'ಅವತಾರ ಪುರುಷ 2' ನಿರ್ಮಾಪಕರಿಗೆ ಟೆಲಿಗ್ರಾಂ ಲಿಂಕ್ ಕಳಿಸುವಂತೆ ಬೇಡಿಕೆ; ಪ್ರತಿಕ್ರಿಯೆ ಹೇಗಿತ್ತು?

ಕಳೆದ ವಾರವಷ್ಟೇ ಕಾಮಿಡಿ ಕಿಂಗ್ ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಅವತಾರ ಪುರುಷ 2' ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಯಾಗಿ ಇನ್ನೂ ಕೇವಲ ನಾಲ್ಕು ದಿನಗಳಾಗಿವೆ. ಅಷ್ಟರಲ್ಲೇ ನಿರ್ಮಾಪಕರಿಗೆ ಇನ್‌ಸ್ಟಾಗ್ರಾಂನಲ್ಲೊಂದು ಸಂದೇಶ ಬಂದಿದೆ. ಅದನ್ನು ಅದೇ ಇನ್‌ಸ್ಟಾಗ್ರಾಂನಲ್ಲಿಯೇ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಶೇರ್ ಮಾಡಿಕೊಂಡಿದ್ದಾರೆ.

ಯಾವುದೇ ಹೊಸ ಸಿನಿಮಾ ರಿಲೀಸ್ ಆದರೂ ಅದು ಪೈರಸಿ ಆಗದಂತೆ ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ. ಈ ಹಿಂದೆ ಕನ್ನಡ ನಿರ್ಮಾಪಕರು ಏನೆಲ್ಲ ಹೋರಾಟ ಮಾಡಿದ್ದರು. ಆದರೆ, ಪೈರಸಿ ಮಾಡುವ ಕಿಡಿಗೇಡಿಗಳನ್ನು ತಡೆಗಟ್ಟುವುದಕ್ಕೆ ಮಾತ್ರ ಸಾಧ್ಯವಾಗಿಲ್ಲ. ಇಂದಿಗೂ ರಾಜಾರೋಷವಾಗಿ ಹೊಚ್ಚ ಹೊಸ ಸಿನಿಮಾಗಳು ಪೈರಸಿಗಳಾಗುತ್ತಿವೆ.

Netizen asks telegram link of Avatara Purusha 2 movie to producer Pushkara Mallikarjunaiah

ಬಿಗ್ ಬಜೆಟ್ ಹಾಕಿ ನಿರ್ಮಾಣ ಮಾಡಿದ ಸಿನಿಮಾಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿ ಸೈಟ್‌ಗಳಲ್ಲಿ, ಟೆಲಿಗ್ರಾಂ ಲೀಕ್ ಆಗುತ್ತಿವೆ. ಇದರಿಂದ ನಿರ್ಮಾಪಕ ನಷ್ಟ ಅನುಭವಿಸುತ್ತಿರುವುದು ಗೊತ್ತೇ ಇದೆ. ಪರಿಸ್ಥಿತಿ ಹೀಗಿರುವಾಗ 'ಅವತಾರ ಪುರುಷ 2' ನಿರ್ಮಾಪಕ ಬಳಿಕ ನೆಟ್ಟಿಗನೊಬ್ಬ ಟ್ರೆಲಿಗ್ರಾಂ ಲಿಂಕ್ ಕಳಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಅದಕ್ಕೆ ನಿರ್ಮಾಪಕ ಪುಷ್ಕರ್ ಪ್ರತಿಕ್ರಿಯೆ ಏನಾಗಿತ್ತು? ಎಂದು ತಿಳಿಯಲು ಮುಂದೆ ಓದಿ..

ಸಿಂಪಲ್ ಸುನಿ ತನ್ನ ಫೇವರಿಟ್ ರೋಮ್ಯಾಂಟಿಕ್ ಕಾಮಿಡಿ ಜಾನರ್ ಅನ್ನು ಬಿಟ್ಟು ಹಾರರ್ ಕಾಮಿಡಿಗೆ ವಾಲಿದ್ದರು. 'ಅವತಾರ ಪುರುಷ ' ಪಾರ್ಟ್ 1 ರಿಲೀಸ್ ಆದಾಗ, ಸಿನಿಮಾಗೆ ಥಿಯೇಟರ್‌ನಲ್ಲಿ ಅಷ್ಟಾಗಿ ರೆಸ್ಪಾನ್ಸ್ ಸಿಗದೇ ಇದ್ದಿದ್ದರೂ, ಓಟಿಟಿಯಲ್ಲಿ, ಟಿವಿಯಲ್ಲಿ ಪ್ರಸಾರ ಆದಾಗ ನೋಡಿ ಖುಷಿ ಪಟ್ಟಿದ್ದರು. 'ಅವತಾರ ಪುರುಷ ' ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಈಗ ಅದೇ ಸಿನಿಮಾ ಪಾರ್ಟ್ 2 ರಿಲೀಸ್ ಆಗಿದೆ.

ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಮೊದಲ ಪಾರ್ಟ್ ನೋಡಿದವರು 'ಅವತಾರ ಪುರುಷ 2' ಎರಡನೇ ಪಾರ್ಟ್ ನೋಡುವುದಕ್ಕೆ ಬಂದೇ ಬರುತ್ತಾರೆ ಅನ್ನೋ ನಂಬಿಕೆ ಮೇಲೆ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಸಿನಿಮಾ ಬಿಡುಗಡೆಯಾಗಿ ಇನ್ನೂ ಒಂದು ವಾರವೂ ಆಗಿಲ್ಲ. ಅಷ್ಟರಲ್ಲೇ ಟೆಲಿಗ್ರಾಂ ಲಿಂಕ್ ಕೇಳುತ್ತಿದ್ದಾರೆ.

Netizen asks telegram link of Avatara Purusha 2 movie to producer Pushkara Mallikarjunaiah

'ಅವತಾರ ಪುರುಷ 2' ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯಗೆ 'ದಿ ಬಿಜಿಎಂ ತೀಫ್' ಎಂಬ ಖಾತೆಯಿಂದ ಒಂದು ಮೆಸೇಜ್ ಬಂದಿತ್ತು. ಅದರಲ್ಲಿ "ಟೆಲಿಗ್ರಾಂ ಲಿಂಕ್ ಕಳಿಸಿ" ಎಂದು ಬರೆಯಲಾಗಿತ್ತು. ಇದನ್ನು ನೋಡಿ ಪುಷ್ಕರ್ ಮಲ್ಲಿಕಾರ್ಜುನಯ್ಯಗೆ ಈ ಸಂದೇಶವನ್ನು ತನ್ನ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೇ "ಇವನಿಗೆ ಈ ಸಿನಿಮಾದ ನಿರ್ಮಾಪಕ ನಾನೇ ಎಂಬುದೂ ಅರ್ಥವಾಗಿಲ್ಲ" ಎಂದು ನಗುವಿನ ಎಮೋಜಿ ಹಾಕಿದ್ದಾರೆ.

ಐಪಿಎಲ್ ಹಾಗೂ ಚುನಾವಣೆ ಸಮಯದಲ್ಲಿ 'ಅವತಾರ ಪುರುಷ 2' ಸಿನಿಮಾ ರಿಲೀಸ್ ಆಗಿದೆ. ಹೀಗಾಗಿ ತನ್ನದೇ ಸವಾಲುಗಳನ್ನು ಎದುರಿಸಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಸಮಯದಲ್ಲಿ ಕೆಲವರು ಟೆಲಿಗ್ರಾಂ ಲಿಂಕ್‌ಗಾಗಿ ಕಾಯುತ್ತಿದ್ದಾರೆ. ಇತ್ತ ನಿರ್ಮಾಪಕರು ಜನರು ಥಿಯೇಟರ್‌ಗೆ ಬರುತ್ತಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

More from Filmibeat

English summary
Pushkara Mallikarjunaiah shared screenshoot of a person asking him to send Avatar Purusha 2 movie Link:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X