ಪ್ಯಾನ್ ಸಿನಿಮಾ ಅಬ್ಬರದ ನಡುವೆಯೂ ಹಾಫ್ ಸೆಂಚೂರಿ ಬಾರಿಸಿದ 'ಕನ್ನೇರಿ
ಪವರ್ ಫುಲ್ ಕಂಟೆಂಟ್ ಅನ್ನು ಪ್ರೇಕ್ಷಕರಿಗೆ ನೀಡುವಲ್ಲಿ ನಿರ್ದೇಶಕ ನೀನಾಸಂ ಮಂಜು ಸದಾ ಮುಂದೆ. ಅದೇ ರೀತಿ ಈ ಬಾರಿ 'ಕನ್ನೇರಿ' ಸಿನಿಮಾ ಮೂಲಕ ಸಾಮಾಜಿಕ ಕಳಕಳಿ ವಿಷ್ಯವನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ಕಟ್ಟಿದ್ದರು. ಈ ಕಥೆಗೆ ಚಿತ್ರಪ್ರೇಮಿಗಳು ಕೂಡ ಫಿದಾ ಆಗಿದ್ದಾರೆ. ಅದರ ಪ್ರತಿಫಲ ಕನ್ನೇರಿ ಸಿನಿಮಾ ಈಗ ಹಾಫ್ ಸೆಂಚೂರಿ ಬಾರಿಸಿದೆ.

ಒಂದಷ್ಟು ದೊಡ್ಡ ದೊಡ್ಡ ಸಿನಿಮಾಗಳ ನಡುವೆಯೂ ಯಶಸ್ವಿಯಾಗಿ ಸಾಗುತ್ತಿರುವ ನೈಜ ಘಟನೆಯಾಧಾರಿತ 'ಕನ್ನೇರಿ' ಸಿನಿಮಾ ಮಾರ್ಚ್ 4ರಂದು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿತ್ತು. ಒಕ್ಕಲೆಬ್ಬಿಸಿದ ಬುಡಕಟ್ಟು ಮಂದಿಯ ಸ್ಥಿತಿಗತಿ, ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯವನ್ನು ಕಣ್ಣಿಗೆ ಕಟ್ಟುವಂತೆ ನೀನಾಸಂ ಮಂಜು ಚಿತ್ರೀಕರಿಸಿದ್ದರು. ಈ ಕಥೆಯನ್ನು ಉತ್ತರ ಕರ್ನಾಟಕದ ಮಂದಿ ಬಾಚಿ ತಬ್ಬಿಕೊಂಡಿದ್ದಾರೆ. ಅದರಲ್ಲೂ ರಾಯಬಾಗದ ದತ್ತ ಚಿತ್ರಮಂದಿರದಲ್ಲಿ ಕನ್ನೇರಿ ಗೆಲುವಿನ ನಾಗಲೋಟ ಮುಂದುವರೆಸಿದೆ.

ಸದ್ಯದಲ್ಲಿ 'ಕನ್ನೇರಿ' OTTಗೆ ಎಂಟ್ರಿ
ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ 'ಕನ್ನೇರಿ' ಸಿನಿಮಾ ಕೆಲ ದಿನಗಳಲ್ಲಿ ಒಟಿಟಿಗೆ ಎಂಟ್ರಿ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಸೂಕ್ಷ್ಮ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ 'ಕನ್ನೇರಿ' ಸಿನಿಮಾದಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ ಒಳಗೊಂಡ ಅನುಭವಿ ಕಲಾವಿದರ ದಂಡೇ ಇದೆ. 'ಬುಡ್ಡಿದೀಪ ಸಿನಿಮಾ ಹೌಸ್' ಸಂಸ್ಥೆ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ ರಚಿಸಿದ್ದು, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ಕೈಚಳಕ ಈ ಸಿನಿಮಾದಲ್ಲಿದೆ.


Click it and Unblock the Notifications











