ಮಾಲ್ಡೀವ್ಸ್ ಬೀಚ್‌ನಲ್ಲಿ ಸಪ್ತಮಿ ಗೌಡ: ಬಾಲಿವುಡ್‌ ಮಂದಿಗಷ್ಟೇ ಅಲ್ಲ.. ಕನ್ನಡದ ಸ್ಟಾರ್‌ಗಳಿಗೂ ಫೇವರೀಟ್ ಈ ದ್ವೀಪ!

ಬಾಲಿವುಡ್‌ ಸೆಲೆಬ್ರೆಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್. ಪ್ರವಾಸಕ್ಕೆ ಹೋಗಬೇಕು ಅನ್ನೋ ಮೂಡು ಬಂದರೆ ಸಾಕು ಮಾಲ್ಡೀವ್ಸ್‌ಗೆ ಹಾರಿ ಬಿಡುತ್ತಾರೆ. ಹೀಗಾಗಿ ಸುಂದರ ದ್ವೀಪಗಳ ಮಧ್ಯೆ ಕಳೆದು ಹೋಗುತ್ತಾರೆ. ಬಿಕಿನಿ ತೊಟ್ಟು ಸೂರ್ಯನಿಗೆ ಮುಖವೊಡ್ಡಿ ಮಸ್ತ್ ಆಗಿ ಎಂಜಾಯ್ ಮಾಡುತ್ತಾರೆ. ಗ್ಯಾಪ್‌ನಲ್ಲೊಂದೊಂದು ಫೋಟೊ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾಗೂ ಹಾಕುತ್ತಾರೆ. ಒಬ್ಬರ ಹಿಂದೊಬ್ಬರಂತೆ ಒಬ್ಬರು ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡಿ ಬರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಮಾಲ್ಡೀವ್ಸ್‌ಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗ ಸ್ಯಾಂಡಲ್‌ವುಡ್‌ ತಾರೆಯರೂ ಕೂಡ ನಾವೇನು ಕಮ್ಮಿಯಿಲ್ಲ ಅಂತ ದ್ವೀಪಗಳ ರಾಜ್ಯಕ್ಕೆ ಹೋಗಿಬರುತ್ತಿದ್ದಾರೆ. ಸದ್ಯಕ್ಕೀಗ 'ಕಾಂತಾರ'ದ ಲೀಲಾ ಮಾಲ್ಡೀವ್ಸ್‌ನಲ್ಲಿ ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ.

'ಕಾಂತಾರ' ಸಿನಿಮಾ ಬಳಿಕ ಸಪ್ತಮಿ ಗೌಡ ನ್ಯಾಷನಲ್ ಲೆವೆಲ್‌ನಲ್ಲಿ ಮಿಂಚಿದ್ದಾರೆ. ಭಾರತದಾದ್ಯಂತ ಸಿನಿಪ್ರಿಯರಿಗೆ ಸಪ್ತಮಿ ಗೌಡ ಪರಿಚಯ ಆಗಿದೆ. ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಬಳಿಕ ಈ ನಟಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಸದ್ಯ ಅಭಿಷೇಕ್ ಅಂಬರೀಶ್ ಅಭಿನಯದ 'ಕಾಳಿ' ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೆಲಸದ ಬಿಡುವಿನಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡುತ್ತಿದ್ದಾರೆ.

Not Only Bollywood Actors Kannada Stars Sapthami Gowda, Radhika Pandit Others visited Maldives

ಮಾಲ್ಡೀವ್ಸ್ ಬೀಚ್‌ನಲ್ಲಿ ಸೀರೆಯುಟ್ಟ 'ಕಾಂತಾರ' ಸುಂದರಿ

ಸಪ್ತಮಿ ಗೌಡ ಮಾಲ್ಡೀವ್ಸ್‌ಗೆ ಹಾರಿರುವ ವಿಷಯ ಕಳೆದೆರಡು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ನಾನಾ ಶೈಲಿಯ ಕಾಸ್ಟ್ಯೂಮ್‌ನಲ್ಲಿ ಸಪ್ತಮಿ ಗೌಡ ಫೋಟೊ ಕ್ಲಿಕ್ಕಿಸಿಕೊಂಡು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ ಮಾಡುತ್ತಿದ್ದಾರೆ. ಈ ಫೋಟೊಗಳಿಗೆ ಸಿನಿಪ್ರಿಯರು ಮೆಚ್ಚುಗೆಯನ್ನೂ ಸೂಚಿಸುತ್ತಿದ್ದಾರೆ. ಅದರಲ್ಲೂ ಮಾಲ್ಡೀವ್ಸ್‌ಗೆ ಹೋದರೆ ಬೀಚ್‌ನಲ್ಲಿ ಬಿಕಿನಿ ತೊಟ್ಟು ಪೋಸ್‌ ಕೊಡುವ ಬಾಲಿವುಡ್ ನಟಿಯರ ಮಧ್ಯೆ ಸಪ್ತಮಿ ಸೀರೆಯುಟ್ಟು ಪೋಸ್‌ ಕೊಟ್ಟಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಪ್ತಮಿ ಗೌಡ ಸೀರೆಯುಟ್ಟು ಪೋಸ್ ಕೊಟ್ಟಿದ್ದರೆ, ಇನ್ನು ಕೆಲವು ಫೋಟೊಗಳಲ್ಲಿ ಗ್ಲಾಮರ್ ಲುಕ್ ಕೊಟ್ಟಿದ್ದಾರೆ. ಬ್ಲ್ಯಾಕ್ ಶಾರ್ಟ್ ಡ್ರೆಸ್‌ನಲ್ಲಿ ಸಿನಿಪ್ರಿಯರ ನಿದ್ದೆ ಕದ್ದಿದ್ದಾರೆ. ಹಾಗೇ ಗೌನ್ ಧರಿಸಿ, ನಾನಾ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಅಷ್ಟಕ್ಕೂ ಸಪ್ತಮಿಗೌಡರಂತೆಯೇ ಮಾಲ್ಡೀವ್ಸ್ ಇಷ್ಟಪಡುವ ಸ್ಯಾಂಡಲ್‌ವುಡ್‌ನ ಹಲವು ಮಂದಿ ನಟರು ಇದ್ದಾರೆ. ಈಗಾಗಲೇ ಈ ದ್ವೀಪಗಳ ರಾಷ್ಟ್ರದಲ್ಲಿ ಮಸ್ತ್ ಆಗಿ ಎಂಜಾಯ್ ಮಾಡಿ ಬಂದಿದ್ದಾರೆ.

ಯಶ್, ರಾಧಿಕಾ, ಡಾರ್ಲಿಂಗ್ ಕೃಷ್ಣ, ಮಿಲನಾ ಮಾಲ್ಡೀವ್ಸ್‌ ಪ್ರವಾಸ

ಬಾಲಿವುಡ್ ತಾರೆಯರಂತೆ ಕನ್ನಡ ಸ್ಟಾರ್‌ಗಳು ಕೂಡ ಮಾಲ್ಡೀವ್ಸ್‌ ಪ್ರವಾಸ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಮಾಲ್ಡೀವ್ಸ್‌ ಪ್ರವಾಸ ಮಾಡಿದ್ದರು. ಹಾಗೇ ವಿವಾಹದ ಬಳಿಕ 'ಲವ್ ಮಾಕ್ಟೇಲ್' ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕೂಡ ಮಾಲ್ಡೀವ್‌ಗೆ ಹೋಗಿ ಬಂದಿದ್ದರು.

Not Only Bollywood Actors Kannada Stars Sapthami Gowda, Radhika Pandit Others visited Maldives

ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವತ್ಸವ್ ಕೂಡ ಮಾಲ್ಡೀವ್ಸ್‌ನ ಸುಂದರ ಬೀಚ್‌ಗಳಲ್ಲಿ ಸಿಕ್ಕಾಪಟ್ಟೆ ಹಾಟ್‌ ಆಗಿ ಕಂಡಿದ್ದರು. ಸಿನಿಮಾದಿಂದ ಬ್ರೇಕ್ ಸಿಗುತ್ತಿದ್ದಂತೆ ರಿಲ್ಯಾಕ್ಸ್ ಮೂಡಿಗೆ ಜಾರಿದ್ದರು. ಶಾನ್ವಿ ಬಿಕಿನಿಯಲ್ಲೂ ಪೋಸ್ ಕೊಟ್ಟು ಹುಡುಗರ ನಿದ್ದೆ ಕದ್ದಿದ್ದರು. ಇತ್ತೀಚೆಗೆ ಹಿರಿಯ ನಟಿ ಶೃತಿ ಪುತ್ರಿ ಗೌರಿ ಜೊತೆ ಮಾಲ್ಡೀವ್ಸ್‌ಗೆ ಹೋಗಿ ಎಂಜಾಯ್ ಮಾಡಿ ಬಂದಿದ್ದರು.

ತಾರೆಯರು ಮಾಲ್ಡೀವ್ಸ್‌ಗೆ ಯಾಕೆ ಹೋಗ್ತಾರೆ?

ಬಾಲಿವುಡ್‌ನಿಂದ ಹಿಡಿದು ಯಾವುದೇ ಭಾಷೆಯ ಸ್ಟಾರ್‌ಗಳು ಮಾಲ್ಡೀವ್ಸ್‌ಗೆ ಹೆಚ್ಚಾಗಿ ಯಾಕೆ ಪ್ರವಾಸ ಮಾಡುತ್ತಾರೆ? ಅನ್ನೋ ಪ್ರಶ್ನೆ ಎದ್ದಿತ್ತು. ಅದರಲ್ಲೂ ಕೋವಿಡ್ ಬಳಿಕ ಮಾಲ್ಡೀವ್ಸ್‌ ಹೋಗಿ ಬರುವ ತಾರೆಯರ ಸಂಖ್ಯೆ ಹೆಚ್ಚಾಗಿತ್ತು. ಮಾಲ್ಡೀವ್ಸ್ ಅನ್ನೋ ದ್ವೀಪ ರಾಷ್ಟ್ರದ ಪ್ರಮುಖ ಆದಾಯವೇ ಪ್ರವಾಸ. ಕೋವಿಡ್ ಬಳಿಕ ಇಲ್ಲಿಗೆ ಬರುವ ಪ್ರವಾಸಿಗರ ಸಮಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಅಲ್ಲಿನ ದುಬಾರಿ ರೆಸಾರ್ಟ್‌ಗಳು ಬಾಲಿವುಡ್ ತಾರೆಯರಿಗೆ ಸ್ಪಾನ್ಸರ್ ಮಾಡಿ, ಅಲ್ಲಿಗೆ ಕರೆಸಿಕೊಳ್ಳುತ್ತಿದ್ದರು. ಈ ಮೂಲಕ ತಾರೆಯರು ತನ್ನ ಇನ್ಸಾಗ್ರಾಂಗಳಲ್ಲಿ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಈ ಮೂಲಕ ಜನರನ್ನು ಸೆಳೆಯುತ್ತಿದ್ದರು. ಕೆಲ ಸೆಲೆಬ್ರೆಟಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಮಾಲ್ಡೀವ್ಸ್‌ಗೆ ಹೋಗಿ ಬಂದಿದ್ದೂ ಇದೆ.

ಬಾಲಿವುಡ್ ಮಂದಿ ಈಗ ಮಾಲ್ಡೀವ್ಸ್‌ಗೆ ಹೋಗೋದು ಕಮ್ಮಿಯಾಗಿದೆ. ಅಸಲಿಗೆ ಸ್ಯಾಂಡಲ್‌ವುಡ್ ತಾರೆಯರು ಈ ಸುಂದರ ದ್ವೀಪ ರಾಷ್ಟ್ರಗಳ ಕಡೆಗೆ ಹೆಚ್ಚಾಗಿ ಮುಖ ಮಾಡುತ್ತಿದ್ದಾರೆ. ಸಪ್ತಮಿ ಗೌಡ ಮಾಲ್ಡೀವ್ ಪ್ರವಾಸದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸಹಜವಾಗಿಯೇ ಅವರು ಯಾವ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ಆ ರೆಸ್ಪಾನ್ಸ್ ಹೇಗಿದೆ? ಸವಲತ್ತುಗಳು ಹೇಗಿವೆ ಎಂಬುದನ್ನು ಹುಡುಕುತ್ತಿದ್ದಾರೆ.

More from Filmibeat

English summary
Not Only Bollywood Actors Gone to Maldives Kannada Stars Sapthami Gowda, Radhika Pandit Others Also visited, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X