'ರಾಬಿನ್ ಹುಡ್' ಕೈ ಬಿಟ್ಟ ಸಿಂಪಲ್ ಸುನಿಯ 'ಗತವೈಭವ': ಹಾಲಿವುಡ್ ನಟ ಅವತಾರವೆತ್ತಿದ ಹೀರೊ

ಸ್ಯಾಂಡಲ್‌ವುಡ್ ನಿರ್ದೇಶಕ ಸಿಂಪಲ್ ಸುನಿ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಇದೊಂತರಾ ಪ್ರಯೋಗನೂ ಹೌದು. ಹೊಸ ಪ್ರಯತ್ನವೂ ಹೌದು. ಸಿನಿಮಾ ಟೈಟಲ್ 'ಗತವೈಭವ'. ಹಲವು ದಿನಗಳಿಂದ ಈ ಸಿನಿಮಾದ ಬಗ್ಗೆನೇ ಚರ್ಚೆಯಾಗುತ್ತಿತ್ತು. ಹೊಸ ಪ್ರತಿಭೆಗೆ ಸಿನಿಮಾ ಮಾಡುತ್ತಿರುವ ಸುನಿ ಟೈಟಲ್‌ ಅನ್ನು ಸೂಪರ್‌ಸ್ಟಾರ್‌ಗೆ ಇಡುವ ಹಾಗೆ ಇಟ್ಟಿದ್ದಾರಲ್ಲಾ ಅಂತ ಸ್ಯಾಂಡಲ್‌ವುಡ್ ಬೆರಗಾಗಿತ್ತು. ಕೊನೆಗೂ ತನ್ನ ಹೀರೋ ಯಾರು? ಆ ಹೀರೋ ತಾಕತ್ತೇನು? ಅನ್ನುವುದನ್ನು ಪರಿಚಯಿಸಿದ್ದಾರೆ.

ಸಿಂಪಲ್ ಸುನಿ ಎಲ್ಲಾ ಪ್ರಕಾರದ ಸಿನಿಮಾಗೂ ಕೈ ಹಾಕಿದ್ದಾರೆ. ಕಾಮಿಡಿ, ಸಿರೀಯಸ್, ಫ್ಯಾಂಟಸಿ, ಹಾರರ್ ಹೀಗೆ ಭಿನ್ನ-ವಿಭಿನ್ನ ಕಥೆಯನ್ನು ಹೊತ್ತುತಂದಿದ್ದಾರೆ. ಈಗ ಯುವ ಪ್ರತಿಭೆಯನ್ನು ಪರಿಚಯಿಸಲು ಹೊಸ ಕಥೆಯೊಂದಿಗೆ ಬಂದಿದ್ದಾರೆ. ಹೊಸ ಪ್ರತಿಭೆಯನ್ನು ಪರಿಚಯಿಸುವುದಕ್ಕೆ ಎಂದೇ ವಿಶೇಷವಾದ ಪರಿಕಲ್ಪನೆಯಲ್ಲಿ ಶೂಟ್ ಮಾಡಿ ಆ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಹೀರೊ ಲುಕ್, ಗೆಟಪ್ ನೋಡಿದರೆ, ಹಾಲಿವುಡ್ ಸಿನಿಮಾ ಟಚ್ ಕೊಟ್ಟಿರಬಹುದು ಅನಿಸುತ್ತಿದೆ.

 ಸುನಿ ಹೀರೊ ಜಾಕ್‌ಸ್ಟಾರೋ

ಸುನಿ ಹೀರೊ ಜಾಕ್‌ಸ್ಟಾರೋ

ಸಿಂಪಲ್ ಸುನಿ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಾರಿ ಯುವಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಾಹಸ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಗತವೈಭವ ಅಂತ ಟೈಟಲ್ ಕೂಡ ಇಟ್ಟಿದ್ದಾರೆ. ಇಷ್ಟೆ ಅಲ್ಲದೆ, ಹೊಸ ಹೀರೊ ದುಶ್ಯಂತ್ ಯಾರು? ಅವರ ಸಾಮರ್ಥ್ಯವೇನು? ಎಂಬುವುದನ್ನು ತೋರಿಸಲು ಸಿಂಪಲ್ ಸುನಿ ಒಂದು ವಿಡಿಯೋ ಮಾಡಿ ಬಿಟ್ಟಿದ್ದಾರೆ. ಆ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾಕೆಂದರೆ, ಹಾಲಿವುಡ್‌ ಸಿನಿಮಾದಲ್ಲಿ 'ಪೈರೆಟ್ಸ್ ಆಫ್ ದಿ ಕೆರಿಬಿಯನ್' ಚಿತ್ರದಲ್ಲಿ ನಟ ಜಾನಿ ಡೆಪ್ ಜಾಕ್ ಸ್ಪಾರೋ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಅವತಾರದಲ್ಲಿ ಹೊಸ ಪ್ರತಿಭೆಯನ್ನು ಪರಿಚಯಿಸಿದ್ದಾರೆ.

 'ರಾಬಿನ್ ಹುಡ್' ಅಲ್ಲ 'ಗತವೈಭವ'

'ರಾಬಿನ್ ಹುಡ್' ಅಲ್ಲ 'ಗತವೈಭವ'

ಇದೇ ಹೀರೊ ದುಶ್ಯಂತ್ ಜೊತೆ ಸಿಂಪಲ್ ಸುನಿ ರಾಬಿನ್ ಹುಡ್ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗದೇ ಇದ್ದಿದ್ದರಿಂದ ಗತವೈಭವವನ್ನು ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ 'ರಾಬಿನ್ ಹುಡ್' ಸಿನಿಮಾವನ್ನೇ 'ಗತವೈಭವ' ಎಂದು ಟೈಟಲ್ ಬದಲಾಯಿಸಿಲ್ಲ. ಈ ಸಿನಿಮಾದ ಕಥೆನೇ ಬೇರೆ. ಒಂದು ಲವ್‌ಸ್ಟೋರಿಯನ್ನು ಸೈಂಟಿಫಿಕ್ ಥ್ರಿಲ್ಲರ್ ಮಾದರಿಯಲ್ಲಿ ಪ್ರೇಕ್ಷಕರ ಮುಂದಿಡಲು ಸಿಂಪಲ್ ಸುನಿ ಹೊರಟಿದ್ದಾರೆ.

 ಯುವ ಪ್ರತಿಭೆ ದುಶ್ಯಂತ್ ಯಾರು?

ಯುವ ಪ್ರತಿಭೆ ದುಶ್ಯಂತ್ ಯಾರು?

ಸಿಂಪಲ್ ಸುನಿ ಪರಿಚಯಿಸುತ್ತಿರುವ ಹೊಸ ಹೀರೊ ದುಶ್ಯಂತ್ ನಟನಗೆ ಬಗ್ಗೆ ಸಂಪೂರ್ಣ ತಯಾರಿ ನಡೆಸಿಕೊಂಡು ಬಂದಿದ್ದಾರೆ. ಬೀದಿ ನಾಟಕ, ಕಿರುಚಿತ್ರಗಳಲ್ಲಿ ನಟಿಸಿದ ಅನುಭವವಿದೆ. ಟೆಂಟ್ ಸಿನಿಮಾ ಶಾಲೆಯಲ್ಲಿ ಮೂರು ವರ್ಷ ಅಭಿನಯ ತರಬೇತಿ ಪಡೆದಿದ್ದಾರೆ. ಡ್ಯಾನ್ಸ್, ಮರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ ಸೇರಿದಂತೆ ಎಲ್ಲಾ ತರಬೇತಿಯನ್ನು ಪಡಿದಿದ್ದಾರೆ. ಪೂರ್ಣ ತಯಾರಿ ತೆಗೆದುಕೊಂಡು ಬಂದಿರುನ ನಟನ ಸಿನಿಮಾ ಬಗ್ಗೆ ಸುನಿ ಕುತೂಹಲ ಕೆರಳಿಸಿದ್ದಾರೆ.

 ಗತವೈಭವಕ್ಕೆ ಸುನಿ ನಿರ್ಮಾಪಕ

ಗತವೈಭವಕ್ಕೆ ಸುನಿ ನಿರ್ಮಾಪಕ

ಸಿಂಪಲ್ ಸುನಿ ಈ ಸಿನಿಮಾಗೆ ಕೇವಲ ನಿರ್ದೇಶಕ ಅಷ್ಟೇ ಅಲ್ಲ. ಅವರು ನಿರ್ಮಾಪಕ ಕೂಡ ಹೌದು. ಹೊಸ ಪ್ರತಿಭೆಗಾಗಿ ಸಿನಿಮಾವನ್ನು ಪ್ರಡ್ಯೂಸ್ ಮಾಡುತ್ತಿದ್ದಾರೆ. ಹೀರೊ ದುಶ್ಯಂತ್ ಪರಿಚಯದ ವಿಡಿಯೋ ಸದ್ದು ಮಾಡುತ್ತಿದ್ದು, ಜಾಕ್‌ಸ್ಟಾರೋ ಲುಕ್ ಕುತೂಹಲ ಕೆರಳಿಸಿದೆ. ಏಪ್ರಿಲ್ ತಿಂಗಳಿಂದ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಸದ್ಯ ಸುನಿ ನಿರ್ದೇಶನದ 'ಅವತಾರ ಪುರುಷ' ಎರಡು ಚಾಪ್ಟರ್‌ಗಳು ಬಿಡುಗಡೆಗೆ ಸಿದ್ಧವಿದೆ.

More from Filmibeat

English summary
New face Dushyanth became Johnny Depp in Simple Suni directing new movie Gathavaibhava. Simple suni introduced new face Dushyanth in promotional video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X