ಮಂಡ್ಯದಲ್ಲಿ 'ರೈಡರ್' ಚಿತ್ರದ ಅದ್ದೂರಿ ಪ್ರೀ ರಿಲೀಸ್: ಯಾವಾಗ? ವಿಶೇಷತೆ ಏನು?

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ನಾಲ್ಕನೇ ಸಿನಿಮಾ 'ರೈಡರ್'. 2021ರ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾಗಳಲ್ಲಿ ಈ ಸಿನಿಮಾ ಕೂಡ ಒಂದು. ಈಗಾಗಲೇ 'ರೈಡರ್' ಹಾಡುಗಳು ಹಾಗೂ ಟ್ರೈಲರ್‌ನಿಂದ ಬೇಜಾನ್ ಸದ್ದು ಮಾಡುತ್ತಿದೆ. ಸದ್ಯ 'ರೈಡರ್' ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಸಕ್ಕರೆ ನಾಡಿನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಲು ಮುಂದಾಗಿದೆ.

ಕನ್ನಡದ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ನಿಖಿಲ್ ಕುಮಾರ್ ನಟಿಸಿದ 'ರೈಡರ್' ಕೂಡ ಸೇರಿಕೊಂಡಿದೆ. ಇದೇ ಕ್ರಿಸ್‌ಮಸ್ ಹಬ್ಬದಂದು ಡಿಸೆಂಬರ್ 24 ಕ್ಕೆ ಸುಮಾರು 250 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಆದರೆ, ಸಿನಿಮಾ ಬಿಡುಗಡೆಗೆ ಕೇವಲ 5 ಮುನ್ನ ಸಕ್ಕರೆ ನಾಡು ಮಂಡ್ಯದಲ್ಲಿ ನಿಖಿಲ್ ಕುಮಾರ್ ಅಭಿಮಾನಿಗಳಿಗಾಗಿ ದೊಡ್ಡ ಕಾರ್ಯಕ್ರಮವನ್ನ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.

ಸಕ್ಕರೆ ನಾಡಿನಲ್ಲಿ 'ರೈಡರ್' ಅದ್ದೂರಿ ಕಾರ್ಯಕ್ರಮ

ಸಕ್ಕರೆ ನಾಡಿನಲ್ಲಿ 'ರೈಡರ್' ಅದ್ದೂರಿ ಕಾರ್ಯಕ್ರಮ

'ರೈಡರ್' ನಿಖಿಲ್ ಕುಮಾರ್‌ಗೆ ವಿಶಿಷ್ಟ ಸಿನಿಮಾ. ಯಾಕಂದ್ರೆ, ಈ ಸಿನಿಮಾದಲ್ಲಿ ಕೇವಲ ಲವ್‌ಸ್ಟೋರಿ, ಆಕ್ಷನ್, ಸೆಂಟಿಮೆಂಟ್ ಅಷ್ಟೇ ಅಲ್ಲ. ಇವೆಲ್ಲದರ ಜೊತೆ ಇದೇ ಮೊದಲ ಬಾರಿಗೆ ಕ್ರೀಡಾಪಟುವಾಗಿ ನಿಖಿಲ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರನಾಗಿ ನಿಖಿಲ್ ಅಭಿನಯಿಸುತ್ತಿದ್ದು, ಯುವರಾಜನ ಅಭಿಮಾನಿಗಳು ಈ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಈ ಬಾರಿ ಮಂಡ್ಯದಲ್ಲಿ ನಿಖಿಲ್ ಅಭಿಮಾನಿಗಳಿಗಾಗಿ 'ರೈಡರ್' ಪ್ರಿ ರಿಲೀಸ್ ಇವೆಂಟ್ ಮಾಡಲು ನಿರ್ಧರಿಸಿದ್ದಾರೆ

ಸೀತಾರಾಮ ಕಲ್ಯಾಣ ವೇಳೆ 'ರೈಡರ್' ಹುಟ್ಟಿತ್ತು

ಸೀತಾರಾಮ ಕಲ್ಯಾಣ ವೇಳೆ 'ರೈಡರ್' ಹುಟ್ಟಿತ್ತು

"ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆಯುವಾಗ ನಿರ್ದೇಶಕ ವಿಜಯ್ ಕುಮಾರ್ ಕೊಂಡ 'ರೈಡರ್' ಸಿನಿಮಾದ ಕಥೆ ಹೇಳಿದರು. ಬಳಿಕ ಸುನೀಲ್ ಹಾಗೂ ಲಹರಿ ಸಂಸ್ಥೆ ಇಬ್ಬರೂ ಸೇರಿ ಈ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. ಆರಂಭವಾಯಿತು. ಅರ್ಜುನ್ ಜನ್ಯರ ಟ್ಯೂನ್‌ಗಳು ಈಗಾಗಲೇ ಮೂಡಿ ಮಾಡುತ್ತಿವೆ. ಈ ಹಾಡುಗಳು ಹಿಟ್ ಆಗಿರುವುದು ಸಂತೋಷ ತಂದಿದೆ. ಇದೇ 24 ನೇ ತಾರೀಖು ನಮ್ಮ ಸಿನಿಮಾ ತೆರೆಗೆ ಬರಲಿದೆ." ಅಂತ ರೈಡರ್‌ಗೆ ಬೆಂಬಲ ಕೋರಿದ್ದಾರೆ ನಿಖಿಲ್.

ಇಬ್ಬರು ನಾಯಕಿಯರ ಜೊತೆ ನಿಖಿಲ್ ರೈಡ್

ಇಬ್ಬರು ನಾಯಕಿಯರ ಜೊತೆ ನಿಖಿಲ್ ರೈಡ್

'ರೈಡರ್' ಕನ್ನಡ ಚಿತ್ರರಂಗದ ಅದ್ದೂರಿ ಸಿನಿಮಾ. ವಿಜಯ್ ಕುಮಾರ್ ಕೊಂಡ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಟೀಸರ್ ನೋಡಿದರೆ, ಇದೊಂದು ಆಕ್ಷನ್ ಸಿನಿಮಾ ಅಂತ ಅನಿಸುವುದು ಸಹಜ. ಆದರೆ, ಈ ಚಿತ್ರದಲ್ಲಿ ಲವ್ ಸ್ಟೋರಿ ಕೂಡ ಇದೆ. ಯುವರಾಜ ನಿಖಿಲ್ ಕುಮಾರ್ ಗೆ ಜೋಡಿಯಾಗಿ ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ. ನಾಯಕಿಯಾರಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ ನಟಿಸಿದ್ದರೆ, ಅನುಷಾ ರೈ ಮತ್ತೊಬ್ಬ ನಾಯಕಿ.

ಲಹರಿ ಹಾಗೂ ಶಿವನಂದಿಯಿಂದ 'ರೈಡರ್'

ಲಹರಿ ಹಾಗೂ ಶಿವನಂದಿಯಿಂದ 'ರೈಡರ್'

'ರೈಡರ್' ಸಿನಿಮಾವನ್ನು ಆಡಿಯೋ ಸಂಸ್ಥೆ ಲಹರಿ ಸಹ ನಿರ್ಮಾಣ ಮಾಡಿದೆ. "ನಮ್ಮ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಶಿವನಂದಿ ಎಂಟರ್ಟೈನ್ಮೆಂಟ್ ಜೊತೆಗೂಡಿ ರೈಡರ್ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಅಣ್ಣ ಮನೋಹರ ನಾಯ್ಡು ಅವರ ಮಕ್ಕಳಾದ ಚಂದ್ರು ಹಾಗೂ ನವೀನ್ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಗೆದ್ದಿದ್ದು, ಸಿನಿಮಾ ಕೂಡ ಯಶಸ್ವಿಯಾಗುತ್ತೆ" ಅಂತಾರೆ ಲಹರಿ ವೇಲು.

More from Filmibeat

English summary
Nikhil Kumar new movie rider will have pre release event in mandya. Rider movie will be releasing on december 24 christmas eve.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X