ಇದೇ ವರ್ಷ ನಿಖಿಲ್ ಕುಮಾರಸ್ವಾಮಿ ಸಿನಿಮಾ 'ರೈಡರ್' ರಿಲೀಸ್
ಸ್ಯಾಂಡಲ್‌ವುಡ್‌ನ ಯುವರಾಜ ನಿಖಿಲ್ ಕುಮಾರ್ 'ರೈಡರ್' ಸಿನಿಮಾ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಸೀತಾ ರಾಮ ಕಲ್ಯಾಣ ಹಾಗೂ ಕುರುಕ್ಷೇತ್ರ ಸಿನಿಮಾಗಳ ಬಳಿಕ ನಿಖಿಲ್ ಮತ್ತೆ ಬಣ್ಣ ಹಚ್ಚಿದ್ದು, ಈ ಬಾರಿ ಸ್ಟೈಲಿಷ್ ಲುಕ್ ಕೊಟ್ಟು ಅಖಾಡಕ್ಕೆ ಇಳಿಸುತ್ತಿದ್ದಾರೆ. ಈಗಾಗಲೇ ಹಾಡುಗಳು ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದೆ.
Recommended Video
ನಿಖಿಲ್ ಕುಮಾರಸ್ವಾಮಿ ಸದ್ಯ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಸಿನಿಮಾದ ಶೂಟಿಂಗ್ ಇದ್ದಾಗ ಚಿತ್ರೀಕರಣದ ಕಡೆ ಹೆಚ್ಚು ಗಮನ ನೀಡುತ್ತಾರೆ. ಇತ್ತ ಸಿನಿಮಾ ಇಲ್ಲದೆ ಇದ್ದಾಗ, ರಾಜಕೀಯಕ್ಕೆ ಧುಮುಕುತ್ತಾರೆ. ಪಕ್ಷ ಸಂಘಟನೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ. ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡಿದ್ದಾರೆ. ಈಗ ನಿಖಿಲ್ ಅಭಿನಯದ ರೈಡರ್ ಸಿನಿಮಾ ಮುಗಿದಿದ್ದು, ಚಿತ್ರತಂಡ ರಿಲೀಸ್ ಡೇಟ್ ಅನ್ನೂ ಅನೌನ್ಸ್ ಮಾಡಿದೆ.

'ರೈಡರ್' ಸಿನಿಮಾ ರಿಲೀಸ್ ಯಾವಾಗ?
ನಿಖಿಲ್ ಕುಮಾರಸ್ವಾಮಿ ನಾಲ್ಕನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸದ್ದಿಲ್ಲದೆ ನಿಧಾನವಾಗಿ ಶೂಟಿಂಗ್ ಮುಗಿಸಿದ 'ರೈಡರ್' ಗೊತ್ತೇ ಆಗದಂತೆ ಪ್ರಚಾರವನ್ನೂ ಆರಂಭಿಸಿತ್ತು. ಒಂದರ ಹಿಂದೆ ಒಂದು ಹಾಡುಗಳನ್ನು ಬಿಡುಗಡೆ ಮಾಡಿತ್ತು ಚಿತ್ರತಂಡ. ಈ ವರ್ಷ ರೈಡರ್ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಅಂದುಕೊಂಡಿದ್ದ ನಿಖಿಲ್ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ. 'ರೈಡರ್' ಇದೇ ವರ್ಷ ಬಿಡುಗಡೆಯಾಗಲಿದ್ದು, ಡಿಸೆಂಬರ್ 24ಕ್ಕೆ ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ.

ದುಬಾರಿ ಚಿತ್ರಗಳಿಗೆ 'ರೈಡರ್' ಟಕ್ಕರ್
ನಿಖಿಲ್ ಕುಮಾರಸ್ವಾಮಿ ಸಿನಿಮಾ ರೈಡರ್ ಡಿಸೆಂಬರ್ 24 ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ಆದರೆ, ಇದರ ಆಸು-ಪಾಸಿನಲ್ಲಿ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕ್ರಿಸ್‌ಮಸ್‌ಗೆ ರಣ್‌ವೀರ್ ಸಿಂಗ್ ನಟನೆಯ 83 ಬಿಡುಗಡೆಯಾಗುತ್ತಿದೆ. ಇನ್ನೊಂದು ಕಡೆ ಡಿಸೆಂಬರ್ 31ಕ್ಕೆ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರ ರಿಲೀಸ್ ಆಗ್ತಿದೆ. ಜೊತೆ ಹಾಲಿವುಡ್ ಸಿನಿಮಾಗಳು ಕೂಡ ಇದೇ ವೇಳೆ ರಿಲೀಸ್ ಆಗುತ್ತಿದೆ. ಹೀಗಾಗಿ 'ರೈಡರ್'ಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.

'ರೈಡರ್' ಜೊತೆ ದೊಡ್ಡ ತಾರಾಗಣ
'ರೈಡರ್'ಗೆ ವಿಜಯ್ ಕುಮಾರ್ ಕೊಂಡ ನಿರ್ದೇಶನವಿದ್ದು, ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ನಿಖಿಲ್‌ಗೆ ನಾಯಕಿಯಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ ನಟಿಸಿದ್ದರೆ, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ ಕಾಣಿಸಿಕೊಂಡಿದದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಪೋಸ್ಟರ್‌ನಿಂದ ಕಿಕ್ ಕೊಟ್ಟಿರುವ ಈ ಸಿನಿಮಾ ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನುವುದನ್ನು ಸಾಭೀತು ಮಾಡಿದೆ. ಡಾ.ರವಿವರ್ಮ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದತ್ತಣ್ಣ, ಶೋಭರಾಜ್, ಚಿಕ್ಕಣ್ಣ, ಶಿವರಾಜ್.ಕೆ.ಆರ್.ಪೇಟೆ, ರಾಜೇಶ್ ನಟರಂಗ, ಬಿಗ್ ಬಾಸ್ ವಿನ್ನರ್ ಮಂಜು ಕನ್ನಡ ಚಿತ್ರರಂಗದ ದೊಡ್ಡ ಬಳಗವೇ ಸೇರಿದೆ.

ರೈಡರ್ ಬಳಿಕ ಕೌಟುಂಬಿಕ ಸಿನಿಮಾಗೆ ನಿಖಿಲ್ ಸಹಿ
'ರೈಡರ್' ಸಿನಿಮಾ ಬಿಡುಗಡೆಗೂ ಮುನ್ನವೇ ನಿಖಿಲ್ ಕುಮಾರಸ್ವಾಮಿ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಈಗಾಗಲೇ ಐದನೇ ಸಿನಿಮಾಗೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಅನ್ನುವ ಸುದ್ಧಿ ಇದೆ. ಹೊಸ ನಿರ್ದೇಶಕ ಮಂಜು ಅಥರ್ವ ನಿರ್ದೇಶನ ಮಾಡಲಿದ್ದಾರೆ. ಒಟ್ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ 'ರೈಡರ್' ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.


Click it and Unblock the Notifications











