Niveditha Gowda: ನಿವೇದಿತಾ ಗೌಡ ಕರೆಗೆ ಬೆದರಿ ಚಂದನ್ ಶೆಟ್ಟಿ ಓಡಿ ಬಂದಿದ್ದೇಕೆ?

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಸ್ಯಾಂಡಲ್‌ವುಡ್‌ನ ಹ್ಯಾಪನಿಂಗ್ ಪೇರ್. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ಏನಾದರೂ ಒಂದು ವಿಷಯಕ್ಕೆ ವಿಡಿಯೋ ಮಾಡಿ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಈ ವಿಡಿಯೋಗಳನ್ನು ಅವರ ಫ್ಯಾನ್ಸ್ ಕೂಡ ಕಮೆಂಟ್ ಮಾಡುತ್ತಾರೆ.

ಚಂದನ್ ಶೆಟ್ಟಿಯನ್ನು ನಿವೇದಿತಾ ಗೌಡ ಆಗಾಗ ತನ್ನ ಮಾತುಗಳಿಂದ ಬೆಚ್ಚಿಬೀಳಿಸುತ್ತಲೇ ಇರುತ್ತಾರೆ. ನಿವೇದಿತಾ ಪತಿಗೆ ಗಿಮಿಕ್ ಮಾಡಿ ಚಮಕ್ ಕೊಡುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈಗ ಮತ್ತೊಂದು ವಿಡಿಯೋ ಬೇಜಾನ್ ಸದ್ದು ಮಾಡುತ್ತಿದೆ.

ನಿವೇದಿತಾ ಗೌಡ ಪತಿ ಚಂದನ್ ಶೆಟ್ಟಿಗೆ ಒಂದು ಪೋನ್ ಕಾಲ್ ಮಾಡಿದ್ದರು. ಆ ವಿಡಿಯೋ ನೋಡಿ ಚಂದನ್ ಶೆಟ್ಟಿಗೆ ಗಾಬರಿಯಿಂದ ಓಡೋಡಿ ಬಂದಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ನಿವೇದಿತಾ ಮಾಡಿದ ವಿಡಿಯೋದಲ್ಲಿ ಅಂತಹದ್ದೇನಿದೆ? ಚಂದನ್ ಶೆಟ್ಟಿ ಓಡೋಡಿ ಬಂದಿದ್ದೇಕೆ ತಿಳಿಯಲು ಮುಂದೆ ಓದಿ.

ಹಲ್ಲು ಮುರಿದುಕೊಂಡ್ರಾ ನಿವೇದಿತಾ?

ಹಲ್ಲು ಮುರಿದುಕೊಂಡ್ರಾ ನಿವೇದಿತಾ?

ನಿವೇದಿತಾ ಗೌಡ ಮನೆಯಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಾರಂತೆ. ಹೀಗಂತ ಪತಿ ಚಂದನ್ ಶೆಟ್ಟಿಗೆ ಅವರೇ ಫೋನ್ ಮಾಡಿ ಹೇಳಿದ್ದಾರೆ. ಇದನ್ನು ವಿಡಿಯೋ ಕೂಡ ಮಾಡಿದ್ದಾರೆ. ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ನಿವೇದಿತಾ ಗೌಡ ಮನೆಯಲ್ಲಿ ಹಲ್ಲು ಮುರಿದುಕೊಂಡಿದ್ದಾರಂತೆ ಅನ್ನುವ ಸುದ್ದಿ ಎಲ್ಲಾ ಕಡೆ ಹಬ್ಬಿದೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ನಿವೇದಿತಾ ಶಾಕ್‌ಗೆ ಚಂದನ್ ಪ್ರತಿಕ್ರಿಯೆ ಏನು?

ನಿವೇದಿತಾ ಶಾಕ್‌ಗೆ ಚಂದನ್ ಪ್ರತಿಕ್ರಿಯೆ ಏನು?

ನಿವೇದಿತಾ ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಆಟ ಆಡುತ್ತಿದ್ದರಂತೆ. ಆ ವೇಳೆ ನಿವೇದಿತಾ ಗೌಡ ಕಾಲು ಜಾರಿ ಬಿದ್ದಿದ್ದು, ಹಲ್ಲು ಮುರಿದುಕೊಂಡಿದ್ದಾಗಿ, ಪತಿ ಚಂದನ್‌ಗೆ ಫೋನ್ ಮಾಡಿ ಹೇಳಿದ್ದಾರೆ. ಈ ವಿಷಯ ಕೇಳಿ ಶಾಕ್ ಆಗಿರುವ ಚಂದನ್ ಶೆಟ್ಟಿ ಓಡೋಡಿ ಬಂದಿದ್ದಾರೆ. ಚಂದನ್ ಶೆಟ್ಟಿ ತಮ್ಮ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರಂತೆ. ಪತ್ನಿ ಹಲ್ಲು ಮುರಿದುಕೊಂಡಿರುವ ವಿಷಯ ಕೇಳಿದೊಡನೆ ಓಡೋಡಿ ಬಂದಿದ್ದಾರೆ. ಆಗ ಪತ್ನಿ ನಿವೇದಿತಾ ಗೌಡ ಮತ್ತೊಂದು ಶಾಕ್ ಕೊಟ್ಟಿದ್ದಾರೆ.

ಚಂದನ್‌ಗೆ ಫೂಲ್ ಮಾಡಿದ ನಿವೇದಿತಾ

ಚಂದನ್‌ಗೆ ಫೂಲ್ ಮಾಡಿದ ನಿವೇದಿತಾ

ಅಷ್ಟಕ್ಕೂ ನಿವೇದಿತಾ ಗೌಡ ಇಷ್ಟೆಲ್ಲಾ ಮಾಡಿದ್ದು ಏಪ್ರಿಲ್ ಫೂಲ್‌ಗಾಗಿ. ಹೌದು, ಚಂದನ್ ಶೆಟ್ಟಿಗೆ ಏಪ್ರಿಲ್ ಫೂಲ್ ಮಾಡಲೇ ಬೇಕು ಅಂತ ನಿರ್ಧರಿಸಿದ್ದ ನಿವೇದಿತಾ ಪತಿ ಚಂದನ್‌ಗೆ ಕಾಲ್ ಮಾಡಿದ್ದರು. ಇದನ್ನು ವಿಡಿಯೋ ಕೂಡ ಮಾಡಿದ್ದರು. ಚಂದನ್ ಶೆಟ್ಟಿ ಶಾಕ್ ಆದ ವಿಡಿಯೋವನ್ನು ತಮ್ಮ ಯುಟ್ಯೂಬ್‌ನಲ್ಲಿ ಶೇರ್ ಮಾಡಿದ್ದಾರೆ.

Recommended Video

Beast ಚಿತ್ರಕ್ಕೆ ಎದುರಾಯ್ತು ದೊಡ್ಡ ಸಂಕಷ್ಟ | Vijay Beast | Pooja Hegde
ಚಂದನ್- ನಿವೇದಿತಾಗಿದ್ದಾರೆ ಫಾಲೋವರ್ಸ್

ಚಂದನ್- ನಿವೇದಿತಾಗಿದ್ದಾರೆ ಫಾಲೋವರ್ಸ್

ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಹಾಗೂ ನಿವೇದಿತಾ ಗೌಡಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ಅದರಲ್ಲೂ ನಿವೇದಿತಾ ಗೌಡರನ್ನು 1 ಮಿಲಿಯನ್ ಮಂದಿ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದರೆ, ಒಂದು ಲಕ್ಷಕ್ಕೂ ಅಧಿಕ ಮಂದಿ ಯುಟ್ಯೂಬ್ ಸಬ್‌ಸ್ಕ್ರೈಬರ್ ಹೊಂದಿದ್ದಾರೆ. ಇನ್ನು ಪತಿಗೆ ಫ್ರಾಂಕ್ ಮಾಡಿದ ವಿಡಿಯೋ ಯುಟ್ಯೂನ್‌ನಲ್ಲಿ ಸುಮಾರು ಒಂದೂವರೆಗೂ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

More from Filmibeat

English summary
Niveditha Gowda Frank Video Shocks Husband Chandan Shetty. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X