Darshan Horoscope-2026: ಈ ಕೇಸ್ ಇನ್ನೂ 10 ವರ್ಷ ನಡೆಯುತ್ತೆ.. ಆದರೆ, 6 ತಿಂಗಳ ಒಳಗೆ.. ಆರ್ಯವರ್ಧನ್ ಭವಿಷ್ಯ!

2025 ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಂಕಷ್ಟಗಳನ್ನು ತಂದುಕೊಟ್ಟ ವರ್ಷ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕಿಕೊಂಡು ಕಷ್ಟಪಡುತ್ತಿದ್ದಾರೆ. ಈ ಸಂಕಷ್ಟ 2026ರಲ್ಲೂ ಮುಂದುವರೆದಿದೆ. ದರ್ಶನ್‌ಗೆ ಇವತ್ತು ಜಾಮೀನು ಸಿಗಬಹುದು. ನಾಳೆ ಸಿಗಬಹುದು ಅಂತ ಅವರ ಅಭಿಮಾನಿಗಳು ಎದುರು ನೋಡುತ್ತಲೇ ಇದ್ದಾರೆ. ದಿನ ಮುಂದಕ್ಕೆ ಹೋಗುತ್ತಲೇ ಇದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್‌ಗೆ ಮೊದಲ ಬಾರಿಗೆ ಜಾಮೀನು ಸಿಕ್ಕಾಗ ಅಭಿಮಾನಿಗಳು ಕುಣಿದಾಡಿದ್ದರು. ಆದರೆ, ಅಷ್ಟೇ ಬೇಗ ಜಾಮೀನು ಕ್ಯಾನ್ಸಲ್ ಆಗಿ ಮತ್ತೆ ಜೈಲು ಸೇರುವಂತಾಗಿದೆ. ಸದ್ಯ ರೇಣುಕಾಸ್ವಾಮಿ ಕೇಸ್‌ನ ಟ್ರಯಲ್ ನಡೆಯುತ್ತಿದೆ. ಹೀಗಾಗಿ ಇದು ಮುಗಿಯುವವರೆಗೂ ಕೆಲವು ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿ ದರ್ಶನ್‌ಗೆ ಜಾಮೀನು ಸಿಗುವುದಿಲ್ಲ.

Numerologist Aryavardhan Guruji predicted that Darshan got bail with in 6 months

2024 ಹಾಗೂ 2025 ದರ್ಶನ್ ಪಾಲಿಗೆ ಕೆಟ್ಟ ವರ್ಷ ಆಗಿತ್ತು. 2026 ಆದರೂ, ದರ್ಶನ್ ಬದುಕಿಗೆ ಹೊಸ ಬೆಳಕು ಮೂಡಬಹುದೇ ಎಂದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಭವಿಷ್ಯ ನುಡಿದಿದ್ದಾರೆ. ಯಾವಾಗ ಜಾಮೀನು ಸಿಗುತ್ತೆ? ಎಷ್ಟು ವರ್ಷ ಕೇಸ್ ನಡೆಯುತ್ತೆ? ರಾಜಕೀಯ ಪ್ರವೇಶ ಮಾಡುತ್ತಾರಾ? ಇಂತಹ ಒಂದಿಷ್ಟು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಷ್ಟಕ್ಕೂ ಏನು ಹೇಳಿದ್ದಾರೆ ಎನ್ನುವುದರ ಝಲಕ್ ಇಲ್ಲಿದೆ.

"1 ಮತ್ತು 6 ಎರಡೂ ಸಂಖ್ಯೆ ಡೇಂಜರ್"

"ಈ ವರ್ಷ 1 ಮತ್ತು 6 ಎರಡೂ ತುಂಬಾನೇ ಡೇಂಜರಸ್ ನಂ. ಒಂದೂ ಆಗಲ್ಲ. ಆರೂ ಆಗಲ್ಲ. ಆದರೆ, ದರ್ಶನ್ ಅವರದ್ದು ಮಕರ ರಾಶಿ. ವೃಷಭ ಲಗ್ನದಲ್ಲಿ ಹುಟ್ಟಿದ್ದಾರೆ. ಅವರಿಗೆ 2027ರವರೆಗೂ ರಾಹು ದೆಸೆ ಗುರು ಭುಕ್ತಿ ನಡೆಯುತ್ತಿದೆ. ಅವರಿಗೆ 8ನೇ ಮನೆ ಹಾಗೂ 6ನೇ ಮನೆ ಭುಕ್ತಿ ನಡೆಯುತ್ತಿದೆ. ಗುರು 12ನೇ ಮನೆಯಲ್ಲಿ ಇದ್ದಾನೆ. 12ನೇ ಮನೆಯಲ್ಲಿ ಇರುವಂತಹ ಗುರು ಮತ್ತು 6ನೇ ಮನೆಯಲ್ಲಿ ರಾಹು ತುಂಬಾನೇ ಅಟ್ಯಾಕ್ ಮಾಡಿದ್ದಾನೆ." ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.


"6 ತಿಂಗಳಲ್ಲಿ ಹೊರ ಬರ್ತಾರೆ"

"ನಾನು ದರ್ಶನ್ ಅವರ ಜಾತಕವನ್ನು ನೋಡಿದ್ದೇನೆ. ಪರ್ಸನಲ್ ಆಗಿ ಹಾಗೂ ಜನರಲ್ ಆಗಿ ನೋಡಿರುವುದರಿಂದ ಹೇಳುತ್ತಿದ್ದೇನೆ. ದರ್ಶನ್ ಅವರು 6ನೇ ತಿಂಗಳಲ್ಲಿ ಆಚೆ ಬರುತ್ತಾರೆ. ಅವರು ಮಾಡುವ ಪೂಜೆ, ಪ್ರಯತ್ನದಿಂದ ಅದರ ಒಳಗೂ ಬರಬಹುದು." ಎಂದು ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

"ಕೇಸ್ 10 ವರ್ಷ ನಡೆಯುತ್ತೆ"

"ದರ್ಶನ್ ಜಾಮೀನು ಸಿಕ್ಕಿ ಹೊರಬರುತ್ತಾರೆ. ಆದರೆ, ಆರೋಪ ಮುಕ್ತರಾಗಿ ಹೊರಬರುವುದಕ್ಕೆ ಇನ್ನೂ 10 ವರ್ಷ ಸಮಯ ಹಿಡಿಯುತ್ತೆ. 10-15 ವರ್ಷಕ್ಕಿಂತ ಕಮ್ಮಿ ಆಗುವುದೇ ಇಲ್ಲ. ಈ ಬಾರಿ ಜಾಮೀನು ಆಗಿಬಿಟ್ಟರೆ, ಮತ್ತೆ ತೊಂದರೆ ಆಗುವುದಿಲ್ಲ. ದರ್ಶನ್ ಅವರಿಗೆ ಇನ್ನು ಇಂತಹ ನೆಗೆಟಿವಿಟಿ ಇರುವುದಿಲ್ಲ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ರಾಜಕಾರಣಿಯಾಗುವ ಯೋಗವಿದೆ. ಅವರು ಏನು ಮಾಡುತ್ತಾರೆ ಅನ್ನೋದು ಮುಖ್ಯ." ಎನ್ನುತ್ತಾರೆ.

"ಅವರ ವ್ಯಕ್ತಿತ್ವವೇ ಕಾಪಾಡಿದೆ"

"ಅವರಿಗೆ ಗುರು ದಸೆ ಬಂದು ತುಂಬಾ ರಾಜ ಯೋಗ ಬರುತ್ತಿತ್ತು. ಇಷ್ಟೊಂದು ಒಳ್ಳೆಯದಲ್ಲ ಅಂತ ನಾನು ಯಾವಾಗಲೂ ಯೋಚನೆ ಮಾಡುತ್ತಿದ್ದೆ. ಆದರೆ, ವ್ಯಕ್ತಿತ್ವದಿಂದಲೂ ಒಮ್ಮೆ ಹೆಸರು ಬಂದು ಬಿಡುತ್ತವೆ. ಅವರ ವ್ಯಕ್ತಿತ್ವವೇ ಅವರನ್ನು ಕಾಪಾಡಿದೆ. 6ನೇ ತಿಂಗಳಿಂದ ಕನ್ಫರ್ಮ್ ಆಗಿ ಹೇಳುತ್ತೇನೆ. ಪರಪ್ಪನ ಅಗ್ರಹಾರದಿಂದ ಆಚೆ ಬಂದೇ ಬರುತ್ತಾರೆ." ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.

"ಶತ್ರುಗಳು ಇರೋದಿಲ್ಲ"

"ಜೈಲಿನಿಂದ ಹೊರ ಬಂದ್ಮೇಲೆ ಗುರು ದೃಷ್ಟಿ ಬಲವಾಗಿದೆ. ಗುರು ಕಾಪಾಡಿಯೇ ಕಾಪಾಡುತ್ತಾನೆ. ಇನ್ನು ಮೂರು ತಿಂಗಳ ನಂತರ ಜಾಮೀನು ಸಿಗುವುದಕ್ಕೆ ಶುರುವಾಗುತ್ತೆ. ಇನ್ನು ಇವರಿಗೆ ಯಾರೂ ಶತ್ರುಗಳು ಇರೋದಿಲ್ಲ. ಹೀಗಾಗಿ ಮುಂದೆ ಅವರು ಯಶಸ್ಸನ್ನು ನೋಡಬಹುದು." ಎಂದು ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

More from Filmibeat

English summary
Numerologist Aryavardhan Guruji predicted that Darshan got bail with in 6 months.
Read more about: darshan astrology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X