ಸುಶಾಂತ್ ಬಗ್ಗೆ ಮಾತಾಡುವಾಗ ಮೇಕಪ್ ಟಚಪ್: ಟ್ರೋಲ್ ಆದ ಸಂಜನಾ ಗಲ್ರಾನಿ

ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತು ಟಿವಿ ಚಾನೆಲ್ ಒಂದರಲ್ಲಿ ನೇರ ಪ್ರಸಾರದ ಚರ್ಚೆ ನಡೆಯುವ ಸಂದರ್ಭದಲ್ಲಿ ತಮ್ಮ ಮೇಕಪ್‌ಗೆ ಟಚಪ್ ಮಾಡಿಸಿಕೊಂಡಿದ್ದಕ್ಕಾಗಿ ನಟಿ ಸಂಜನಾ ಗಲ್ರಾನಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.

Recommended Video

ಎಡವಟ್ಟು ಮಾಡಿಕೊಳ್ಳುವುದು ಅಂದ್ರೆ ಸಂಜನಾಗೆ ತುಂಬಾ ಇಷ್ಟ ಅನ್ಸುತ್ತೆ..? | Sanjana Gilrani | Filmibeat Kannada

ವಿವಾದಗಳಿಂದ ಸುದ್ದಿಯಾಗುವ ಸಂಜನಾ ಮತ್ತೊಮ್ಮೆ ಇದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ. 'ಮುಝ್ಸೆ ಶಾದಿ ಕರೋಗೆ' ಎಂಬ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾಗ 'ಒಂದು ವರ್ಷದಲ್ಲಿ 40 ಸಿನಿಮಾ ಮಾಡಿದ್ದೇನೆ' ಎನ್ನುವ ಮೂಲಕ ಟ್ರೋಲ್ ಆಗಿದ್ದ ಸಂಜನಾ, ಭಾನುವಾರ ಸಂಜೆ ಚರ್ಚೆ ಸಂದರ್ಭದಲ್ಲಿ ಅನಗತ್ಯವಾಗಿ ಟೀಕೆಗೆ ಒಳಗಾಗಿದ್ದಾರೆ. ಈ ಘಟನೆ ಬಗ್ಗೆ ಅವರು ಸೋಮವಾರ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ಟ್ರೋಲ್ ಆದ ಸಂಜನಾ

ಟ್ರೋಲ್ ಆದ ಸಂಜನಾ

ಮೃತಪಟ್ಟ ನಟನ ವಿಚಾರವಾಗಿ ಎಲ್ಲರೂ ದುಃಖದಲ್ಲಿರುವ ಸಂದರ್ಭದಲ್ಲಿ ಮೇಕಪ್ ಮಾಡಿಕೊಂಡಿರುವುದು ಸಜನಾ ಅವರ ಬೇಜವಾಬ್ದಾರಿ ಮತ್ತು ಸಂವೇದನಾಶೀಲತೆಯ ಕೊರತೆಯನ್ನು ತೋರಿಸುತ್ತದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಸಂಜನಾ ಟಚಪ್ ಮಾಡಿಕೊಳ್ಳುವ ವಿಡಿಯೋ ವೈರಲ್ ಆಗಿದೆ.

ಕಿರುಕುಳ ನೀಡುತ್ತಿದ್ದಾರೆ

ಕಿರುಕುಳ ನೀಡುತ್ತಿದ್ದಾರೆ

ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಸಂಜನಾ ತೀಕ್ಷ್ಣ ಪದಗಳಲ್ಲಿ ಪ್ರತ್ಯುತ್ತರ ನೀಡಿದ್ದಾರೆ. 'ಪ್ಯಾನೆಲ್‌ನಲ್ಲಿ ಮೇಕಪ್ ಮಾಡುವ ವಿಡಿಯೋ ವೈರಲ್ ಆಗಿದ್ದು, ಅದನ್ನು ಜನರು ಶೇರ್ ಮಾಡುತ್ತಿದ್ದಾರೆ. ನಾನು ನಿರಂತರ ಕಿರುಕುಳ ಮತ್ತು ಟ್ರೋಲಿಂಗ್‌ಗೆ ಒಳಗಾಗುತ್ತಿದ್ದೇನೆ.

ಸ್ವಲ್ಪವಾದರೂ ನೋಡುವಂತೆ ಇರಬೇಕಲ್ಲ!

ಸ್ವಲ್ಪವಾದರೂ ನೋಡುವಂತೆ ಇರಬೇಕಲ್ಲ!

ಈ ಕಾರ್ಯಕ್ರಮದಲ್ಲಿ ನಾನು ಮುಂಬೈನಿಂದ ಅಥವಾ ಆಜ್ ತಕ್ ಸ್ಟುಡಿಯೋದಲ್ಲಿ ಕುಳಿತು ಮಾತನಾಡಿದ್ದಲ್ಲ. ನಾನು ಮನೆಯಿಂದ ಸ್ಕೈಪ್ ಮೂಲಕ ಲೈವ್ ಬಂದಿದ್ದೆ. ನಾನು ಬೆಂಗಳೂರಿನಲ್ಲಿದ್ದೇನೆ. ಹೀಗಾಗಿ ಈ ಗೊಂದಲ ಉಂಟಾಗಿದೆ. ಪ್ರತಿಯೊಬ್ಬರಂತೆಯೇ ಟಿವಿಯಲ್ಲಿ ಕಾಣಿಸಿಕೊಳ್ಳುವಾಗ ಸ್ವಲ್ಪವಾದರೂ ಸರಿಯಾದ ರೀತಿ ಇರಬೇಕು ಎಂದು ಬಯಸುತ್ತೇನೆ. ಇದರಲ್ಲಿ ಯಾವ ತಪ್ಪೂ ಇಲ್ಲ ಎಂದು ನನ್ನ ಕುಟುಂಬ ಕೂಡ ನಂಬಿದೆ ಎಂದಿದ್ದಾರೆ.

ಆಘಾತಕಾರಿ ಟ್ರೋಲ್‌ಗಳು

ಆಘಾತಕಾರಿ ಟ್ರೋಲ್‌ಗಳು

ಇದು ಬಹಳ ಸೂಕ್ಷ್ಮ ಸಂಗತಿ. ಈಗಿನ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಈ ರೀತಿ ಸೃಷ್ಟಿಸಿರುವ ವಿವಾದದಿಂದ ನನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡುತ್ತೇನೆ. ನನಗೆ ಬಂದಿರುವ ಟ್ರೋಲ್‌ಗಳು, ಕಿರುಕುಳಗಳು, ಕೆಟ್ಟ ಪದಗಳ ನಿಂದನೆಗಳನ್ನು ನಿಮ್ಮ ಮುಂದೆ ಇರಿಸಿದರೆ ಎಲ್ಲರೂ ಆಘಾತಕ್ಕೆ ಒಳಗಾಗುತ್ತೀರಿ.

ಪ್ರಸಾರವಾಗಿದ್ದೇ ಗೊತ್ತಿರಲಿಲ್ಲ

ಪ್ರಸಾರವಾಗಿದ್ದೇ ಗೊತ್ತಿರಲಿಲ್ಲ

ಸಾರ್ವಜನಿಕ ವ್ಯಕ್ತಿಯಾಗಿರುವ ಕಾರಣಕ್ಕಾಗಿ ತಪ್ಪು ಎಂದು ಭಾವಿಸಲು ಅಸಾಧ್ಯವಾದ ಸಂಗತಿಗಳಿಗೂ ನಾವು ಕ್ಷಮೆ ಕೋರಬೇಕಾಗುವುದು ವ್ಯಂಗ್ಯ. ಸ್ವಲ್ಪ ನೋಡುವಂತೆ ಕಾಣಿಸಿಕೊಳ್ಳಲಷ್ಟೇ ನಾನು ಲಘುವಾಗಿ ಟಚಪ್ ಮಾಡಿಕೊಂಡಿದ್ದೆ. ನಾನು ಕಾರ್ಯಕ್ರಮಕ್ಕೆ ಇನ್ನೂ ಸಿದ್ಧಳಾಗುತ್ತಿದ್ದ ವೇಳೆಯಲ್ಲಿಯೇ ನನಗೆ ಪೂರ್ವ ಮಾಹಿತಿ ನೀಡದೆ ವಿಡಿಯೋ ಪ್ರಸಾರ ಮಾಡಲಾಗಿತ್ತು. ಅದು ಪ್ರಸಾರವಾಗುತ್ತಿದೆ ಎನ್ನುವುದು ನನ್ನ ಗಮನಕ್ಕೂ ಬಂದಿರಲಿಲ್ಲ. ನೀವೇ ನೋಡಿರುವಂತೆ ನಿರೂಪಕರು ನನ್ನ ಪರಿಚಯ ಮಾಡಿಕೊಡಲಿಲ್ಲ. ನನ್ನ ಹೆಸರು ಹೇಳಲೇ ಇಲ್ಲ ಎಂದು ತಿಳಿಸಿದ್ದಾರೆ.

ನಾವೆಲ್ಲರೂ ದುಃಖದಲ್ಲಿದ್ದೇವೆ

ನಾವೆಲ್ಲರೂ ದುಃಖದಲ್ಲಿದ್ದೇವೆ

ಈಗಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸೂಕ್ಷ್ಮತೆ ಕಾಪಾಡಿಕೊಳ್ಳಿ ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ನಾವೆಲ್ಲರೂ ಈ ನಷ್ಟದಿಂದ ದುಃಖದಲ್ಲಿದ್ದೇವೆ. ಈ ರೀತಿಯ ಪ್ರಚಾರವನ್ನು ನಾನು ಎಂದಿಗೂ ಬಯಸುವುದಿಲ್ಲ. ನನ್ನ ಸ್ಥಿತಿ ಮತ್ತು ಸಂಕಟವನ್ನು ಅರ್ಥಮಾಡಿಕೊಂಡು ನನಗೆ ಬೆಂಬಲ ನೀಡುತ್ತಿರುವ ಅನೇಕ ಜನರನ್ನು ನೋಡಿದ್ದೇನೆ. ಈ ಎಲ್ಲ ಬೆಂಬಲಗಳಿಗೂ ನಿಮಗೆ ಧನ್ಯವಾದಗಳು ಎಂದು ಸಂಜನಾ ಹೇಳಿದ್ದಾರೆ.

More from Filmibeat

English summary
Netizens crticized actress Sanjjana Galrani for giving touch-up to her make up on TV debate over Sushant Singh Rajput's death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X