"ಅಂಬಿ ಅಣ್ಣನನ್ನು ತುಚ್ಚವಾಗಿ ಕಂಡ ವ್ಯಕ್ತಿಗೆ ಬೆಂಬಲ ಕೊಡಲು ಮನಸ್ಸು ಹೇಗೆ ಬಂತು?"; ಸುಮಲತಾಗೆ ಪ್ರಶ್ನೆ!
2024 ಲೋಕಸಭೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ದಿನಕ್ಕೊಂದು ಬೆಳವಣಿಗಳಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಹೇಳಿದಂತೆ ಸುಮಲತಾ ಇಂದು (ಏಪ್ರಿಲ್ 5) ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಚೆ ಪಟ್ಟಿದ್ದರು. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತಿ ಮಾಡಿಕೊಂಡಿದ್ದರಿಂದ ಬೇಸತ್ತು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದರು.
ಸುಮಲತಾ ಅಂಬರೀಶ್ ಗೆಲುವಿಗೆ ಮಂಡ್ಯದ ಜನತೆಯೇ ಪಣ ತೊಟ್ಟು ನಿಂತಿದ್ದರು. ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಜೋಡೆತ್ತುಗಳಂತೆ ನಿಂತು ಪ್ರಚಾರ ಮಾಡಿದ್ದರು. ಆ ವೇಳೆ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಸ್ಪರ್ಧೆ ಮಾಡಿದ್ದರು. ಆಗ ಎಚ್ ಡಿ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದರೂ, ಮಗನನ್ನು ಮಂಡ್ಯದಿಂದ ಗೆಲ್ಲಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ.

ನಿಖಿಲ್ ವಿರುದ್ಧ ಸುಮಲತಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದರಿಂದ ಅಸಮಧಾನ ಬುಗಿಲೆದ್ದಿತ್ತು. ಎಚ್‌ಡಿ ಕುಮಾರಸ್ವಾಮಿ ಪ್ರಚಾರದ ವೇಳೆ ಸುಮಲತಾ ಅಂಬರೀಶ್ ವಿರುದ್ಧ ಅಸಮಧಾನ ಹೊರಹಾಕಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅಂದು ಮುಖ್ಯಮಂತ್ರಿಯಾಗಿದ್ದ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈಗ ಸುಮಲತಾ ಚುನಾವಣಾ ಕಣದಿಂದ ಹಿಂದೆ ಸರಿದು ಎಚ್‌ಡಿಕೆ ಬೆಂಬಲ ಕೊಡುತ್ತಿರುವ ಬೆನ್ನಲ್ಲೇ ದೊಡ್ಡಣ್ಣ ಅವರ ವಿಡಿಯೋವನ್ನು ಇಟ್ಟುಕೊಂಡು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ದೊಡ್ಡಣ್ಣ- ಎಚ್‌ಡಿಕೆ ಭೇಟಿ
ಕನ್ನಡದ ಚಿತ್ರರಂಗ ಹಿರಿಯ ನಟ ದೊಡ್ಡಣ್ಣ ಅಂದು ಅಂಬರೀಶ್ ಅವರ ಸ್ಮಾರಕ ನಿರ್ಮಾಣದ ಬಗ್ಗೆ ಮಾತಾಡುವುದಕ್ಕೆ ಅವರ ಕಚೇರಿಗೆ ತೆರಳಿದ್ದರು. ಮಗನ ವಿರುದ್ಧ ಸುಮಲತಾ ಸ್ಪರ್ಧೆಗಿಳಿದಿದ್ದರಿಂದ ಕುಮಾರಸ್ವಾಮಿ ಸಹಜವಾಗಿ ಕೋಪಗೊಂಡಿದ್ದರು. ಹೀಗಾಗಿ ದೊಡ್ಡಣ್ಣ ಸ್ಮಾರಕ ನಿರ್ಮಾಣದ ಬೇಡಿಕೆ ಹಿಡಿದು ಕಚೇರಿಗೆ ತೆರಳಿದಾಗ ಎಚ್‌ಡಿಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಅದನ್ನು ಪತ್ರಿಕಾಗೋಷ್ಠಿಯಲ್ಲಿ ದೊಡ್ಡಣ್ಣ ಬಹಿರಂಗ ಪಡಿಸಿದ್ದರು.
ದೊಡ್ಡಣ್ಣ ಕೊಟ್ಟಿದ್ದ ಹೇಳಿಕೆ ಏನು?
ಐದು ವರ್ಷಗಳ ಹಿಂದೆ ದೊಡ್ಡ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪ ಹೋಗಿತ್ತು. "ಚೀಫ್ ಮಿನಿಸ್ಟರ್ ಕುಮಾರಣ್ಣನನ್ನು ನೋಡುವುದಕ್ಕೆ ಕೃಷ್ಣಾಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಕೆಲವು ರಾಜಕೀಯ ಮುಖಂಡರುಗಳು ಹಾಗೂ ಅವರು ಕೂತಿದ್ದರು. ನಮ್ಮನ್ನು ಸುಮಾರು ಒಂದೂವರೆ ಎರಡು ಗಂಟೆಗಳ ಕಾಲ ಕಾಯಿಸಿ ಒಳಗೆ ಬಿಟ್ಟರು. ಆ ಸ್ಮಾರಕದ ಲೆಟರ್ ಕೊಟ್ಟಿದ ತಕ್ಷಣವೇ ತುಂಬಾನೇ ಅಸಹನೆ ಆಯ್ತು. ನನ್ನ ಮುಖವನ್ನೊಮ್ಮೆ ಹೀಗೆ ನೋಡಿದ್ರು. ಇವನು ಏನು ಮಾಡಿದ್ದಾನೆ ಅಂತ ಸ್ಮಾರಕ ಮಾಡಬೇಕ್ರಿ ಅಂತ ಪೇಪರ್ ಅನ್ನು ಎಸೆದರು. ನಾನು ಏನೂ ಮಾತನಾಡಲಿಲ್ಲ ಕೈ ಕಟ್ಟಿಕೊಂಡು ನಿಂತಿದ್ದೆ. ಮೂರು ನಿಮಿಷ ಆದ್ಮೇಲೆ ಅವರು ಬೇರೆ ಯಾರೊಂದಿಗೂ ಮಾತಾಡಲಿಲ್ಲ. ನಾನು ಆ ಲೆಟರ್ ತೆಗೆದುಕೊಂಡು ಜೇಬಿಗಿಟ್ಟುಕೊಂಡು ಆಚೆ ಬಂದೆ" ಎಂದು ದೊಡ್ಡಣ್ಣ ಹೇಳಿಕೆ ಕೊಟ್ಟಿದ್ದರು. ಇದೇ ವಿಡಿಯೋವನ್ನಿಟ್ಟುಕೊಂಡು ಸುಮಲತಾಗೆ ಪ್ರಶ್ನೆ ಮಾಡುತ್ತಿದ್ದಾರೆ.
ಬೆಂಬಲಿಸೋ ಮನಸ್ಸು ಹೇಗೆ ಬಂತು?
ದೊಡ್ಡಣ್ಣ ಈ ವಿಡಿಯೋವನ್ನು ಇಟ್ಟುಕೊಂಡು ಸುಮಲತಾಗೆ ನೆಟ್ಟಿಗರು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. "ಅಂಬಿ ಅಣ್ಣನವರನ್ನು ಹೇಗೆ ತುಚ್ಚವಾಗಿ ಕಂಡ, ಅವಮಾನಿಸಿದ ವ್ಯಕ್ತಿಗೆ ಬೆಂಬಲ ಕೊಡಲು ಹೇಗೆ ಮನಸು ಬಂತು ಮೇಡಂ?" ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ದೊಡ್ಡಣ್ಣ ಅವರ ವಿಡಿಯೋವನ್ನು ಟ್ವೀಟ್ (ಎಕ್ಸ್) ಮಾಡಿದ್ದಾರೆ.
ಬಿಜೆಪಿ ಸೇರ್ಪಡೆ ಇಷ್ಟ- ಕಷ್ಟ!
ಇಂದು (ಏಪ್ರಿಲ್ 5) ಸುಮಲತಾ ಅಧಿಕೃತವಾಗಿ ಬಿಜೆಪಿಗ ಸೇರ್ಪಡೆಯಾಗಿದ್ದಾರೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹರ್ಷ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಟೀಕೆ ಮಾಡಿದ್ದಾರೆ. "ಸ್ವಾಭಿಮಾನ ಎನ್ನುವುದು ಬರಿ ಮಾತು ಅಷ್ಟೇ. ನಮ್ಮ ಅಂಬಿ ಅವರ ಸ್ವಾಭಿಮಾನವೇ ಬೇರೆ.. ಕಳೆದ ಬಾರಿ ನಿಮ್ಮ ಗೆಲುವಿಗೆ ಕಾರಣ ಯಾರು ಅಂತ ನೋಡದೇ ಮಂಡ್ಯ ಜನತೆಯನ್ನು ಇನ್ನೊಬ್ಬರ ಕಪಿಮುಷ್ಠಿಗೆ ನೀಡಲು ಹೊರಟಿದ್ದೀರಿ" ಎಂದು ನೆಟ್ಟಿಗರು ಟೀಕಿಸಿದ್ದಾರೆ.


Click it and Unblock the Notifications











