Nithyananda: "ನಿತ್ಯಾನಂದ ಸತ್ತಿಲ್ಲ, ಸೇಫ್ ಆಕ್ಟಿವ್ ಆಗಿದ್ದಾರೆ"; ಕೈಲಾಸದಿಂದ ಹೇಳಿಕೆ ರಿಲೀಸ್

ಇತ್ತೀಚೆಗೆ ಸ್ವಯಂ ಘೋಷಿತಾ ದೇವಮಾನವ ನಿತ್ಯಾನಂದನ ಸಾವಿನ ಬಗ್ಗೆ ಸುದ್ದಿಯೊಂದು ಹರಡಿತ್ತು. ಇದು ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿತ್ತು. ವಿವಿಧ ಆರೋಪಗಳನ್ನು ಹೊತ್ತು ದೇಶದಿಂದ ಪರಾರಿಯಾಗಿರುವ ನಿತ್ಯಾನಂದನ ಸಾವಿನ ಸುದ್ದಿ ನಿಜವೋ? ಸುಳ್ಳೋ? ಎನ್ನುವುದಕ್ಕೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಈಗ ಸ್ವತ: ಕೈಲಾಸದಿಂದಲೇ ಆತನ ಸಾವಿನ ಕುರಿತ ಸುದ್ಧಿಯ ಬಗ್ಗೆ ಹೇಳಿಕೆ ಬಿಡುಗಡೆಯಾಗಿದೆ.'ಕೈಲಾಸ' ನಿತ್ಯಾನಂದನ ಕಾಲ್ಪನಿಕ ದೇಶ.

ಭಾರತದಿಂದ ಪರಾರಿಯಾಗಿದ ಬಳಿಕ ನಿತ್ಯಾನಂದ ಹೇಳಿಕೊಂಡಿರುವ ದೇಶವಿದು. ಇತ್ತೀಚೆಗೆ ನಿತ್ಯಾನಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆಂದು ಸುದ್ಧಿಯಾಗಿತ್ತು. ಈ ಹಿಂದೆ ಕೂಡ ನಿತ್ಯಾನಂದ ಸಾವಿನ ಸುದ್ಧಿ ಹೀಗೆ ಹರಿಡಿತ್ತು. ಆದರೆ, ಏಪ್ರಿಲ್ 1 ರಂದು ಮತ್ತೆ ನಿತ್ಯಾನಂದ ಸಾವಿನ ಸುದ್ದಿ ಹೊರ ಬಿದ್ದಿತ್ತು. ಇದು ನಿಜನಾ? ಇಲ್ಲ ಏಪ್ರಿಲ್ ಫೂಲ್ ಮಾಡುವುದಕ್ಕೆ ಸುಳ್ಳು ಸುದ್ಧಿ ಹಬ್ಬಿಸಿದ್ದಾ? ಎನ್ನುವ ಪ್ರಶ್ನೆ ಹುಟ್ಟಿತ್ತು.

Nithyananda is safe and active statement issued by Kailasa denying death rumour

ನಿತ್ಯಾನಂದ ಸಾವನ್ನಪ್ಪಿದ್ದಾನೆ ಎನ್ನುವ ಸುದ್ಧಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಹೇಳಿಕೆಯೊಂದು ಹೊರಬಿದ್ದಿದೆ. ಕೈಲಾಸದಿಂದ ರಿಲೀಸ್ ಮಾಡಲಾದ ಹೇಳಿಕೆಯಲ್ಲಿ ನಿತ್ಯಾನಂದ ಬದುಕಿದ್ದು, ಸುರಕ್ಷಿತವಾಗಿ ಹಾಗೂ ಆಕ್ಟಿವ್ ಆಗಿದ್ದಾರೆ ಎಂದು ಹೇಳಲಾಗಿದೆ. ಕೈಲಾಸಾಸ್ ಎಸ್‌ಪಿಎಚ್‌ ನಿತ್ಯಾನಂದ ಎನ್ನುವ ಎಕ್ಸ್‌ ಖಾತೆಯಲ್ಲಿ ನಿತ್ಯಾನಂದನ ಸಾವಿನ ಸ್ಪಷ್ಟತೆಯನ್ನು ನೀಡಲಾಗಿದೆ.

ನಿತ್ಯಾನಂದನ ಕೈಲಾಸದಿಂದ ಹೇಳಿಕೆಯ ಜೊತೆಗೆ ಲೈವ್ ಲಿಂಕ್ ಒಂದನ್ನು ಸೇರಿಸಲಾಗಿದೆ. ಇದರಲ್ಲಿ ಮಾರ್ಚ್ 30ರಂದು ಪಲಾಯನಗೊಂಡ ಸ್ವಯಂ ಘೋಷಿತಾ ದೇವಮಾನ ನಿತ್ಯಾನಂದ ಯುಗಾದಿ ಹಬ್ಬದ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ತೋರಿಸಲಾಗಿದೆ. ಅಷ್ಟೇ ಅಲ್ಲದೆ "ನಿತ್ಯಾನಂದ ಬದುಕಿದ್ದು, ಆರೋಗ್ಯವಾಗಿದ್ದಾರೆ. ಸುರಕ್ಷಿತವಾಗಿ ಹಾಗೂ ಆಕ್ಟಿವ್ ಆಗಿದ್ದಾರೆ" ಎಂದು ಎಕ್ಸ್‌ ಖಾತೆಯಲ್ಲಿ ಹೇಳಿಕೊಳ್ಳಲಾಗಿದೆ.

ವಿವಾದಾತ್ಮಕ ಸ್ವಾಮಿಜಿ ನಿತ್ಯಾನಂದ 2019ರಲ್ಲಿ ದೇಶದಿಂದ ಪರಾರಿಯಾಗಿದ್ದ. ಬಳಿಕ ಕೈಲಾಸ ದೇಶವನ್ನು ಸ್ಥಾಪನೆ ಮಾಡಿದ್ದಾಗಿ ಹೇಳಿಕೊಂಡಿದ್ದನು. ಆದರೆ, ಇದೂವರೆಗೂ ಆ ದೇಶ ಎಲ್ಲಿದೆ ಅನ್ನೋದು ಸ್ಥಳದ ಸುಳಿವನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ. ಕೈಲಾಸ ಸೇರಿದ ದಿನಗಳಿಂದ ನಿತ್ಯಾನಂದನ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇವೆ. ನಿತ್ಯಾನಂದನಿಗೆ ಗಂಭೀರ ಆರೋಗ್ಯ ಸಮಸ್ಯೆಗಳಿವೆ, ಕೋಮಾದಲ್ಲಿ ಇದ್ದಾನೆ, ನಿತ್ಯಾನಂದ ಸತ್ತೇ ಹೋಗಿದ್ದಾನೆ ಎನ್ನುವ ಸುದ್ದಿಗಳು ಆಗಾಗ ಕೇಳಿ ಬರುತ್ತಿವೆ. ಆದರೆ, ಇಂತಹ ಸುದ್ದಿಗಳು ಹಬ್ಬಿದಾಗಲೆಲ್ಲ ನಿತ್ಯಾನಂದ ವಿಡಿಯೋ ಮೂಲಕ ಪ್ರತ್ಯಕ್ಷ ಆಗಿದ್ದು ಕೂಡ ಇದೆ.

ಇನ್ನು ನಿತ್ಯಾನಂದನ ಸುತ್ತ ವಿವಾದಗಳೇನು ಕಮ್ಮಿಯಿಲ್ಲ. 2010ರಲ್ಲಿ ನಿತ್ಯಾನಂದನನ್ನು ಹಿಮಾಚಲ ಪ್ರದೇಶದಲ್ಲಿ ಸೋಲನ್ ಎಂಬ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಬೆಂಗಳೂರಿನಲ್ಲಿ ಇವರ ಬಗ್ಗೆ ದೂರು ದಾಖಲಾಗಿತ್ತು. ಆದರೆ, ಬಹುಬೇಗನೇ ನಿತ್ಯಾನಂದನಿಗೆ ಜಾಮೀನು ಸಿಕ್ಕಿತ್ತು. 2012ರಲ್ಲಿ ಅಮೆರಿಕದ ಮಹಿಳೆಯೊಬ್ಬರು 5 ವರ್ಷಗಳ ಕಾಲ ನಿತ್ಯಾನಂದ ಕಿರುಕುಳ ನೀಡಿದ್ದಾಗಿ ಆರೋಪ ಮಾಡಿದ್ದರು. ಇದು ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.

2019ರಲ್ಲಿ ನಿತ್ಯಾನಂದನ ವಿರುದ್ಧ ಗುಜರಾತ್‌ನ ಅಹಮದಾಬಾದ್‌ನಲ್ಲಿ ದೂರು ದಾಖಲಾಗಿತ್ತು. ನಿತ್ಯಾನಂದನ ಜೊತೆ ಒಡನಾಟ ಹೊಂದಿದ್ದ ಇಬ್ಬರು ದೂರು ದಾಖಲಿಸಿದ್ದರು. ಈ ಸಂಬಂಧ ಗುಜರಾತ್ ಹೈ ಕೋರ್ಟ್ ನೋಟೀಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಆಶ್ರಮದ ಇಬ್ಬರು ವ್ಯವಸ್ಥಾಪಕರನ್ನು ಅರೆಸ್ಟ್ ಮಾಡಿದ್ದರು. ಇದೇ ವರ್ಷ ಭಾರತವನ್ನು ತೊರೆದಿದ್ದ ನಿತ್ಯಾನಂದನ ವಿರುದ್ಧ ಸಾಕಷ್ಟು ಕೇಸ್‌ಗಳು ದಾಖಲಾಗಿವೆ. ಬಂಧನ ಭೀತಿಯನ್ನು ಎದುರಿಸಿದ್ದ ನಿತ್ಯಾನಂದ ದೇಶವನ್ನು ತೊರೆದು ಪರಾರಿಯಾಗಿದ್ದ.

More from Filmibeat

English summary
Nithyananda is safe and active statement issued by Kailasa denying death rumour;
Read more about: nithyananda statement controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X