For Quick Alerts
  ALLOW NOTIFICATIONS  
  For Daily Alerts

  ತಾರೆ ಪೂಜಾಗಾಂಧಿ ವಿರುದ್ಧ ನೋಟೀಸ್ ಜಾರಿ

  By Rajendra
  |
  ಮಳೆ ಬೆಡಗಿ ಪೂಜಾಗಾಂಧಿ ಅವರು ಇತ್ತೀಚೆಗೆ ಬಿಸಿಲನ್ನೂ ಲೆಕ್ಕಿಸದೆ ರಾಯಚೂರಿನಲ್ಲಿ ಬಿರುಸಿನ ಪ್ರಚಾರ ಮಾಡಿದ್ದರು. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಅವರು ರಾಯಚೂರು ಕ್ಷೇತ್ರದಲ್ಲಿ ಕಣಕ್ಕಿಳಿದಿರುವುದು ಗೊತ್ತೇ ಇದೆ. ಆದರೆ ಅವರು ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.

  ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಮಂಜುಶ್ರೀ ಅವರು ಪೂಜಾಗಾಂಧಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಏಪ್ರಿಲ್ 7ರಂದು ಪೂಜಾಗಾಂಧಿ ಅವರು ರಾಯಚೂರು ಸಮೀಪದ ಮಿಟ್ಟಿ ಮಲ್ಕಾಪೂರ್ ಹಾಗೂ ದೇವನಪಲ್ಲಿ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದರು.

  ಈ ಸಂದರ್ಭದಲ್ಲಿ ಅವರು ಹಾಗೂ ಅವರ ಬೆಂಬಲಿಗರು ಬಳಸುವ ಇನ್ನೋವಾ ಕಾರಿಗೆ ಅನುಮತಿ ಪಡೆದಿರಲಿಲ್ಲ. ಈ ಕುರಿತು ಪೊಲೀಸರು ಚುನಾವಣಾ ಅಧಿಕಾರಿ ಮಂಜುಶ್ರೀ ಅವರಿಗೆ ಲಿಖಿತ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಪೂಜಾಗಾಂಧಿ ವಿರುದ್ಧ ನೋಟೀಸ್ ಜಾರಿ ಮಾಡಲಾಗಿದೆ.

  ಆದರೆ ಪೂಜಾಗಾಂಧಿ ಅವರು ಮಾತ್ರ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಿದ್ದಾರೆ. ಇದಿಷ್ಟೇ ಅಲ್ಲದೆ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅವರ ಮೇಲೂ ನೀತಿ ಸಂಹಿತೆ ಉಲ್ಲಂಘನೆ ನೋಟೀಸ್ ಜಾರಿಗೊಳಿಸಲಾಗಿದೆ.

  ಇತ್ತೀಚೆಗೆ ಪೂಜಾಗಾಂಧಿ ಅವರು ರಾಯಚೂರಿಗೆ ಭೇಟಿ ನೀಡಿದಾಗ ಅಲ್ಲಿನ ತಾಪಮಾನಕ್ಕೆ ಬೆವೆತು ಹೋಗಿದ್ದರು. ಕಡೆಗೆ ತಮ್ಮ ಇನ್ನೋವ ಕಾರಿನಲ್ಲಿ ಕೂತು ಎಸಿ ಆನ್ ಮಾಡಿ ಸುಧಾರಿಸಿಕೊಂಡಿದ್ದರು. ಕಂಪ್ಲೀಟ್ ಸುದ್ದಿ ಇಲ್ಲಿದೆ ಓದಿ. (ಏಜೆನ್ಸೀಸ್)

  English summary
  The Raichur Election officer Manjushree has issued notices to actress Pooja Gandhi for violation of poll code. Recently she used Innova car for election campaign without getting permission from police in Raichur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X