'ಕೆಡಿ' ಯುದ್ಧಭೂಮಿಗೆ ಬಂದ ಮತ್ತೊಬ್ಬ ಬಾಲಿವುಡ್ ನಟಿ; ಪ್ರೇಮ್ ಅಡ್ಡಾದಲ್ಲಿ ನೂರಾ ಫತೇಹಿ

2024ರಲ್ಲಿ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿರುವ ಕನ್ನಡ ಸಿನಿಮಾಗಳಲ್ಲಿ ಪಟ್ಟಿಯಲ್ಲಿ 'ಕೆಡಿ' ಮುಂಚೂಣಿಯಲ್ಲಿದೆ. ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ರಗಡ್ ಲುಕ್‌ನಲ್ಲಿ ನಟಿಸುತ್ತಿರುವ ಈ ಸಿನಿಮಾ ಮೇಲೆ ಎಲ್ಲರ ಕಣ್ಣಿರೋದಂತೂ ನಿಜ. ಅದರಲ್ಲೂ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿರೋದ್ರಿಂದ ಈ ಸಿನಿಮಾ ಮೇಲೆ ನಿರೀಕ್ಷೆ ಸ್ವಲ್ಪ ಜಾಸ್ತಿನೇ ಇದೆ.

ಅಂಡರ್‌ವರ್ಲ್ಡ್ ಸಿನಿಮಾ ನಿರ್ದೇಶನ ಮಾಡುವುದರಲ್ಲಿ ಪ್ರೇಮ್ ಎತ್ತಿದ ಕೈ. ಈ ಹಿಂದೆ ಪ್ರೇಮ್ ನಿರ್ದೇಶಿಸಿದ 'ಕರಿಯಾ' ಹಾಗೂ 'ಜೋಗಿ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. ಈಗ ಮತ್ತೆ ಭೂಗತಲೋಕಕ್ಕೆ ಇಳಿದಿದ್ದಾರೆ. 'ಕೆಡಿ' ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

Nora Fatehi joins Jogi Prem Directed Dhruva Sarja Sanjay Dutt Starrer KD Movie

ಕನ್ನಡದ ಮತ್ತೊಂದು ಶ್ರೀಮಂತ ನಿರ್ಮಾಣ ಸಂಸ್ಥೆ ಕೆವಿನ್ ಪ್ರೊಡಕ್ಷನ್ಸ್ 'ಕೆಡಿ' ಸಿನಿಮಾ ಹಣ ಸುರಿಯುತ್ತಿದೆ. ಜೋಗಿ ಪ್ರೇಮ್ ಅಂತೂ ಬಾಲಿವುಡ್‌ನಿಂದ ದೊಡ್ಡ ಸ್ಟಾರ್ ನಟರನ್ನು ಈ ಸಿನಿಮಾ ಕರೆದುಕೊಂಡು ಬರುತ್ತಿದೆ. ಈಗಾಗಲೇ ಬಾಲಿವುಡ್ ನಟ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಮತ್ತೊಬ್ಬ ನಟಿಯನ್ನು ಕರೆದುಕೊಂಡು ಬಂದಿದ್ದಾರೆ.

ಕ್ಯಾಬರೇ ಹಾಗೂ ಸ್ಪೆಷಲ್ ಸಾಂಗ್‌ಗಳಿಂದ ಜನಪ್ರಿಯತೆ ಗಿಟ್ಟಿಸಿಕೊಂಡಿರೋ ಬಾಲಿವುಡ್ ನಟಿ ನೂರಾ ಫತೇಹಿ 'ಕೆಡಿ' ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಸಿನಿಮಾ ಸತ್ಯ ಮೇವ ಜಯತೆಯ ದಿಲ್‌ಬರ್ ಹಾಡಿಗೆ ಹೆಜ್ಜೆ ಹಾಕಿ ಹುಡುಗ ನಿದ್ದೆ ಕದ್ದಿದ್ದರು. ಇಲ್ಲಿಂದ ನೂರಾ ಫತೇಹಿಗೆ ಸ್ಪೆಷಲ್ ಸಾಂಗ್‌ಗಳಿಗೆ ಬೇಡಿಕೆ ಹೆಚ್ಚಿದೆ. ಈಗಾಗಲೇ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಸ್ಪೆಷಲ್ ಹಾಡುಗಳಿಗೆ ಹೆಜ್ಜೆ ಹಾಕಿರೋ ನೂರಾ ಫತೇಹಿ 'ಕೆಡಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡಿಗೆ ನೂರಾ ಫತೇಹಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಹೆಜ್ಜೆ ಹಾಕಿದ್ದಾರೆ. ಜನಪ್ರಿಯ ನೃತ್ಯ ನಿರ್ದೇಶಕ ರಾಜು ಸುಂದರಂ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ವಿಡಿಯೋವನ್ನು ಪ್ರೇಮ್ ರಿವೀಲ್ ಮಾಡಿದ್ದು, ಸಂಜಯ್ ದತ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಸ್ಪೆಷಲ್ ಸಾಂಗ್‌ನಲ್ಲಿ ನೂರಾ ಫತೇಹಿ ಜೊತೆ ಸಂಜಯ್ ದತ್ ಕೂಡ ಕಾಣಿಸಿಕೊಳ್ಳುತ್ತಾರಾ? ಅನ್ನೋದನ್ನು ಬಿಟ್ಟುಕೊಟ್ಟಿಲ್ಲ.

Nora Fatehi joins Jogi Prem Directed Dhruva Sarja Sanjay Dutt Starrer KD Movie

ಬಾಲಿವುಡ್ ನಟಿ ನೂರಾ ಫತೇಹಿ 'ಕೆಡಿ'ಗಾಗಿ ಬೆಂಗಳೂರಿಗೆ ಬಂದಿದ್ದನ್ನು ಜೋಗಿ ಪ್ರೇಮ್ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇದೇ ವರ್ಷ ಸಿನಿಮಾ ಬಿಡುಗಡೆ ಆಗುವುದಾಗಿಯೂ ಹೇಳಿದ್ದಾರೆ. ಹೀಗಾಗಿ 'ಕೆಡಿ' ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಲೇ ಇದೆ.

ಇನ್ನು ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣರಂತೆ ನಟಿ ನೂರಾ ಫತೇಹಿ ಕೂಡ ಡೀಪ್‌ಫೇಕ್‌ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಉಡುಪಿನ ಜಾಹೀರಾತು ಕಂಪನಿಯೊಂದರ ನೂರಾ ಫತೇಹಿ ಡೀಪ್‌ಫೇಕ್ ವಿಡಿಯೋ ಮಾಡಲಾಗಿತ್ತು. ಇದನ್ನು ಸ್ವತ: ನೂರಾ ಫತೇಹಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದರು.

More from Filmibeat

English summary
Bollywood actress Nora Fatehi mark Kannada debut with special song for KD movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X