For Quick Alerts
  ALLOW NOTIFICATIONS  
  For Daily Alerts

  ನಿನ್ನಿಂದಲೇ ಚಿತ್ರದ ನಾಯಕಿ ದರ್ಶನ್ ಚಿತ್ರದಿಂದ ಔಟ್

  |

  ಪುನೀತ್ ರಾಜಕುಮಾರ್ ಅಭಿನಯದ ನಿನ್ನಿಂದಲೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಎರಿಕಾ ಫರ್ನಾಂಡಿಸ್, ದರ್ಶನ್ ಅಭಿನಯದ ಮುಂದಿನ ಚಿತ್ರ 'ಐರಾವತ'ದಿಂದ ಹೊರಬಿದ್ದಿದ್ದಾರೆ.

  ಎರಿಕಾ ಈ ಚಿತ್ರದಿಂದ ಹೊರಬಿದ್ದಿರುವ ವಿಷಯವನ್ನು ಐರಾವತ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್ ಖಚಿತ ಪಡಿಸಿದ್ದಾರೆ. ಎರಿಕಾ ಚಿತ್ರದಿಂದ ಹೊರಬಿದ್ದಿರುವುದಕ್ಕೆ ಕಾರಣ ಆಕೆಯ ಪರ್ಸನಾಲಿಟಿ. (ಗೋಲ್ಡನ್ ಸ್ಟಾರ್ ಜೊತೆ ಬುಗುರಿ ಆಡಲಿರುವ ಎರಿಕಾ)

  ಚಿಕನ್ ಪಾಕ್ಸ್ ಕಾಯಿಲೆಯಿಂದ ಈಗತಾನೇ ಚೇತರಿಸಿಕೊಳ್ಳುತ್ತಿರುವ ಎರಿಕಾ ಸಿಕ್ಕಾಪಟ್ಟೆ ಸಪೂರವಾಗಿರುವುದರಿಂದ ಈ ನಿರ್ಧಾರ ತೆಗೆದು ಕೊಳ್ಳಬೇಕಾಯಿತು ಎನ್ನುತ್ತಾರೆ ನಿರ್ದೇಶಕ ಅರ್ಜುನ್.

  ಎರಿಕಾಗೆ ದಪ್ಪಗಾಗಲು ಕೆಲವು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಈಗ ಆಕೆಯ ಪರ್ಸನಾಲಿಟಿ ದರ್ಶನ್ ಜೊತೆ ಸರಿ ಹೋಗುತ್ತಿಲ್ಲ. ಹಾಗಾಗಿ ಅವರನ್ನು ಈ ಪ್ರಾಜೆಕ್ಟಿನಿಂದ ಕೈಬಿಡಲಾಗಿದೆ. ಇದಕ್ಕೆ ಬೇರೇನೂ ಕಾರಣವಿಲ್ಲ ಎಂದು ಅರ್ಜುನ್ ಹೇಳಿದ್ದಾರೆ.

  ಚಿತ್ರದ ನಿರ್ಮಾಪಕರಿಗೆ ಮತ್ತು ನಟ ದರ್ಶನ್ ಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ ಮತ್ತು ಅವರ ಅನುಮತಿಯನ್ನೂ ಪಡೆದಿದ್ದೇನೆ. ಚಿತ್ರಕ್ಕೆ ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಬೇಕೆನ್ನುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಆದಷ್ಟು ಬೇಗ ನಾಯಕಿಯನ್ನು ಆಯ್ಕೆಮಾಡಲಾಗುವುದು ಎಂದು ಅರ್ಜುನ್ ಹೇಳಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿರುವ ಮತ್ತು ಎಂ ಡಿ ಶ್ರೀಧರ್ ನಿರ್ದೇಶನದ 'ಬುಗುರಿ' ಚಿತ್ರಕ್ಕೂ ಎರಿಕಾ ಫರ್ನಾಂಡಿಸ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಬುಗುರಿ ಚಿತ್ರದಿಂದ ಏನು ಸುದ್ದಿ ಬರುತ್ತೋ ಮಾಹಿತಿಯಿಲ್ಲ.

  English summary
  Challenging Star Darshan starrer 'Airavatha' which is being directed by A P Arjun is witnessing a major change. Erica Fernandes who was selected as the heroine opposite Darshan has been dropped from the project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X