ವಿಚ್ಛೇದನದ ಬಳಿಕ ನಿವೇದಿತಾ ಗೌಡ ರೀಲ್ಸ್: ಕಾಮೆಂಟ್ ಮಾಡುವ ಮುನ್ನ ಶೆಡ್ ನೆನಪಿಸಿಕೊಂಡ ನೆಟ್ಟಿಗರು
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇದು ಅವರ ಫ್ಯಾನ್ಸ್‌ಗೆ, ಆಪ್ತರಿಗೆ ಶಾಕ್ ಕೊಟ್ಟಿದ್ದಂತೂ ನಿಜ. ಆದರೆ, ಇಬ್ಬರೂ ಮುಂದೆ ಬಂದು ತಾವು ಬೇರೆ ಆಗುತ್ತಿರೋದು ಯಾಕೆ? ಅನ್ನೋದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ.
ಹೀಗಿದ್ದರೂ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುವುದನ್ನಂತೂ ನಿಲ್ಲಿಸಿಲ್ಲ. ಡಿವೋರ್ಸ್ ಬಳಿಕ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಿಂದ ಕೆಲವು ದಿನ ಅಂತರವನ್ನು ಕಾಯ್ದುಕೊಂಡಿದ್ದರು. ಆದರೆ, ಚಂದನ್ ಶೆಟ್ಟಿ ಸಿನಿಮಾ ಸಮಾರಂಭದಲ್ಲಿ ಹಾಗೂ ಯೂಟ್ಯೂಬ್ ಸಂದರ್ಶನದಲ್ಲಿ ಭಾಗಿಯಾಗಿದ್ದರು.

ಈಗ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಮೊದಲ ರೀಲ್ಸ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ರೀಲ್ಸ್ ಕೂಡ ವೈರಲ್ ಆಗುತ್ತಿದ್ದು, ನೆಟ್ಟಿಗರು ಒಂದರ ಹಿಂದೊಂದು ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಈ ರೀಲ್ಸ್ ಬಗ್ಗೆ ಸಖತ್ ಇಂಟ್ರೆಸ್ಟಿಂಗ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ನಿವೇದಿತಾ ಗೌಡ ಹೊಸ ರೀಲ್ಸ್‌ನಲ್ಲಿ ಖುಷಿಯಾಗಿದ್ದಂತೆ ಕಂಡು ಬಂದಿದೆ. ನಗು ಮುಖದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಆ ವಿಡಿಯೋಗೆ ಸುಮಾರು 48 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಹಾಗೇ ಕಾಮೆಂಟ್‌ಗಳಿಗೇನು ಕಮ್ಮಿಯಿಲ್ಲ. ವಿಶೇಷ ಅಂದರೆ, ಕಾಮೆಂಟ್‌ಗಳನ್ನು ಮಾರ್ಮಿಕವಾಗಿ ಮಾಡುತ್ತಿದ್ದಾರೆ. ನೆಟ್ಟಿಗರ ಕಾಮೆಂಟ್‌ಗಳು ಹೇಗಿವೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಒಬ್ಬರಿಗೆ ಕಾಮೆಂಟ್ ಹಾಕೋಕೂ ಮುಂಚೆ ಪಟ್ಟಣಗೆರೆ ಶೆಡ್ ನೆನಪು ಮಾಡಿಕೊಂಡು ಹಾಕ್ರಿ" ಅಂತ ಇಬ್ಬರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹಾಗೇ ಇನ್ನೊಬ್ಬರು "ಏನೋ ಬಂದಿತ್ತು ಬಾಯಿಗೆ, ಆದ್ರೆ ಶೆಡ್ ನೆನಪು ಆಗಿ ಸುಮ್ಮನೆ ಅದೆ" ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ನಾನ್ ಕಾಮೆಂಟ್ ನೋಡ್ಕೊಂಡ್ ಹೋಗ್ತೀನಪ್ಪಾ.. ಯಾಕ್ ಬೇಕು ಶೆಡ್ ಸಹವಾಸ" ಅಂತ ಕಾಮೆಂಟ್ ಮಾಡುವುದಕ್ಕೆ ಮುಂದಾಗಿದ್ದಾರೆ.
ನಿವೇದಿತಾ ಹೊಸ ರೀಲ್ಸ್ ಮಾಡಿದ್ದು ಹಾಗೆ ಕೆಲವರಿಗೆ ಖುಷಿ ಕೊಟ್ಟಿದೆ. ವಿಚ್ಛೇದನದಂತಹ ನೋವನ್ನು ಧೈರ್ಯವಾಗಿ ಎದುರಿಸಿದ್ದಕ್ಕೆ ಮೆಚ್ಚುಗೆಯನ್ನೂ ಸೂಚಿಸುತ್ತಿದ್ದಾರೆ. ವಿಚ್ಛೇದನದ ಬಳಿಕ ನಿವೇದಿತಾ ಗೌಡ ಮುಂದಿನ ದಾರಿ ಏನು? ರಿಯಾಲಿಟಿ ಶೋನಾ? ಸಿನಿಮಾನಾ? ಅಥವಾ ಬೇರೆ ಏನಾದರೂ ಪ್ಲ್ಯಾನ್ ಇದೆಯಾ ಅನ್ನೋದನ್ನು ಇನ್ನು ಬಿಟ್ಟುಕೊಟ್ಟಿಲ್ಲ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ಬಳಿಕ ಈ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದರು. ಇಬ್ಬರಿಗೂ ಹೊಂದಾಣಿಕೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ದಿನಾ ನೋವಿನಲ್ಲಿ ಇರುವುದಕ್ಕಿಂತ ಬೇರೆಯಾಗುವುದೇ ಒಳ್ಳೆಯದೆಂದು ನಿರ್ಧರಿಸಿದ್ದೆವು ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
ಚಂದನ್ ಶೆಟ್ಟಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಂದನ್ ಶೆಟ್ಟಿ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಬಿಡುಗಡೆಗೂ ಸಜ್ಜಾಗಿದೆ. ಇದರ ಜೊತೆಗೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಜೊತೆಯಾಗಿ 'ಕ್ಯಾಂಡಿಕ್ರಶ್' ಅನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾವಿನ್ನೂ ಚಿತ್ರೀಕರಣದ ಹಂತದಲ್ಲಿದೆ.


Click it and Unblock the Notifications











