ಈ ವಾರ ಕನ್ನಡ 8, ತೆಲುಗು 9, ತಮಿಳು 4, ಮಲಯಾಳಂ 9 ಸಿನಿಮಾ ರಿಲೀಸ್: ಯಾವ್ಯಾವ ಭಾಷೆಯಲ್ಲಿ ಯಾವ್ಯಾವುದು?
ಕ್ರಿಕೆಟ್ ವರ್ಲ್ಡ್ ಕಪ್ ಮುಗೀತಾ ಬಂತು. ಇನ್ನೇನು ಎರಡು ಮ್ಯಾಚ್‌ಗಳು ಉಳಿದಿವೆ ಅಷ್ಟೇ. ಅಷ್ಟರಲ್ಲೇ ಸೈಲೆಂಟ್ ಆಗಿದ್ದ ದಕ್ಷಿಣ ಭಾರತದ ಚಿತ್ರರಂಗ ಎಚ್ಚರಗೊಂಡಿದೆ. ಸ್ಮಾಲ್ ಬಜೆಟ್ ಸಿನಿಮಾಗಳಿಂದ ಹಿಡಿದು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.
ಈ ವಾರ (ನವೆಂಬರ್ 17) ದಕ್ಷಿಣ ಭಾರತದ ಸಿನಿಪ್ರಿಯರಿಗೆ ಹಬ್ಬ ಅಂತಲೇ ಹೇಳಬೇಕು. ಸೌತ್ ಇಂಡಿಯಾದ ನಾಲ್ಕು ಭಾಷೆಗಳು ಕನ್ನಡ, ತೆಲುಗು, ತಮಿಳು, ಮಲಯಾಳಂನಿಂದ ಬರೋಬ್ಬರಿ 31 ಸಿನಿಮಾಗಳು ರಿಲೀಸ್ ಆಗುತ್ತಿದೆ. ಇದರಲ್ಲಿ ಡಬ್ಬಿಂಗ್ ಸಿನಿಮಾಗಳು ಕೂಡ ಸೇರಿವೆ.

ವರ್ಷ ಕೊನೆ ಕೊನೆಯಲ್ಲಿ ದಕ್ಷಿಣ ಭಾರತ ಸಿನಿಮಾಗಳು ಸ್ಟಾಕ್ ಕ್ಲಿಯರೆನ್ಸ್‌ಗೆ ಮುಂದಾಗಿರೋ ಆಗಿದೆ. ಕನ್ನಡದಲ್ಲೂ ವರ್ಲ್ಡ್ ಕಪ್, ಪ್ಯಾನ್ ಇಂಡಿಯಾ ಅಂತ ತಣ್ಣಗಾಗಿತ್ತು. ಈಗ ಕನ್ನಡದಲ್ಲೂ 8 ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಲ್ಲಿ ರಕ್ಷಿತ್ ಶೆಟ್ಟಿಯ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಕೂಡ ಸೇರಿದೆ. ಹಾಗಿದ್ದರೆ ಯಾವ್ಯಾವ ಭಾಷೆಯಲ್ಲಿ ಯಾವ್ಯಾವ ಸಿನಿಮಾ ರಿಲೀಸ್ ಆಗುತ್ತಿದೆ. ತಿಳಿಯಲು ಮುಂದೆ ಓದಿ..
ಕನ್ನಡದಲ್ಲಿ 8 ಸಿನಿಮಾ ರಿಲೀಸ್
ನವೆಂಬರ್ 17ಕ್ಕೆ ಸ್ಯಾಂಡಲ್‌ವುಡ್‌ನಲ್ಲಿ 8 ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಲ್ಲಿ ರಕ್ಷಿತ್ ಶೆಟ್ಟಿಯ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಪ್ರಮುಖ ಸಿನಿಮಾ. ಇದರೊಂದಿಗೆ 'ನೇತ್ರಂ', 'ದಿ ವೆಕೆಂಟ್ ಹೌಸ್', 'ಬೆಂಬಿಡದ ನಾವಿಕ', 'ಎಲೆಕ್ಟ್ರಾನಿಕ್ ಸಿಟಿ', 'ಭಾಯ್', 'ರಾಜಯೋಗ' ರಿಲೀಸ್ ಆಗುತ್ತಿದೆ. ಇವುಗಳೊಂದಿಗೆ ಪಾಯಲ್ ರಜಪೂತ್ ನಟನೆಯ ಡಬ್ಬಿಂಗ್ ಸಿನಿಮಾ 'ಮಂಗಳವಾರಂ' ಕೂಡ ಬಿಡುಗಡೆಯಾಗುತ್ತಿವೆ.

ತೆಲುಗಿನಲ್ಲಿ 9 ಸಿನಿಮಾ ರಿಲೀಸ್
ಟಾಲಿವುಡ್‌ನಲ್ಲಿ ಈ ವಾರ ಸುಮಾರು 9 ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಲ್ಲಿ ಒಂದು ಸಿನಿಮಾ 'ಕೋಬ್ರಾ' ಅಮೆಜಾನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಉಳಿದ 8 ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. 13 ವರ್ಷಗಳ ಹಿಂದೆ ಜೂ.ಎನ್‌ಟಿಆರ್ ನಟಿಸಿದ 'ಅದ್ರುಸ್' ಸಿನಿಮಾ 4K ಫಾರ್ಮೆಟ್‌ನಲ್ಲಿ ರಿಲೀಸ್ ಆಗುತ್ತಿದೆ. ಇದರೊಂದಿಗೆ 'ಅನ್ವೇಶಿ', 'ಮಂಗಳವಾರಂ', 'ಮೈ ನೇಮ್ ಈಸ್ ಶ್ರುತಿ', 'ಜನಂ', 'ಸ್ಪಾರ್ಕ್ ಲೈಫ್', 'ಯೇ ಛೋಟಾ ನುವುನ್ನಾ', 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ (ಡಬ್) ರಿಲೀಸ್ ಆಗುತ್ತಿದೆ.
ತಮಿಳಿನಲ್ಲಿ 5 ಸಿನಿಮಾ ರಿಲೀಸ್
ತಮಿಳಿನಲ್ಲೂ 5 ಸಿನಿಮಾಗಳು ಬಿಡುಗಡೆಯಾಗುತ್ತಿವೆ. 'ಅಂಬು ನಾಡು ಒಂಬತ್ತು ಕುಪ್ಪಂ', 'ಚೈತ್ರ', 'ಚೆವ್ವೈಕಿಜಮೈ' (ತೆಲುಗಿನ ಮಂಗಳವಾರಂ ಸಿನಿಮಾ ಡಬ್ ವರ್ಷನ್) ಹಾಗೂ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ (ತಮಿಳು ವರ್ಷನ್) ಬಿಡುಗಡೆಯಾಗುತ್ತಿವೆ.
ಮಲಯಾಳಂನಲ್ಲಿ 10 ಸಿನಿಮಾ ರಿಲೀಸ್
ಈ ವಾರ ಮಲಯಾಳಂನಲ್ಲಿ ಸುಮಾರು 10 ಸಿನಿಮಾ ರಿಲೀಸ್ ಆಗುತ್ತಿದೆ. 'Falimy', 'ಶೇಷಮ್ ಮೈಕೆಲ್ ಫಾತಿಮಾ', 'ಚೋವ್ವಾಜ್ಚಾ' (ಮಂಗಳವಾರಂ ರಿಮೇಕ್), 'ಫೀನಿಕ್ಸ್', 'ವೆಲುಕ್ಕಾಕ್ಕ ಒಪ್ಪು ಕಾ', 'ಒಟ್ಟಮಾರಂ', 'ನೀತಿ', 'ಮೈ 3', 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ (ಮಲಯಾಳಂ ಡಬ್) ಒಟ್ಟು 9 ಸಿನಿಮಾಗಳು ರಿಲೀಸ್ ಆಗುತ್ತಿವೆ.


Click it and Unblock the Notifications











