Toxic-Varanasi-Dhurandhar:'ಟಾಕ್ಸಿಕ್' ಟೀಸರ್ ಮುಂದೆ 'ವಾರಾಣಾಸಿ'ನೂ ಲೆಕ್ಕಕ್ಕಿಲ್ಲ; 'ಧುರಂಧರ್' ಯಾವ ಲೆಕ್ಕ?

'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಬಳಿಕ ರಿಲೀಸ್ ಆಗುತ್ತಿರುವ ಯಶ್ ನಟನೆಯ ಸಿನಿಮಾ 'ಟಾಕ್ಸಿಕ್'. ಯಶ್‌ ಬರ್ತ್‌ಡೇ ವರೆಗೂ ಚಿಕ್ಕದೊಂದು ತುಣುಕು ಬಿಟ್ಟರೆ, ಸಿನಿಮಾದ ರಹಸ್ಯವನ್ನು ಬಿಟ್ಟುಕೊಟ್ಟಿರಲೇ ಇಲ್ಲ. ಆದ್ರೀಗ ಎಲ್ಲಿ ನೋಡಿದರೂ 'ಟಾಕ್ಸಿಕ್' ಟೀಸರ್ ಬಗ್ಗೆನೇ ಚರ್ಚೆಯಾಗುತ್ತಿದೆ. ಕೆಲವರು ಈ ಟೀಸರ್‌ನ ದೃಶ್ಯವೊಂದನ್ನು ಟೀಕಿಸುತ್ತಿದ್ದಾರೆ. ಕೆಲವು ಮನಸಾರೆ ಮೆಚ್ಚಿಕೊಂಡಿದ್ದಾರೆ.

'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ದೂರುಗಳು ದಾಖಲಾಗುತ್ತಿವೆ. ಯಶ್ ಪಾತ್ರವನ್ನು ಪರಿಚಯಿಸುವ ಒಂದು ಚಿಕ್ಕ ಟೀಸರ್ ಈ ಮಟ್ಟಿಗೆ ಗದ್ದಲ ಎಬ್ಬಿಸಿದೆ. ಇನ್ನು ಸಿನಿಮಾ ಹೇಗಿರುತ್ತೋ? ಅನ್ನೋ ಚಡಪಡಿಕೆ ದುಪ್ಪಟ್ಟಾಗಿದೆ. ಇನ್ನು ಟೀಕೆಗಳು ಎಷ್ಟೇ ಬಂದರೂ 'ಟಾಕ್ಸಿಕ್' ಟೀಸರ್‌ ಯೂಟ್ಯೂಬ್‌ನಲ್ಲಿ ಹಳೆಯ ದಾಖಲೆಗಳನ್ನೆಲ್ಲ ಕಿತ್ತಾಕುತ್ತಾ ಮುಂದೆ ಸಾಗುತ್ತಲೇ ಇದೆ.

Netizens comparing Yash Toxic teaser and SS Rajamouli Mahesh Babu Varanasi First glimpse views

ಇನ್ನು ಮಾರ್ಚ್ ತಿಂಗಳಲ್ಲಿ 'ಟಾಕ್ಸಿಕ್' ಜಪ ಮಾಡುತ್ತಿದ್ದವರಿಗೆ 'ಧುರಂಧರ್ 2' ಕೂಡ ಅಖಾಡಕ್ಕೆ ಇಳಿಯುತ್ತಿದೆ. ಅದರಲ್ಲೂ 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆಯನ್ನು 'ಧುರಂಧರ್' ಬ್ರೇಕ್ ಮಾಡಿದ ಮೇಲಂತೂ 'ಟಾಕ್ಸಿಕ್' ಕಥೆಯೇನು? ಅಂತ ಟ್ರೋಲ್ ಮಾಡಿದವರು ಅದೆಷ್ಟೋ ಮಂದಿ. ಅಂತಹವರಿಗೆ ಟೀಸರ್ ರಿಲೀಸ್ ಆದ್ಮೇಲೆ ರಾಜಮೌಳಿಯ 'ವಾರಾಣಾಸಿ' ಗ್ಲಿಂಪ್ಸ್‌ಗೆ ಸಿಕ್ಕಿದ ವೀವ್ಸ್ ಅನ್ನು ಹೋಲಿಕೆ ಮಾಡಿ ಟಕ್ಕರ್ ಕೊಡುತ್ತಿದ್ದಾರೆ. ಅಷ್ಟಕ್ಕೂ 'ಟಾಕ್ಸಿಕ್' ಟೀಸರ್, 'ವಾರಾಣಾಸಿ' ಗ್ಲಿಂಪ್ಸ್ ಎರಡರಲ್ಲಿ ಯಾವುದಕ್ಕೆ ಎಷ್ಟು ವೀವ್ಸ್ ಸಿಕ್ಕಿದೆ? 'ಟಾಕ್ಸಿಕ್' ಹಾಗೂ 'ಧುರಂಧರ್' ಪೈಪೋಟಿಯಲ್ಲಿ ಗೆಲ್ಲೋದ್ಯಾವುದು?

'ಟಾಕ್ಸಿಕ್' ಟೀಸರ್‌ಗೆ ಎಷ್ಟು ವೀವ್ಸ್?

ಯಶ್ ಸಿನಿಮಾ ಹೆಚ್ಚು ಕಡಿಮೆ ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಇದೇ ವರ್ಷ ಮಾರ್ಕ್ 19ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಯಶ್ ಬರ್ತ್‌ಡೇಗೆ 'ಟಾಕ್ಸಿಕ್' ಟೀಸರ್ ರಿಲೀಸ್ ಆಗಿತ್ತು. ಸ್ಯಾಕ್ನಿಲ್ಕ್ ಪ್ರಕಾರ, ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್, ಇನ್‌ಸ್ಟಾಗ್ರಾಂ, ಟ್ವಿಟರ್/ಎಕ್ಸ್ ಹಾಗೂ ಫೇಸ್‌ಬುಕ್ ಅಂತಹ ಸೋಶಿಯಲ್ ಮೀಡಿಯಾಗಳಿಂದ ಸುಮಾರು 200 ಮಿಲಿಯನ್‌ಗೂ ಅಧಿಕ ವೀವ್ಸ್ ಸಿಕ್ಕಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲೆ ಎಂದು ಹೇಳಲಾಗುತ್ತಿದೆ.

'ಟಾಕ್ಸಿಕ್' Vs 'ವಾರಾಣಾಸಿ'

ಯಶ್ 'ಟಾಕ್ಸಿಕ್' ಟೀಸರ್ ದೇಶಾದ್ಯಂತ ಚರ್ಚೆಗೆ ಒಳಪಟ್ಟಿದೆ. ಟೀಕೆಗಳಿಗೆ ಗುರಿಯಾಗಿದ್ದರೂ, ಬಿಡುಗಡೆಯಾದ ಐದು ದಿನಗಳಲ್ಲಿ ಟೀಸರ್ ಯೂಟ್ಯೂಬ್‌ನಲ್ಲಿ 8.6 ಕೋಟಿ ವೀವ್ಸ್ ಪಡೆದುಕೊಂಡಿದೆ. ಇದನ್ನೇ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ 'ವಾರಾಣಾಸಿ'ಗೆ ಹೋಲಿಕೆ ಮಾಡಲಾಗುತ್ತಿದೆ. ರಾಜಮೌಳಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾರಂತಹ ಸ್ಟಾರ್‌ಗಳಿರುವ 'ವಾರಾಣಾಸಿ' ಗ್ಲಿಂಪ್ಸ್‌ ಬಿಡುಗಡೆಯಾಗಿ ಒಂದು ತಿಂಗಳ ಬಳಿಕ ಯೂಟ್ಯೂಬ್‌ನಲ್ಲಿ 25 ಮಿಲಿಯನ್ ವೀವ್ಸ್ ಪಡೆಯಲು ಸಾಧ್ಯವಾಗಿದೆ. ಅದೇ 'ಟಾಕ್ಸಿಕ್' ಕೇವಲ 5 ದಿನಗಳಲ್ಲಿ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದುಕೊಂಡಿದೆ ಎಂದು ಹೇಳುತ್ತಿದ್ದಾರೆ. ಇದನ್ನೇ ಇಟ್ಟುಕೊಂಡು 'ಧುರಂಧರ್‌'ಗೆ ಟಾಂಗ್ ಕೊಡುತ್ತಿದ್ದಾರೆ.

Netizens comparing Yash Toxic teaser and SS Rajamouli Mahesh Babu Varanasi First glimpse views

'ಧುರಂಧರ್' ಯಾವ ಲೆಕ್ಕ?

'ಟಾಕ್ಸಿಕ್'ನ ಒಂದು ಟೀಸರ್ ಇಡೀ ದೇಶವೇ ಚರ್ಚೆ ಮಾಡುವಂತೆ ಮಾಡಿದೆ. ಹೀಗಿರುವಾಗ ಇನ್ನೂ ಟ್ರೈಲರ್, ಸಾಂಗ್ಸ್ ಯಾವ ಮಟ್ಟಿಗೆ ಸದ್ದು ಮಾಡುತ್ತವೋ ಗೊತ್ತಿಲ್ಲ. ಹೀಗಿರುವಾಗ ರಾಕಿ ಬಾಯ್ 'ಟಾಕ್ಸಿಕ್' ಮುಂದೆ ರಣ್‌ವೀರ್ ಸಿಂಗ್ 'ಧುರಂಧರ್' ನಿಲ್ಲುತ್ತಾ? ಎಂದು ಕೆಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ 'ಧುರಂಧರ್ 2' ಕಾಂಪಿಟೇಷನ್‌ಗೆ ಬರುತ್ತಾ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ.

'ಟಾಕ್ಸಿಕ್' ಕ್ರೇಜ್ ನಿರ್ಣಾಯಕ!

'ಕೆಜಿಎಫ್ 2' ಬಿಡುಗಡೆಗೂ ಮುನ್ನ ರಾಕಿ ಭಾಯ್ ಹವಾ ದೇಶದೆಲ್ಲೆಡೆ ಮುಟ್ಟಿತ್ತು. ಹಾಗೇ 'ಟಾಕ್ಸಿಕ್'ನ ರಾಯನೂ ಅದೇ ಮೋಡಿ ಮಾಡಿದರೆ, 'ಧುರಂಧರ್' ಅಲ್ಲ, ಯಾವ ಸ್ಟಾರ್ ಸಿನಿಮಾ ಬಂದರೂ ಅಷ್ಟೇ. ಆದರೂ, 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದ್ದು ನೋಡಿದರೆ 'ಟಾಕ್ಸಿಕ್' ಎದುರು ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ.

More from Filmibeat

English summary
Netizens comparing Yash Toxic teaser and SS Rajamouli, Mahesh Babu Varanasi First g.limpse views
Read more about: yash toxic rajamouli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X