"ರೀಲ್ಸ್‌ಗಾಗಿ ಗಂಡನನ್ನೇ ಬಿಟ್ಟ ಮಹಾನ್ ತ್ಯಾಗಿ"; ನಿವೇದಿತಾ ನಿಂದಿಸಿದ ನೆಟ್ಟಿಗರು!
ಸ್ಯಾಂಡಲ್‌ವುಡ್‌ನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿಚ್ಚೇದನ ಪ್ರಕರಣ ಶಾಕ್ ಕೊಟ್ಟಿತ್ತು. ಅದರಲ್ಲೂ ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ಈ ಜೋಡಿ ಹೀಗೆ ದಿಢೀರನೇ ಡಿವೋರ್ಸ್‌ಗೆ ಮುಂದಾಗಿದ್ದು ಅವರನ್ನು ಹಿಂಬಾಲಿಸುತ್ತಿದ್ದ ನೆಟ್ಟಿಗರ ತಲೆಕೆಡಿಸಿತ್ತು. ಈ ಸುದ್ದಿ ಹೊರಬಿದ್ದಲ್ಲಿಂದ ನಿವೇದಿತಾ ಗೌಡ ಟಾರ್ಗೆಟ್ ಆಗಿದ್ದೇ ಹೆಚ್ಚು.
ನಿವೇದಿತಾ ಗೌಡ-ಚಂದನ್ ಶೆಟ್ಟಿ ಡಿವೋರ್ಸ್ ಸುದ್ದಿ ಹೊರಬೀಳುತ್ತಿದ್ದಂತೆ ಕೆಲವು ಊಹಾ-ಪೋಹಗಳು ಹಬ್ಬಿದ್ದವು. ಆ ವೇಳೆ ಕೂಡ ನಿವೇದಿತಾ ಗೌಡರನ್ನೇ ಟಾರ್ಗೆಟ್ ಮಾಡಲಾಗಿತ್ತು. ಇವರಿಬ್ಬರ ವಿಚ್ಛೇದನದಲ್ಲಿ ನಟ-ನಿರೂಪಕ ಸೃಜನ್ ಲೋಕೇಶ್ ಹೆಸರನ್ನು ತಳುಕು ಹಾಕಲಾಗಿತ್ತು. ಇದ್ಯಾಕೋ ಬೇರೆಯದ್ದೇ ದಾರಿ ಹಿಡಿಯುತ್ತಿದೆ ಅನ್ನುವಾಗಲೇ ಇಬ್ಬರೂ ಒಟ್ಟಿಗೆ ಬಂದು ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ದರು. ಹೀಗಿದ್ದರೂ ಕಾಮೆಂಟ್‌ಗಳೇನು ಕಮ್ಮಿಯಾಗಿಲ್ಲ.

ಆದರೆ, ವಿಚ್ಛೇದನದ ಬಳಿಕ ನಿವೇದಿತಾ ಗೌಡ ಈ ಕಾಮೆಂಟ್‌ಗಳಿಗೆ ತಲೆ ಕೆಡಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ಈ ರೀಲ್ಸ್‌ಗೆ ಕೆಲವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೇ ಮತ್ತೆ ಕೆಲವರು ಅದೇ ಬ್ಯಾಕ್ ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಿವೇದಿತಾ ವಿಡಿಯೋ ಒಂದನ್ನು ಪೋಸ್ಟ್ ಮಾಡಿ "ನಿಮ್ಮ ಮಾತುಗಳು ಯಾರಿಗಾದರೂ ನೋವುಂಟು ಮಾಡಿದೆಯಾ?" ಎಂದು ಪ್ರಶ್ನೆ ಮಾಡಿದ್ದರು. ಆದರೆ, ಅದಕ್ಕೆ ಉತ್ತರ ಕೊಡುವ ಬದಲು ಚಂದನ್ ಶೆಟ್ಟಿಗೆ ಮೋಸ ಮಾಡಿದ್ದೀಯಾ ಅಂತಲೇ ಕಾಮೆಂಟ್ ಮಾಡುತ್ತಿದ್ದಾರೆ.
ನಿವೇದಿತಾ ಗೌಡ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಜೊತೆ ಪೇಯ್ಡ್ ಪ್ರಮೋಷನ್ ಕೂಡ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ನೀಲಿ ಬಣ್ಣ ಟಾಪ್ ಧರಿಸಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಅದರ ಜೊತೆಗೆ " ನೀವು ಎಂದಾದರೂ ನಿಮ್ಮ ಮಾತುಗಳಿಂದ ಬೇರೆಯವರನ್ನು ನೋಯಿಸಿದ್ದೀರಾ?" ಎಂದು ನೆಟ್ಟಿಗರಿಗೆ ಪ್ರಶ್ನೆ ಮಾಡಿದ್ದರು. ಅದಕ್ಕೇನು ಉತ್ತರ ಬರಬಹುದು? ಅನ್ನುವ ನಿರೀಕ್ಷೆಯಲ್ಲಿಯೂ ಇದ್ದರು. ಆದರೆ, ಸಿಕ್ಕಿದ್ದು ಮತ್ತದೇ ನಿಂದನೆಯ ಕಾಮೆಂಟ್‌ಗಳು.
ಈ ಪೋಸ್ಟ್‌ಗೆ ನೆಟ್ಟಿಗರು ಮನಸ್ಸಿಗೆ ಬಂದಂತೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಚಂದನ್ ಶೆಟ್ಟಿಯಿಂದ ಬೇರೆಯಾಗಿದ್ದಕ್ಕೆ ಕಿಡಿಕಾರಿದ್ದಾರೆ. ರೀಲ್ಸ್ ಮಾಡುವುದಕ್ಕಾಗಿಯೇ ಚಂದನ್ ಶೆಟ್ಟಿಯಿಂದ ದೂರ ಆಗಿದ್ದೀಯಾ ಅನ್ನೋ ಅರ್ಥದಲ್ಲಿಯೇ ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವು ಕಾಮೆಂಟ್‌ಗಳಂತೂ ನಿವೇದಿತಾ ಗೌಡರನ್ನು ನೇರವಾಗಿಯೇ ಟಾರ್ಗೆಟ್ ಮಾಡಿದ್ದಾರೆ.
ನೆಟ್ಟಿಗರೊಬ್ಬರು ನಿವೇದಿತಾ ಗೌಡಗೆ "ಮದುವೆ ಆಗಿದ್ರೆ ಊರಿನೋರಿಗೆಲ್ಲ ಕಾಸಿಲ್ಲದೆ ಈ ತರ ಪಿಕ್ಚರ್ ತೋರಿಸೋಕೆ ಆಗೋಲ್ಲ ಅಂತ, ನಿನ್ ಅಭಿಮಾನಿಗಳಿಗೋಸ್ಕರ ಡೈವೋರ್ಸ್ ತಗೊಂಡೆ ಅಲ್ವಾ" ಎಂದು ಕಾಮೆಂಟ್ ಮಾಡಿದ್ದಾರೆ. "ಈ ಶೋಕಿ ಮಾಡೋಕೆ ಅಂತಾನೆ ಡೈವೋರ್ಸ್ ಕೊಟ್ಟಿದಿಯ ನೀವಿ" ಅಂತ ಇನ್ನೊಬ್ಬರು ನಿವೇದಿತಾ ವಿರುದ್ಧ ಕಿಡಿಕಾರಿದ್ದಾರೆ.
ಮತ್ತೊಬ್ಬರು "ರೀಲ್ಸ್ ಗಾಗಿ ಗಂಡನನ್ನೇ ಬಿಟ್ಟ ಮಹಾನ್ ತ್ಯಾಗಿ" ಎಂದು ಬಿರುದು ಬೇರೆ ಕೊಟ್ಟಿದ್ದಾರೆ. ಇನ್ನೊಬ್ಬರು "ಮದುವೇ ಆಗೋತನಕ ಹೇಗಾದ್ರೂ ಬದುಕಿ ಮದುವೆ ಆದಮೇಲೆ ತುಂಬಾ ಮಾರ್ಯದೆಯಾಗಿ ಬದುಕಿ. ಯಾಕೆಂದ್ರೆ ನಿಮ್ಮ ಬದುಕಿನ ಜೊತೆಗೆ ನಿಮ್ಮ ತಂದೆ ತಾಯಿ ಅತ್ತೆ ಮಾವ ಸಹೋದರ ಸಹೋದರಿ ಅತ್ತಿಗೆ ಮೈದುನ ಅವರೆಲ್ಲರೂ ತಲೆ ತಗ್ಗಿಸುವ ಕಾರ್ಯವಾಗಬಾರದು" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ ಮತ್ತೆ ಕೆಲವರು "ಕಾಮೆಂಟ್ ಮಾಡುವ ಮುನ್ನ ಶೆಡ್ ನೆನಪು ಮಾಡಿಕೊಳ್ಳಿ" ಎಂದು ಸಲಹೆಯನ್ನೂ ನೀಡಿದ್ದಾರೆ.


Click it and Unblock the Notifications











