ವಿಚ್ಛೇದನದ ಬಗ್ಗೆ ಚಂದನ್‌ ಹೇಳಿಕೆ; "ಹೆಣ್ಣನ್ನು ಅಯ್ಯೋ ಅನಿಸಿದ್ರೆ ಒಳ್ಳೆದು ಆಗಲ್ಲ" ಹೀಗಂದಿದ್ಯಾಕೆ ನೆಟ್ಟಿಗರು?

ಕಳೆದ ಕೆಲವು ದಿನಗಳಿಂದ ಸಾಲು ಸಾಲು ವಿವಾದಗಳಲ್ಲಿ ಸ್ಯಾಂಡಲ್‌ವುಡ್‌ ಸದ್ದು ಮಾಡುತ್ತಿದೆ. ಅದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದಿಂದಲೇ ಶುರುವಾಗಿತ್ತು. ಬ್ಯಾಕ್ ಟು ಬ್ಯಾಕ್ ವಿವಾದಗಳು ಹುಟ್ಟಿಕೊಂಡಿದ್ದರಿಂದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಚೇದನ ಹೆಚ್ಚು ಚರ್ಚೆಯಾಗಲಿಲ್ಲ.

ಆದ್ರೀಗ ಚಂದನ್ ಶೆಟ್ಟಿ ಕೊಡುತ್ತಿರುವ ಸಂದರ್ಶನಗಳು ನೆಟ್ಟಿಗರಿಗೆ ಯಾಕೋ ಸರಿ ಅನಿಸುತ್ತಿಲ್ಲ. ಇತ್ತೀಚೆಗೆ ಚಂದನ್ ಶೆಟ್ಟಿ ವಿಚ್ಛೇದನದ ಬಗ್ಗೆ ಫಿಲ್ಮಿ ಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ತಮ್ಮ ವಿಚ್ಛೇದನದ ಕುರಿತಾಗಿ ಕೆಲವರು ಹೇಳಿಕೆಗಳನ್ನು ಕೊಟ್ಟಿದ್ದರು. ಅದ್ಯಾಕೋ ನೆಟ್ಟಿಗರಿಗೆ ಸರಿಯಿದೆ ಅಂತ ಅನಿಸುತ್ತಿಲ್ಲ.

Netizens dissapontment on Chandan Shetty s comments on divorce with Niveditha Gowda

ಚಂದನ್ ಶೆಟ್ಟಿ ನೀಡಿದ ಈ ಸಂದರ್ಶನದಲ್ಲಿ "ಎಲ್ಲರಿಗೂ ಇರುವಂತೆ ಚೆನ್ನಾಗಿರುವ ಹುಡುಗಿ ಜೊತೆ ಮದ್ವೆಯಾಗುವ ಕನಸು ನನಗೂ ಇತ್ತು. ಅದೇ ರೀತಿ ಚೆನ್ನಾಗಿರುವ ಹುಡುಗಿಯೂ ಸಿಕ್ಕಿದ್ದರು. ಆದರೆ ಕಾರಣಾಂತರದಿಂದ ಹೀಗಾಯ್ತು" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಹಾಗೇ " ಲವ್ ಮಾಡುವ ಸಂದರ್ಭದಲ್ಲಿ ಇಬ್ಬರೂ ಕೂಡ ಬೇರೆ ಬೇರೆಯಾಗಿಯೇ ಇರುತ್ತಾರೆ. ಆಗ ಪ್ರೀತಿಯಲ್ಲಿ ಬಿದ್ದಿರುತ್ತಾರೆ ಹೊರತು ಮದುವೆಯಾಗಿರುವುದಿಲ್ಲ. ಆದರೆ ಲವ್ ಅನ್ನೋದೆ ಬೇರೆ. ಮದುವೆಯೇ ಬೇರೆ" ಎಂದೂ ಚಂದನ್ ಶೆಟ್ಟಿ ಹೇಳಿದ್ದರು.

ಇದೇ ಸಂದರ್ಶನದಲ್ಲಿ "ಕೆಲವರು ಲವ್‌ ಮಾಡುವಾಗ ಒಬ್ಬರ ಬಗ್ಗೆ ಒಬ್ಬರಿಗೆ ಗೊತ್ತಿರ್ಲಿಲ್ವಾ ಅಂದುಕೊಳ್ಳಬಹುದು. ಆದರೆ, ಮದುವೆಯಾಗಿ ಒಂದೇ ರೂಂನಲ್ಲಿ ಸಂಸಾರ ಮಾಡುತ್ತಾಲ್ಲ ಅದೇ ಬೇರೆ. ಅದು ಮದುವೆಯಾದವರಿಗೆ ಮಾತ್ರ ಗೊತ್ತಿರುತ್ತೆ" ಎಂದು ಹೇಳಿದ್ದರು. ಈ ಹೇಳಿಕೆ ನೆಟ್ಟಿಗರಿಗೆ ಯಾಕೆ ಸರಿಯಿದೆ ಅಂತ ಅನಿಸಿಲ್ಲ. ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ನೆಟ್ಟಿಗರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ "ಇಬ್ರುಗೂ ಒಳ್ಳೆ ತರಹೇವಾರಿ ಫಿಗರ್‌ಗಳು ಸಿಗುತ್ತೆ. ಮದುವೆ ಅವಶ್ಯಕತೆ ಇಲ್ಲ, ಮಜಾ ಮಾಡಿ, ಲೈಫ್ ಇಸ್ ಶಾರ್ಟ್" ಎಂದಿದ್ದಾರೆ. ಹಾಗೇ ಮತ್ತೊಬ್ಬರು "ಒಂದು ಹೆಣ್ಣನ್ನು ಅಯ್ಯೋ ಅನಿಸಿದ್ರೆ ಯಾವತ್ತೂ ಒಳ್ಳೆಯದು ಆಗಲ್ಲ. ತಪ್ಪು ಯಾರದ್ದು ಅಂತ ಜನಕ್ಕೆ ಗೊತ್ತಿಲ್ಲ. ಅವಳು ಏನಾದ್ರೂ ಸಾಧನೆ ಮಾಡುತ್ತೀನಿ ಅಂದ್ರೆ, ನೀವು ಸಪೋರ್ಟ್ ಮಾಡಿ ಜೊತೆಗೆ ಇರಬೇಕಿತ್ತು. ನೀವು ಮಾಡಿದ್ದು ತಪ್ಪೇ ಸರ್" ಎಂದು ಟೀಕಿಸಿದ್ದಾರೆ.

Netizens dissapontment on Chandan Shetty s comments on divorce with Niveditha Gowda

ಇನ್ನೊಬ್ಬರು "ಮದುವೆ ಆದ ಹೆಣ್ಣು ಗಂಡನನ್ನು ಬಿಟ್ಟು ಸಾಧನೆ ಮಾಡುವಂತದ್ದು ಜೀವನದಲ್ಲಿ ಏನು ಇಲ್ಲ. ಹಾಗೆ ಗಂಡ ಕೂಡ, ನಾವು ಜೀವನದಲ್ಲಿ ವಯಸ್ಸಿಗೆ ಬಂದ ನಂತರ ಒಳ್ಳೆಯ ಗಂಡ, ಒಳ್ಳೆಯ ಹೆಂಡ್ತಿ ಬೇಕು ಅಂತಲೇ ಪ್ರತಿಯೊಬ್ಬರ ಮನಸ್ಸಿನಲ್ಲೂ ಇರೋದು. ಆದರೆ, ನೀವು ಏನ್ರೋ ಕೋತಿಗಳ ತರ ಮಾಡಿದ್ದು. ಬದುಕು ಕಟ್ಟೋಕ್ಕೋಸ್ಕರ ಇಬ್ಬರು ಬೇರೆ ಬೇರೆ ಆಗೋದಂತೆ..ಛಿ.. ಥೂ.. ಅದು ಹೇಗೆ ಸಮಾಜಕ್ಕೆ ಮುಖ ತೋರಿಸ್ತೀರೋ" ಅಂತ ಕಿಡಿಕಾರಿದ್ದಾರೆ.

ಮತ್ತೊಬ್ಬರಂತೂ ಜಾತಕ ಸರಿ ಹೋಗಲ್ಲ ಅಂದರೂ ಮತ್ಯಾಕೆ ಮದುವೆ ಆದ್ರಿ ಅಂತ ಪ್ರಶ್ನೆ ಮಾಡಿದ್ದಾರೆ. "ಅಲ್ಲಯ್ಯಾ. ಊರೆಲ್ಲಾ ಅದು ನಿನಗೆ ಸರಿಹೋಗದ ಜಾತಕ ಅಂದರೂ ತಂಗಿ ಅಂತಿದ್ದವಳನ್ನು ಮದುವೆಯಾಗಿ ಈಗ ವೇದಾಂತ ಶುರುಮಾಡಿದೆಯಾ? ವೇದಾಂತ ಅನುಭವದಿಂದ ಬರಲ್ಲ. ಅನುಭಾವದಿಂದ ಬರುತ್ತೆ. ಅನುಭವ-ಅನುಭಾವದ ಅರ್ಥ ನಿನ್ನಂಥ ಚೌಚೌ ಭಾಷೆಯ ಕುಕವಿಗಳಿಗೆ ಗೊತ್ತಾಗಲ್ಲ. ಸುಮ್ಮನೆ ಪೆಗ್ ಹಾಡು ಬರ್ಕೊಂಡಿರು." ಎಂದು ಕಿಡಿಕಾರಿದ್ದಾರೆ. ಹಾಗೇ ಇನ್ನೊಬ್ಬರು "ನಿಮ್ಮ ಜೋಡಿ ಬ್ಲಾಕ್ ಅಂಡ್ ವೈಟ್ ತರ ಇತ್ತು. ಅದಕ್ಕೆ ಅವಳು ದೂರಾದಳು." ಎಂದಿದ್ದಾರೆ.

ಇನ್ನ ಕೆಲವರು ಸಲಹೆಯನ್ನೂ ನೀಡಿದ್ದಾರೆ. "ಸೂಪರ್ ಚಂದನ್ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಾ. ನೀವು ಕೈಯಿಂದಾ ಊಟ ಮಾಡಿದ್ರೆ, ಪಾಪ ನಿವಿ ಸ್ಫೂನ್ ಇಲ್ಲದಿದ್ರೆ ಊಟನೇ ಬೇಡವೆನ್ನುತ್ತಿದ್ದರು. ಹುಡುಗಿ ಅವಳ್ ತಪ್ಪಲ್ಲ. ಅವಳು ಬೆಳದ ಪರಿಸರ ಹಾಗಿದೆ. ಅವಳು ಸಹ ಮುಗ್ದ ಹುಡುಗಿ. ಇಬ್ಬರು ಲವ್ ಅಂತಾ ಹೋಗದೆ ಫ್ರೆಂಡ್ ಆಗಿದ್ರೆ ತುಂಬಾ ಚೆನ್ನಾಗಿ ಇರ್ತಿತ್ತು." ಎಂದಿದ್ದಾರೆ.

More from Filmibeat

English summary
Netizens dissapontment on Chandan Shetty's comment;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X