"ಶಿವಣ್ಣ ಯಮಹಾ ಆರ್‌ಎಕ್ಸ್ 100 ಇದ್ದಂಗೆ.. ಅದೇ ಡಿಮ್ಯಾಂಡು..ಅದೇ ಸೌಂಡು"; ಅಬ್ಬಬ್ಬ ಭೈರತಿ ರಣಗಲ್ ಟ್ರೈಲರ್‌ಗೆ ಎಂಥೆಂತಾ ಕಾಮೆಂಟ್
ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ 'ಬಘೀರ' ಥಿಯೇಟರ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇನ್ನೊಂದು ಕಡೆ ಸೆಂಚುರಿ ಸ್ಟಾರ್ ಶಿವಣ್ಣನ 'ಭೈರತಿ ರಣಗಲ್' ಸೌಂಡು ಮಾಡುವುದಕ್ಕೆ ರೆಡಿಯಾಗಿದೆ. 'ಮಫ್ತಿ'ಯಲ್ಲಿ ಶಿವಣ್ಣನ ಪಾತ್ರ ನೋಡಿ ಫಿದಾ ಆದವರಿಗೆ 'ಭೈರತಿ ರಣಗಲ್' ಸಿನಿಮಾ ಕಿಕ್ ಕೊಡಬಹುದು. ಆ ಭರವಸೆಯನ್ನು ಟ್ರೈಲರ್ ನೋಡಿದ ಮೇಲೆ ಕಾಣಿಸುತ್ತಿದೆ.
'ಮಫ್ತಿ' ಸಿನಿಮಾದ ನಿರ್ದೇಶಕ ನರ್ತನ್ ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ 'ಭೈರತಿ ರಣಗಲ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. 'ಭೈರತಿ ರಣಗಲ್' ಹಿನ್ನೆಲೆಯನ್ನು ಪ್ರೇಕ್ಷಕರ ಮುಂದಿಡುವುದಕ್ಕೆ ಹೊರಟಿದ್ದಾರೆ. ಇನ್ನೇನು 10 ದಿನ ಬಾಕಿ ಉಳಿದಿದೆ. ಅಷ್ಟರಲ್ಲೇ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ. ಈ ಟ್ರೈಲರ್ ಶಿವಣ್ಣ ಫ್ಯಾನ್ಸ್‌ಗೆ ಕನ್ನಡ ಪ್ರೇಮಿಗಳಿಗೆ ಇಷ್ಟ ಆಗಿದೆ.

ಅದರಲ್ಲೂ ಟ್ರೈಲರ್ ನೋಡಿದ ಮೇಲೆ ನೆಟ್ಟಿಗರಂತೂ ವಿಭಿನ್ನವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಶಿವಣ್ಣ ಲುಕ್‌ಗೆ ಮತ್ತೆ ಫಿದಾ ಆಗಿದ್ದಾರೆ. ಅದರಲ್ಲೂ ಸೆಂಚುರಿ ಸ್ಟಾರ್ ಕಣ್ಣಿನ ನೋಟಕ್ಕಂತೂ ಕಳೆದೇ ಹೋಗಿದ್ದಾರೆ. ಟ್ರೈಲರ್ ನೋಡಿ ಸೋಶಿಯಲ್ ಮೀಡಿಯಾಗಳಲ್ಲಿ ತಮಾಷೆಯಲ್ಲಿ ಬ್ಯಾಕ್ ಟು ಬ್ಯಾಕ್ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಆ ಫನ್ನಿ ಕಾಮೆಂಟ್‌ಗಳು ಹೇಗಿವೆ ಅಂತ ತಿಳಿಯಲು ಮುಂದೆ ಓದಿ.
"ಶಿವಣ್ಣ ಯಮಹಾ ಆರ್‌ಎಕ್ಸ್ ಇದ್ದಂಗೆ"
'ಭೈರತಿ ರಣಗಲ್' ಸಿನಿಮಾದ ಟ್ರೈಲರ್ ಅನ್ನು ನೆಟ್ಟಿಗರು ಇಷ್ಟ ಪಟ್ಟಿದ್ದಾರೆ. ಅದೇ ಖುಷಿಯಲ್ಲಿ ಕ್ರಿಯೇಟಿವ್ ಆಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು ಶಿವಣ್ಣನನ್ನು ಹುಡುಗರು ಇಷ್ಟ ಪಡುವೆ ಕ್ರೇಜಿ ಬೈಕ್ ಯಮಹಾ ಆರ್‌ಎಕ್ಸ್ 100ಗೆ ಹೋಲಿಸಿದ್ದಾರೆ. "ಶಿವಣ್ಣ yamaha rx ಇದ್ದಂಗೆ. ಇಬ್ಬರು ಮಾರ್ಕೆಟ್‌ಗೆ ಹೆಚ್ಚುಕಮ್ಮಿ ಒಂದೇ ಸಲ ಬಂದವರು. ಇಬ್ಬರಿಗೂ ಇವಾಗ್ಲೂ ಅದೇ ಕ್ರೇಜು.. ಅದೇ ಡಿಮ್ಯಾಂಡು.. ಅದೇ ಪವರು.. ಅದೇ ಗತ್ತು.. sound ಅಂತು ಹೇಳೋದೆ ಬೇಡ.. ಲವ್ ಯು ಶಿವಣ್ಣ." ಎಂದು ಕಾಮೆಂಟ್ ಮಾಡಿದ್ದಾರೆ.
"ದೊಡ್ಮೆನೆ ಸಿಂಹ"
ಶಿವಣ್ಣ ಅಭಿಮಾನಿಗಳ ಕ್ರಿಯೇಟಿವಿಟಿನೇ ಬೇರೆ. ಶಿವಣ್ಣನ ಪ್ರತಿಯೊಂದು ಸಿನಿಮಾ ಟ್ರೈಲರ್, ಸಾಂಗ್ ಏನೇ ರಿಲೀಸ್ ಆದರೂ ಅದಕ್ಕೆ ಅವರದ್ದೇ ಆದ ಕಾಮೆಂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಪ್ರಾಸ ಬರುವಂತೆ ಪದಗಳನ್ನು ಹೆಣೆಯುತ್ತಾರೆ. 'ಭೈರತಿ ರಣಗಲ್' ಟ್ರೈಲರ್ ರಿಲೀಸ್ ಆದಾಗಲೂ ಹಾಗೇ ಒಂದು ಪ್ರಾಸ ಬರುವಂತೆ ಪದಗಳನ್ನು ಪೋಣಿಸಿದ್ದಾರೆ ನೋಡಿ. "ಬಾಕ್ಸಾಫೀಸ್ ಬ್ರಹ್ಮ.. ದೊಡ್ಮನೆ ಸಿಂಹ.. ಡಾ. ಶಿವಣ್ಣ" ಎಂದು ಕಾಮೆಂಟ್ ಮಾಡಿದ್ದಾರೆ.

"ಲಾಂಗ್ ಹಿಡಿಯೋರಿಗೆ ಮನೆ ದೇವ್ರು"
'ಭೈರತಿ ರಣಗಲ್' ಲುಕ್ ನೋಡಿ ಶಿವಣ್ಣ ಲಾಂಗ್ ಹಿಡಿದ ಪಾತ್ರಗಳನ್ನು ನೆನಪಿಸಿಕೊಂಡಿದ್ದಾರೆ. "ಲಾಂಗು ಹಿಡಿಯೋರಿಗೆಲ್ಲ ಮನೆ ದೇವ್ರು.. "ಶಿವ"ಣ್ಣ. ಒನ್ ಅಂಡ್ ಓನ್ಲೀ ಮಾಸ್ಟರ್ ಪೀಸ್. ಇಡೀ ಇಂಡಿಯಾಗೆ ಒಬ್ಬರೇ ಸತ್ಯ. ಒಬ್ಬರೇ ಮಾದೇಶ. ಒಬ್ಬರೇ ರಣಗಲ್ಲು."
"ದೇವರುಗಳಿಗೆ ದೇವರು ಆ ಶಿವ..ಹೀರೋಗಳಿಗೆ ಹೀರೋ ಈ ಶಿವ"
ಕೆಲವು ಕಾಮೆಂಟ್‌ಗಳನ್ನು ನೋಡಿದರೆ, ಇಷ್ಟೊಂದು ಕ್ರಿಯೇಟಿವ್ ಆಗಿಯೂ ಕಾಮೆಂಟ್ ಮಾಡಬಹುದಾ? ಅಂತ ಅನಿಸುತ್ತೆ. "ದೇವರುಗಳಿಗೆ ದೇವರು ಆ ಶಿವ. ಹೀರೋಗಳಿಗೆ ಹೀರೋ ಈ ಶಿವ. ಶಿವಣ್ಣನ ಮಾಸ್ ಲುಕ್ ಲೆವೆಲ್ ಬೇರೆ. ಶಿವಣ್ಣ ಆರ್‌ಎಕ್ಸ್ 100 ಅನ್ನೋದು ಪಕ್ಕಾ. ನಾನು ಅಂಗನವಾಡಿಯಲ್ಲಿ ಇದ್ದಾಗಲೂ ಶಿವಣ್ಣ ಹೀರೋ. ನಾನು ಸ್ಕೂಲ್‌ಗೆ ಹೋಗುವಾಗಲೂ ಶಿವಣ್ಣ ಹೀರೋ. ನಾನು ಹೈಸ್ಕೂಲ್‌ಗೆ ಹೋಗುವಾಗಲೂ ಶಿವಣ್ಣ ಹೀರೋ. ನಾನು ಕಾಲೇಜ್‌ಗೆ ಹೋಗುವಾಗಲೂ ಶಿವಣ್ಣ ಹೀರೋ. ಈಗ ಕೆಲಸಕ್ಕೆ ಹೋಗ್ತಾ ಇರೋವಾಗಲೂ ಶಿವಣ್ಣನೇ ಹೀರೋ" ಎಂದು ಮತ್ತೊಂದು ಕಾಮೆಂಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications











