ಸಂಕ್ರಾಂತಿಗೆ ಸೆಟ್ಟೇರಲು ಸಜ್ಜಾದ ನಿಖಿಲ್ ಕುಮಾರ್ ಹೊಸ ಸಿನಿಮಾ: ಇಮೇಜ್‌ಗೆ ತಕ್ಕ ಸಿನಿಮಾವಂತೆ!

ಈ ವಾರ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ್ ಅಭಿನಯದ 'ರೈಡರ್' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರನಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇನ್ನು 'ರೈಡರ್' ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲೇ ನಿಖಿಲ್ ಕುಮಾರ ಹೊಸ ಸಿನಿಮಾದ ಬಗ್ಗೆ ಸುದ್ದಿಗಳು ಹರಿದಾಡಲು ಆರಂಭಿಸಿದೆ. ಯುವರಾಜನ ಹೊಸ ಸಿನಿಮಾ ಸೆಟ್ಟೇರಲು ಈಗಾಗಲೇ ಸಿದ್ಧತೆಗಳು ಆರಂಭ ಆಗಿವೆ.

Recommended Video

ಇದೇ ವರ್ಷ ರಿಲೀಸ್ ಆಗ್ತಿದೆ ನಿಖಿಲ್ ಸಿನಿಮಾ

'ಸೀತಾರಾಮ ಕಲ್ಯಾಣ' ಬಳಿಕ ನಿಖಿಲ್ ಕುಮಾರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಸ್ಯಾಂಡಲ್‌ವುಡ್ ಯುವರಾಜನ ಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳು ಪ್ರೇಕ್ಷಕರ ಮನಗೆದ್ದಿದೆ. ಮತ್ತೊಮ್ಮೆ ಮಾಸ್ ಅವತಾರದಲ್ಲಿ ನಿಖಿಲ್ ಕುಮಾರ್ ಥಿಯೇಟರ್‌ಗಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಅಷ್ಟರಲ್ಲೇ ಮತ್ತೊಂದು ಸಿನಿಮಾ ಸೈಲೆಂಟ್‌ ಆಗಿಯೇ ಸೌಂಡ್ ಮಾಡುವುದಕ್ಕೆ ಆರಂಭ ಆಗಿದೆ.

ಸಂಕ್ರಾಂತಿಗೆ ನಿಖಿಲ್ 5ನೇ ಸಿನಿಮಾ

ಸಂಕ್ರಾಂತಿಗೆ ನಿಖಿಲ್ 5ನೇ ಸಿನಿಮಾ

ನಿಖಿಲ್ ಕುಮಾರ್ 5ನೇ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಇಷ್ಟೊತ್ತಿಗಾಗಲೇ ಸಿನಿಮಾ ಶೂಟಿಂಗ್ ಕೂಡ ಆರಂಭ ಆಗಬೇಕಿತ್ತು. ಆದರೆ, ಕೊರೊನಾ ಎರಡನೇ ಅಲೆಯಿಂದ 'ರೈಡರ್' ಸಿನಿಮಾ ಬಿಡುಗಡೆಯೇ ತಡವಾಗಿದ್ದರಿಂದ ಸಿನಿಮಾ ಶೂಟಿಂಗ್ ಅನ್ನು 2022ಕ್ಕೆ ಮುಂದೂಡಲಾಗಿತ್ತು. ಹೀಗಾಗಿ 'ರೈಡರ್' ರಿಲೀಸ್ ಆಗುತ್ತಿದ್ದಂತೆ 5ನೇ ಸಿನಿಮಾದ ತಯಾರಿ ಭರ್ಜರಿಯಾಗಿ ಆರಂಭ ಆಗಲಿದೆ. ಒಂದುಕಡೆ ರೈಡರ್ ಸಿನಿಮಾ ಬಿಡುಗಡೆ ತಯಾರಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಹೊಸ ಸಿನಿಮಾದ ಶೂಟಿಂಗ್‌ಗೆ ತಯಾರಿ ನಡೆಯುತ್ತಿದೆ.

ಜನವರಿ ತಿಂಗಳಿಂದ ಒಂದೊಂದೇ ಪಾತ್ರಗಳ ಅನಾವರಣ

ಜನವರಿ ತಿಂಗಳಿಂದ ಒಂದೊಂದೇ ಪಾತ್ರಗಳ ಅನಾವರಣ

ಕೆವಿನ್ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ಸ್ಯಾಂಡಲ್‌ವುಡ್ ಯುವರಾಜನ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮಂಜು ಅಥರ್ವ ಅನ್ನುವ ಯುವ ನಿರ್ದೇಶಕ ನಿಖಿಲ್‌ ಕುಮಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ನಿರ್ಮಾಣ ಸಂಸ್ಥೆ ಈ ಹೊಸ ಸಿನಿಮಾದ ಒಂದೊಂದೇ ಪಾತ್ರವನ್ನು ವಿಶಿಷ್ಟವಾಗಿ ಪರಿಚಯಿಸುವುದಕ್ಕೆ ಮುಂದಾಗಿದೆ. 2022 ಜನವರಿ ತಿಂಗಳಿನಿಂದಲೇ ಒಂದೊಂದೇ ಪಾತ್ರವನ್ನು ಪರಿಚಯ ಮಾಡಿಕೊಡಲಿದೆ.

ನಿಖಿಲ್ ಇಮೇಜ್‌ಗೆ ತಕ್ಕಂತ ಸಿನಿಮಾ

ನಿಖಿಲ್ ಇಮೇಜ್‌ಗೆ ತಕ್ಕಂತ ಸಿನಿಮಾ

ನಿಖಿಲ್ ಕುಮಾರ್ 5 ನೇ ಸಿನಿಮಾ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಈ ಕಥೆ ನಿಖಿಲ್ ಕುಮಾರ್ ಇಮೇಜ್ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ, ಐದನೇ ಸಿನಿಮಾ 'ರೈಡರ್'ಗಿಂತ ವಿಭಿನ್ನವಾಗಿರುತ್ತೆ ಅನ್ನುವುದನ್ನು ಹೇಳಿದೆ. ಇಷ್ಟರೊಳಗೆ ನಿಖಿಲ್ ಪಾತ್ರ ಹಾಗೂ ನಾಯಕಿಯ ಪರಿಚಯವನ್ನು ಚಿತ್ರತಂಡ ಮಾಡಿಕೊಡಬೇಕಿತ್ತು. ಆದರೆ, ಅಂದುಕೊಂಡಂತೆ ಶೂಟಿಂಗ್ ಶುರುವಾಗದೆ ಇರುವುದರಿಂದ ಸಂಕ್ರಾಂತಿಗೆ ಟೈಟಲ್‌ನಿಂದ, ತಾರಾಬಳಗವನ್ನು ರಿವೀಲ್ ಮಾಡಲು ಮುಂದಾಗಿದೆ.

ದೊಡ್ಡ ತಂತ್ರಜ್ಞರ ತಂಡವೇ ಸೇರಲಿದೆ

ದೊಡ್ಡ ತಂತ್ರಜ್ಞರ ತಂಡವೇ ಸೇರಲಿದೆ

ನಿಖಿಲ್ ಕುಮಾರ್ ಸಿನಿಮಾಗಾಗಿ ದೊಡ್ಡ ದೊಡ್ಡ ತಂತ್ರಜ್ಞರು ಒಂದಾಗುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದರೆ, ಮದಗಜ, ಮಫ್ತಿಯಂತಹ ಸಿನಿಮಾಗಳಿಗೆ ಕ್ಯಾಮರಾ ಹಿಡಿದಿರುವ ನವೀನ್ ಈ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿರುವ ನಿಖಿಲ್ ಕುಮಾರ್ 2022ರ ಆರಂಭದಿಂದಲೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ವರ್ಷದಲ್ಲಿ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರಾ? ಇಲ್ಲಾ ರಾಜಕೀಯದ ಕಡೆ ವಾಲುತ್ತಾರಾ ಅನ್ನುವುದು ಸದ್ಯಕ್ಕೆ ಕುತೂಹಲ.

More from Filmibeat

English summary
Nikhil Kumaraswamy new movie Rider will start shooting after Sankranthi. Nikhil Kumar Rider will be releasing on december 24th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X