ ಅವರು ನಿರಂತರವಾಗಿ ಸಂಚರಿಸುತ್ತಿದ್ದಾರೆ.

ಜಗ್ಗೇಶ್ ಹಿತವಚನ

ರಮ್ಯಾ ಹಾಗೂ ನೀರ್ ದೋಸೆ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡುವ ಮೊದಲು ಹೀಗೊಂದು ಹಿತವಚನ ಹಾಕಿದ್ದಾರೆ. ಜಗ್ಗೇಶ್ ತಮ್ಮ ಅಭಿಮಾನಿಗಳ ಜತೆ ಮಾತುಕತೆ ನಡೆಸಲು ಟ್ವಿಟ್ಟರ್ ಅನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ.

ನೀರ್ ದೋಸೆ ಹಾಗೂ ರಮ್ಯಾ

ಕೆಲ ಚಿತ್ರಗಳ ಅಡ್ವಾನ್ಸ್ ರಮ್ಯಾ ಹಿಂತಿರುಗಿಸಿದ್ದಾರೆ. ಅದರೆ, ನೀರ್ ದೋಸೆ ಖರ್ಚು ನೀಡುವವರು ಯಾರು ಎಂದು ಜಗ್ಗೇಶ್ ಪ್ರಶ್ನಿಸಿದ್ದಾರೆ.

ನೀರ್ ದೋಸೆ ಖರ್ಚು ವೆಚ್ಚ

ನೀರ್ ದೋಸೆ ಚಿತ್ರಕ್ಕೆ ಆಗಿರುವ ಖರ್ಚು ವೆಚ್ಚ ಲೆಕ್ಕ ಕೊಟ್ಟ ನವರಸ ನಾಯಕ

ನೀರ್ ದೋಸೆ ಗಾಸಿಪ್

ಎಲ್ಲಾ ಹೇಳಿದ ಮೇಲೆ ಟ್ವಿಸ್ಟ್ ಇರಲು ಎಂದು ನೀರ್ ದೋಸೆ ಬಗ್ಗೆ ಕೇಳಿದ್ದು ಗಾಳಿ ಸುದ್ದಿ ಆಗಲಿ. ನಿರ್ದೇಶಕರಿಗೆ ಯಶ ಸಿಗಲಿ ಎಂದು ಹಾರೈಸಿದ್ದಾರೆ.

English summary
BJP MLC cum Actor Jaggesh tweets about MP Ramya alias Divya Spanada quitting Neer Dose movie and returning the advance received for the same. Jaggesh tweeted and explained about the Neer Dose movie cost
Please Wait while comments are loading...