ತೆರೆಮೇಲೆ ರಕ್ತಚರಿತ್ರೆ ಬರೆಯಲು ದೊಡ್ಮನೆ ಕುಡಿ ರೆಡಿ; ಮೈಮೇಲೆ ರಕ್ತ ಚಲ್ಲಿಕೊಂಡು 'ಎಕ್ಕ' ಎಂದ ಯುವ

ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಚೊಚ್ಚಲ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ದೊಡ್ಮನೆ ಕುಡಿಯ ಎರಡನೇ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ. 'ಯುವ' ಸಿನಿಮಾ ಮೂಲಕ ಲವರ್ ಬಾಯ್ ಕಮ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ರಾಘವೇಂದ್ರ ರಾಜ್‌ಕುಮಾರ್ ದ್ವಿತೀಯ ಪುತ್ರ ಈಗ ಫುಲ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚೊಚ್ಚಲ ಸಿನಿಮಾ ಬಳಿಕ ತನ್ನ ದಾಂಪತ್ಯ ಜೀವನದಿಂದ ಯುವ ರಾಜ್‌ಕುಮಾರ್ ಸುದ್ದಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಸಿನಿಮಾ ಕೊಂಚ ತಡವಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ಅದರಂತೆಯೇ ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಕೆಲವು ದಿನಗಳ ಹಿಂದಷ್ಟೇ ಅನೌನ್ಸ್ ಆಗಿತ್ತು. ಯುವ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮೂರು ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ಸೇರಿಕೊಂಡಿದ್ದು ಕುತೂಹಲ ಮೂಡಿಸಿತ್ತು.

Occasion of Kannada Rajyotsava Yuva Rajkumar second movie title announced as Ekka

ಎರಡನೇ ಸಿನಿಮಾ ಅನೌನ್ಸ್ ಮಾಡುವಾಗಲೇ ಇದು ಯುವ ಈ ಬಾರಿ ತೆರೆಮೇಲೆ ರಕ್ತಸಿಕ್ತ ಚರಿತ್ರೆಯನ್ನು ಬರೆಯುತ್ತಾರೆಂಬ ಸುಳಿವು ಸಿಕ್ಕಿತ್ತು. ನಿರೀಕ್ಷೆ ಮಾಡಿದಂತೆ ಕನ್ನಡ ರಾಜ್ಯೋತ್ಸವಕ್ಕೆ ಯುವ ಎರಡನೇ ಸಿನಿಮಾ ಟೈಟಲ್ ಅನೌನ್ಸ್ ಮಾಡಲಾಗಿದೆ. ಈ ಸಿನಿಮಾದ ಹೆಸರು 'ಎಕ್ಕ'. ಹಾಗಿದ್ದರೆ, ಈ ಟೈಟಲ್ ಹಿಂದಿರುವ ಗುಟ್ಟೇನು? ಯಾವ ಕಥೆಯನ್ನು ತೆರೆಮೇಲೆ ಹೇಳುವುದಕ್ಕೆ ಹೊರಟಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಉತ್ತರಕಾಂಡ' ಸಿನಿಮಾ ನಿರ್ದೇಶನ ಮಾಡುತ್ತಿರುವ ರೋಹಿತ್ ಪದಕಿ 'ಎಕ್ಕ'ಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಕ್ಕಾ ರಗಡ್ ಮಾಸ್ ಅವತಾರದಲ್ಲಿ ಯುವ ರಾಜ್‌ಕುಮಾರ್ ಅನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ. ಕನ್ನಡದ ಹಬ್ಬ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಯುವ ರಾಜ್‌ಕುಮಾರ್ ರಗಡ್ ಲುಕ್ ಜೊತೆಗೆ ಟೈಟಲ್ ಅನ್ನು ಅನೌನ್ಸ್ ಮಾಡಿದ್ದಾರೆ. ಈ ಟೈಟಲ್ ಮತ್ತೆ ಪುನೀತ್ ರಾಜ್‌ಕುಮಾರ್ ಅನ್ನು ನೆನೆಪಿಸುತ್ತಿದೆ.

Occasion of Kannada Rajyotsava Yuva Rajkumar second movie title announced as Ekka

ಅಪ್ಪು ನಟಿಸಿದ 'ಜಾಕಿ' ಸಿನಿಮಾದ "ಎಕ್ಕ ರಾಜ ರಾಣಿ ನನ್ನ ಕೈಯೊಳಗೆ.." ಹಾಡನ್ನು ಮರೆಯುವುದಕ್ಕೆ ಹೇಗೆ ಸಾಧ್ಯ? ಅದೇ ಹಾಡಿನ ಒಂದು ಪದವನ್ನು ಯುವ ಎರಡನೇ ಸಿನಿಮಾದ ಟೈಟಲ್ ಆಗಿ ಇಡಲಾಗಿದೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಈ ಸಿನಿಮಾ ಕನೆಕ್ಟ್ ಆಗುತ್ತಿದೆ. ಯುವ ರಾಜ್‌ಕುಮಾರ್‌ ಅವರಲ್ಲಿ ಅಪ್ಪು ಕಾಣುತ್ತಿರುವ ಫ್ಯಾನ್ಸ್ 'ಎಕ್ಕ' ಟೈಟಲ್ ಕಿಕ್ ಕೊಟ್ಟಿರುವುದಂತೂ ಸತ್ಯ.

ಇನ್ನು 'ಎಕ್ಕ' ಸಿನಿಮಾ ಭೂಗತಲೋಕದ ಕಥೆಯನ್ನು ಹೇಳುವುದಕ್ಕೆ ಹೊರಟಿದೆ. ಒಬ್ಬ ಮನುಷ್ಯನು ಭೂಗತ ಜಗತ್ತಿಗೆ ಪ್ರವೇಶ ಮಾಡಿದಾಗ ಆತನಿಗೆ ಆಗುವ ಅನುಭವವನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ನಿರ್ದೇಶಕ ರೋಹಿತ್ ಪದಕಿ ಹಾಗೂ ವಿಕ್ರಂ ಹತ್ವಾರ್ ಇಬ್ಬರೂ ಸೇರಿ ಕಥೆಯನ್ನು ಹೆಣೆದಿದ್ದಾರೆ. ಹೀಗಾಗಿ ಎರಡನೇ ಸಿನಿಮಾದಲ್ಲೇ ತೆರೆಮೇಲೆ ರಕ್ತಚರಿತ್ರೆಯನ್ನು ಸೃಷ್ಟಿಸುವುದಕ್ಕೆ ಯುವ ಮುಂದಾಗಿದ್ದಾರೆ.

ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಯುವ ಎರಡನೇ ಸಿನಿಮಾ ಮೂರು ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ಸೇರಿಕೊಂಡಿವೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್, ಜಯಣ್ಣ ಹಾಗೂ ಭೋಗೇಂದ್ರ ಅವರ ಜಯಣ್ಣ ಕಂಬೈನ್ಸ್ ಜೊತೆಗೆ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಅವರ ಕೆಆರ್‌ಜಿ ಸ್ಟುಡಿಯೋ ಒಟ್ಟಿಗೆ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದೇ ನವೆಂಬರ್ 28ರಿಂದ 'ಎಕ್ಕ' ಸಿನಿಮಾದ ಶೂಟಿಂಗ್ ಆರಂಭ ಆಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

More from Filmibeat

English summary
Occasion of Kannada Rajyotsava Yuva Rajkumar second movie title announced as Ekka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X