For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿ ಅಭ್ಯಾಸ ಆಗಿದೆ' ಎಂದಿದ್ದೇಕೆ ನಿಖಿಲ್ ಕುಮಾರಸ್ವಾಮಿ?

  |

  'ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿ ಅಭ್ಯಾಸ ಆಗಿದೆ'. ಇದು ನಿಖಿಲ್ ಕುಮಾರಸ್ವಾಮಿ ಲೇಟೆಸ್ಟ್ ಸಿನಿಮಾ ರೈಡರ್ ಡೈಲಾಗ್ ಅಲ್ಲ. ಸ್ಯಾಂಡಲ್‌ವುಡ್ ಯುವರಾಜನ ರಿಯಲ್‌ ಲೈಫ್ ಡೈಲಾಗ್ ಇದು. ಇತ್ತೀಚೆಗೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದ ನಿಖಿಲ್ ಕುರುಕ್ಷೇತ್ರದ ಡೈಲಾಗ್ ಬಿಟ್ಟಿದ್ದಷ್ಟೇ ಅಲ್ಲ. ಚುನಾವಣೆಯಲ್ಲಿ ತನ್ನನ್ನು ಸೋಲಿಸಿದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

  ನಿಖಿಲ್ ಕುಮಾರಸ್ವಾಮಿ ಸದ್ಯ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಸಿನಿಮಾ ಮಾಡುವಾಗ ರಾಜಕೀಯದಿಂದ ದೂರ ಉಳಿದರೆ, ರಾಜಕೀಯದಲ್ಲಿರುವಾಗ ಸಿನಿಮಾದಿಂದ ದೂರ ಉಳಿಯುತ್ತಾರೆ. ಎರಡೂ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ನಿಖಿಲ್‌ಗೆ ಎರಡೂ ಕ್ಷೇತ್ರಗಳಲ್ಲೂ ಅವರದ್ದೇ ಆದ ಅಭಿಮಾನಿ ಬಳಗವಿಗೆ. ತಂದೆಯಂತೆ ರಾಜಕೀಯದಲ್ಲಿ ಬೆಳೆಯಬೇಕು ಅನ್ನುವ ಹಂಬಲವಿರುವ ನಿಖಿಲ್ ಆಗಾಗ ಜೆಡಿಎಸ್ ಯುವ ಕಾರ್ಯಕರ್ತರನ್ನು ಭೇಟಿಯಾಗುತ್ತಿರುತ್ತಾರೆ. ಈ ವೇಳೆ ನಿಖಿಲ್ ಕುರುಕ್ಷೇತ್ರದ ಅಭಿಮನ್ಯುವಿನ ಬಗ್ಗೆ ಮಾತಾಡಿದ್ದಾರೆ.

   ಕುರುಕ್ಷೇತ್ರದ ಅಭಿಮನ್ಯುವಿನಂತೆ ಏಕಾಂಗಿ

  ಕುರುಕ್ಷೇತ್ರದ ಅಭಿಮನ್ಯುವಿನಂತೆ ಏಕಾಂಗಿ

  ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ. ಮಂಡ್ಯದ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ, ನಿಖಿಲ್ "ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿ ನನಗೆ ಅಭ್ಯಾಸವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಕುರುಕ್ಷೇತ್ರದ ಅಭಿಮನ್ಯುವಿನಂತೆ ಏಕಾಂಗಿಯಾದೆ." ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ್ದಾರೆ.

  ಪಕ್ಷಾತೀತವಾಗಿ ಒಗ್ಗೂಡಿ ಸಂಚು ಮಾಡಿ ಸೋಲಿಸಿದ್ರು

  ಪಕ್ಷಾತೀತವಾಗಿ ಒಗ್ಗೂಡಿ ಸಂಚು ಮಾಡಿ ಸೋಲಿಸಿದ್ರು

  "ಕಳೆದ ಲೋಕಸಭೆ ಚುನಾವಣೆಯಲ್ಲಿ ಕುರುಕ್ಷೇತ್ರ ಸಿನಿಮಾದಲ್ಲಿ ನಾನು ನಟಿಸಿದ ಅಭಿಮನ್ಯು ಪಾತ್ರ ಮಾಡಿದಂತಾಗಿತ್ತು. 2019ರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಎಲ್ಲರೂ ಸೇರಿಕೊಂಡು ಪಕ್ಷಾತೀತವಾಗಿ ಸಂಚು ಮಾಡಿ ನನ್ನನ್ನು ಸೋಲಿಸಿದರು. ಮೂರು ಪಕ್ಷಗಳ ಷಡ್ಯಂತ್ರದಿಂದ ನಾನು ಸೋಲಬೇಕಾಯಿತು" ಅಂತ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

  ರಾಜಕೀಯ ಸ್ಥಾನಮಾನದ ಹುಚ್ಚು ಹಿಡಿದಿಲ್ಲ

  ರಾಜಕೀಯ ಸ್ಥಾನಮಾನದ ಹುಚ್ಚು ಹಿಡಿದಿಲ್ಲ

  ಇದೇ ವೇಳೆ " ನನಗೆ ರಾಜಕೀಯ ಯಾವುದೋ ಒಂದು ಸ್ಥಾನಮಾನ ಗಿಟ್ಟಿಸಿಕೊಳ್ಳಬೇಕು ಎಂಬ ಹುಚ್ಚು ಹಿಡಿಸಿಕೊಂಡಿದ್ದರೆ, ಶಿವರಾಮೇಗೌಡರು ಲೋಕಸಭಾ ಉಪಚುನಾವಣೆಯಲ್ಲಿ ನಿಲ್ತಾರೆ, ನಾನೇ ನಿಂತುಕೊಂಡಿರುವೆ. ಹಂಗೆ ಏನಾದ್ರೂ ರಾಜಕೀಯದ ಹುಚ್ಚು ಹಿಡಿದಿದ್ದರೆ, ನಮ್ಮ ತಂದೆಯವರ ಹೆಸರಲ್ಲಿ ಯಾವುದೋ ಸ್ಥಾನದಲ್ಲಿ ಕೂತುಕೊಳ್ಳಬೇಕು ಅಂತಿದ್ದರೆ, ಅವತ್ತೇ ಕೂತುಕೊಳ್ಳುತ್ತಿದ್ದೆ." ಎಂದು ಹೇಳುತ್ತಾ ರಾಜಕೀಯ ಸ್ಥಾನಮಾನಕ್ಕಾಗಿ ಆಸೆ ಪಡುತ್ತಿಲ್ಲವೆಂದು ಹೇಳಿದ್ದಾರೆ.

  'ರೈಡರ್' ಪ್ರಚಾರದಲ್ಲಿ ನಿಖಿಲ್ ಬ್ಯುಸಿ

  'ರೈಡರ್' ಪ್ರಚಾರದಲ್ಲಿ ನಿಖಿಲ್ ಬ್ಯುಸಿ

  ನಿಖಿಲ್ ಕುಮಾರಸ್ವಾಮಿ 'ರೈಡರ್' ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟೀಸರ್‌ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದು, ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಈ ಸಿನಿಮಾ ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರನಾಗಿ ತೆರೆಮೇಲೆ ಕಾಣಿಸಿಕೊಳ್ಳಿದ್ದಾರೆ. ಈ ಹಿಂದೆ ನಿಖಿಲ್ ನಟಿಸಿದ ಸಿನಿಮಾಗಳಿಗಿಂತ ಈ ಸಿನಿಮಾ ವಿಭಿನ್ನವಾಗಿದೆ ಅಂತ 'ರೈಡರ್' ತಂಡ ಹೇಳಿಕೊಂಡಿದ್ದು, ನಿಖಿಲ್ ಅಭಿಮಾನಿಗಳಲ್ಲಿ ಕಾತುರ ಹೆಚ್ಚಿಸಿದ್ದಾರೆ.

  English summary
  Nikhil Kumaswamy says he is like Abhimanu in 2019 lokasabha election. Where he lost election with independent condidate Sumalatha.
  Monday, November 29, 2021, 19:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X