Exclusive: ನಿಖಿಲ್ ಕುಮಾರ್ 'ಯುದುವೀರ' ಸಿನಿಮಾ ಸ್ಥಗಿತ: ನಿರ್ಮಾಣ ಸಂಸ್ಥೆ ಹೇಳಿದ್ದೇನು?

ಇದೇ ವರ್ಷದ ಆರಂಭದಲ್ಲಿ ನಿಖಿಲ್ ಕುಮಾರಸ್ವಾಮಿ ಸಿನಿಮಾ ಸೆಟ್ಟೇರಿತ್ತು. 'ರೈಡರ್' ಸಿನಿಮಾ ಬಳಿಕ ನಿಖಿಲ್ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಗೆ ಹುಟ್ಟುಹಬ್ಬದಂದೇ ತೆರೆ ಎಳೆದಿದ್ದರು. ಯುವರಾಜನ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ನಿಜ. ಸಿನಿಮಾ ಯಾವಾಗ ರಿಲೀಸ್ ಆಗುತ್ತೋ? ಯಾವಾಗ ನೋಡುತ್ತೇವೊ ಅಂತ ಕಾದುಕೂತಿದ್ದವರಿಗೆ ದೊಡ್ಡ ಶಾಕಿಂಗ್ ಸುದ್ದಿಯೊಂದಿದೆ.

ನಿಖಿಲ್ ಕುಮಾರಸ್ವಾಮಿ ಹಾಗೂ ಕೆವಿಎನ್ ಪ್ರೊಡಕ್ಷನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರಿ ಸುಮಾರು 5 ತಿಂಗಳುಗಳೇ ಆಗಿವೆ. ನಿಖಿಲ್ ಬರ್ತ್‌ಡೇಯಂದೇ ಈ ಸಿನಿಮಾಗೆ 'ಯದುವೀರ' ಅಂತ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಸ್ಯಾಂಡಲ್‌ವುಡ್‌ ಯುವರಾಜ 5ನೇ ಸಿನಿಮಾ 'ಯದುವೀರ'ನಾಗಿ ಬದಲಾಗಿದ್ದರು. ರಗಡ್ ಲುಕ್‌ನಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದರು.

'ಯದುವೀರ' ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಇದೂವರೆಗೂ ಒಂದೇ ಒಂದು ಅಪ್‌ಡೇಟ್ ಸಿಕ್ಕಿರಲಿಲ್ಲ. ಬರೋಬ್ಬರಿ 5 ತಿಂಗಳ ಬಳಿಕ 'ಯದುವೀರ'ನ ಅಡ್ಡದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಇದು ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳಿಗೆ ಖಂಡಿತಾ ಬೇಸರ ಆಗಬಹುದೇನೋ. ಅಸಲಿಗೆ 'ಯದುವೀರ' ಅಡ್ಡಾದಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ತಿಳಿಯಲು ಮುಂದೆ ಓದಿ.

'ಯದುವೀರ' ಸಿನಿಮಾ ಸ್ಥಗಿತ

'ಯದುವೀರ' ಸಿನಿಮಾ ಸ್ಥಗಿತ

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ 5ನೇ ಸಿನಿಮಾ 'ಯದುವೀರ'. ಈ ಸಿನಿಮಾಗಾಗಿ ಅಭಿಮಾನಿಗಳು ಕಾದಿದ್ದಷ್ಟೇ ಬಂತು. ಆದರೆ, ಅದ್ಯಾಕೋ ಮುಂದಕ್ಕೇ ಹೋಗುತ್ತಿಲ್ಲ ಅನ್ನೋ ಮಾತು ಹರಿದಾಡುತ್ತಿದೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ನಿಖಿಲ್ ಸಿನಿಮಾ 'ಯದುವೀರ' ತಾತ್ಕಾಲಿಕವಾಗಿ ನಿಂತಿದೆ ಎನ್ನಲಾಗುತ್ತಿದೆ. ನಿರ್ಮಾಣ ಸಂಸ್ಥೆಯಾಗಲಿ ಅಥವಾ ನಿಖಿಲ್ ಕುಮಾಸ್ವಾಮಿಯಾಗಲಿ ಈ ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಅನ್ನೋ ಮಾತು ಕೇಳಿ ಬರುತ್ತಿವೆ.

'ಯದುವೀರ' ಸಿನಿಮಾ ನಿಂತಿದ್ಯಾಕೆ?

'ಯದುವೀರ' ಸಿನಿಮಾ ನಿಂತಿದ್ಯಾಕೆ?

ನಿಖಿಲ್ ಕುಮಾರಸ್ವಾಮಿ ಸಿನಿಮಾವನ್ನು ಮಂಜು ಅಥರ್ವ ನಿರ್ದೇಶನ ಮಾಡುತ್ತಿದ್ದರು. ಇದು ಮಂಜು ಅಥರ್ವ ಅವರ ಚೊಚ್ಚಲ ಸಿನಿಮಾ ಆಗಿತ್ತು. ಆದರೆ, ದುರಾದೃಷ್ಟವಶಾತ್ ಇವರ ಮೊದಲ ಸಿನಿಮಾವೇ ತಾತ್ಕಾಲಿಕವಾಗಿ ನಿಂತಿದೆ ಎಂದು ಸ್ಯಾಂಡಲ್‌ವುಡ್‌ ಮಾತಾಡಿಕೊಳ್ಳುತ್ತಿದೆ. ಮತ್ತೆ 'ಯದುವೀರ' ಸಿನಿಮಾ ಯಾವಾಗ ಶುರುವಾಗುತ್ತೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ. ಇತ್ತ ಕೆವಿಎನ್ ಪ್ರೊಡಕ್ಷನ್ ಕೂಡ ಹೊಸ ಸಿನಿಮಾದ ಕಡೆ ಮುಖ ಮಾಡಿದೆ. ಹಾಗಾಗಿ 'ಯದುವೀರ' ಮತ್ತೆ ಶುರುವಾಗುತ್ತಾ? ಯಾವಾಗ ಆರಂಭ ಆಗುತ್ತೆ? ಎನ್ನುವ ಪ್ರಶ್ನೆಯಂತೂ ಕಾಡುತ್ತಿದೆ.

'ಯದುವೀರ' ಬಗ್ಗೆ ನಿರ್ಮಾಣ ಸಂಸ್ಥೆ ಏನು ಹೇಳುತ್ತೆ?

'ಯದುವೀರ' ಬಗ್ಗೆ ನಿರ್ಮಾಣ ಸಂಸ್ಥೆ ಏನು ಹೇಳುತ್ತೆ?

'ಯದುವೀರ' ಸಿನಿಮಾ ಬಗ್ಗೆ ಇಂತಹ ಸುದ್ದಿ ಹರಿದಾಡುತ್ತಿದ್ದಂತೆ ಕೆವಿಎನ್ ಸಂಸ್ಥೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದೆ. " ಯದುವೀರ ಸಿನಿಮಾ ಶೂಟಿಂಗ್ ನಡೆಯುತ್ತಿಲ್ಲ. ನಿಖಿಲ್ ಕುಮಾರಸ್ವಾಮಿಯವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಯದುವೀರ ಶೂಟಿಂಗ್ ನಡೆಯುತ್ತಿಲ್ಲ. ಸದ್ಯಕ್ಕೆ ನಾವು ಧ್ರುವ ಸರ್ಜಾ ಹಾಗೂ ಪ್ರೇಮ್ ಅವರ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ." ಎಂದು ಕೆವಿಎನ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಸುಪ್ರಿತ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

ರಾಜಕೀಯದಲ್ಲಿ ನಿಖಿಲ್ ಬ್ಯುಸಿ

ರಾಜಕೀಯದಲ್ಲಿ ನಿಖಿಲ್ ಬ್ಯುಸಿ

ನಿಖಿಲ್ ಕುಮಾರಸ್ವಾಮಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲು ರಾಜಕೀಯದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಹಾಗೆ ನೋಡಿದರೆ, ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಷ್ಟರೊಳಗೆ ನಿಖಿಲ್ ಸಿನಿಮಾ ಮುಗಿಸಬೇಕಿತ್ತು. ಆದರೆ, ಇನ್ನೂ ಶೂಟಿಂಗ್ ಮುಗಿಯದೆ ಇರುವುದು ನೋಡಿದರೆ, 'ಯುದುವೀರ' ಚುನಾವಣೆಗೂ ಮುನ್ನ ಮುಗಿಯುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಇತ್ತ ಕೆವಿಎನ್ ಸಂಸ್ಥೆ ಪ್ರತಿಕ್ರಿಯೆ ನೀಡಿದ್ರೂ, ಸಂಪೂರ್ಣ ಮಾಹಿತಿಯನ್ನು ಬಿಟ್ಟುಕೊಡದೆ ಇರುವುದು ಹಲವು ಗೊಂದಲಗಳನ್ನು ಸೃಷ್ಟಿಸಿದೆ.

More from Filmibeat

English summary
Nikhil Kumaraswamy Starrer Yaduveera Movie Stopped Due To Political Reasons, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X