For Quick Alerts
  ALLOW NOTIFICATIONS  
  For Daily Alerts

  ಮಹಾಶಿವರಾತ್ರಿ 'ಶಿವ ಶಿವ' ಎಂದ ಪ್ರಜ್ವಲ್: ವೀರಂ ಚಿತ್ರದ ಸಾಂಗ್ ರಿಲೀಸ್

  |

  ಶಿವರಾತ್ರಿ ಹಬ್ಬಕ್ಕೆ ಸ್ಯಾಂಡಲ್‌ವುಡ್ ಫುಲ್ ಆಕ್ಟೀವ್ ಆಗಿದೆ. ಒಂದೊಂದೇ ಸಿನಿಮಾದ ಹಾಡುಗಳು, ಪೋಸ್ಟರ್, ಟೀಸರ್, ಟ್ರೈಲರ್ ಅಂತ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿವೆ. ಶಿವರಾತ್ರಿ ಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗಲೇ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಸಿನಿಮಾದ ಒಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಶಿವರಾತ್ರಿ ಹಬ್ಬಕ್ಕೆಂದೇ ಈ ಹಾಡನ್ನು ರಿಲೀಸ್ ಮಾಡಲಾಗಿದೆ.

  'ವೀರಂ' ಸಿನಿಮಾದ ಹೈಲೈಟ್ ಅಂದರೆ, ಸ್ಟಾರ್‌ಕಾಸ್ಟ್. ಈ ಸಿನಿಮಾದ ಹಾಡಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ರುತಿ ಶಿವನ ಭಕ್ತೆಯಾಗಿ ಕಾಣಿಸಿಕೊಳ್ಳುತ್ತಾರೆ. ಶಿವನಿಗಾಗಿಯೇ ಸಿನಿಮಾದಲ್ಲಿ ಒಂದು ಹಾಡುವಿರುವುದರಿಂದ ಆ ಹಾಡನ್ನು ಬಿಡುಗಡೆ ಮಾಡಲು ಇದೇ ಸೂಕ್ತವಾದ ಸಮಯವೆಂದು 'ಶಿವ ಶಿವ' ಸಾಂಗ್ ಅನ್ನು ರಿಲೀಸ್ ಮಾಡಿದೆ ಚಿತ್ರತಂಡ. ಶಿವ ಶಿವ ಹಾಡು ರಿಲೀಸ್ ಆಗುತ್ತಿದ್ದಂತೆ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಏಕಕಾಲಕ್ಕೆ ಮೂರು ಭಾಷೆಗೆ ಲಗ್ಗೆ ಇಟ್ಟ ಪ್ರಜ್ವಲ್ ದೇವರಾಜ್ 'ಮಾಫಿಯಾ': ತಾರೆಯರಿಂದ ಟೀಸರ್ ರಿಲೀಸ್ಏಕಕಾಲಕ್ಕೆ ಮೂರು ಭಾಷೆಗೆ ಲಗ್ಗೆ ಇಟ್ಟ ಪ್ರಜ್ವಲ್ ದೇವರಾಜ್ 'ಮಾಫಿಯಾ': ತಾರೆಯರಿಂದ ಟೀಸರ್ ರಿಲೀಸ್

  ಅನನ್ಯಾ ಭಟ್ ಕಂಠದಲ್ಲಿ ಶಿವ ಶಿವ ಸಾಂಗ್

  ಪ್ರಜ್ವಲ್ ದೇವರಾಜ್ ನಟಿಸಿರುವ ಈ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಗಾಯಕಿ ಅನನ್ಯಾ ಭಟ್ ಮತ್ತೊಂದು ಶಿವ ಹಾಡಿಗೆ ಧ್ವನಿ ನೀಡಿದ್ದಾರೆ. ಕನ್ನಡ ಸಿನಿಮಾಗಳಿಗೆ ಬ್ಯಾಕ್ ಟು ಬ್ಯಾಕ್ ಹಾಡುಗಳನ್ನು ಅನನ್ಯಾ ಭಟ್ ಹಾಡುತ್ತಿದ್ದು, 'ವೀರಂ' ಚಿತ್ರಕ್ಕೆ ಹಾಡಿದ ಶಿವನ ಹಾಡು ಕೂಡ ಸಂಗೀತ ಪ್ರಿಯರಿಗೆ ಇಷ್ಟ ಆಗಿದೆ. ಈ ಹಿಂದೆ ಸದ್ಗುರು ಅವರ ಇಶಾ ಫೌಂಡೇಷನ್‌ನಲ್ಲಿ ಅನನ್ಯಾ ಭಟ್ 'ಸೋಜಿಗಾದ ಸೂಜು ಮಲ್ಲಿಗೆ' ಹಾಡನ್ನು ಹಾಡಿದ್ದರು. ಅಲ್ಲಿಂದ ಶಿವನ ಹಾಡೆಂದರೆ ಅನನ್ಯಾ ಭಟ್ ಎನ್ನುವಂತಾಗಿದೆ.

  'ವೀರಂ' ಚಿತ್ರದ ಶಿವ ಶಿವ ಹಾಡಿಗೆ ವಿ ನಾಗೇಂದ್ರ ಪ್ರಸಾದ್​ ಸಾಹಿತ್ಯ ರಚಿಸಿದ್ದಾರೆ. ರೊಮ್ಯಾಂಟಿಕ್ ಹಾಗೂ ಮೆಲೋಡಿ ಹಾಡುಗಳಿಗೆ ಹೆಸರಾಗಿರುವ ಅನೂಪ್ ಸೀಳಿನ್ ಭಕ್ತಿ ಪ್ರಧಾನ ಹಾಡೊಂದನ್ನು ಕಂಪೋಸ್ ಮಾಡಿದ್ದಾರೆ. ಈ ಹಾಡಿಗೆ ನಾಗೇಂದ್ರ ಪ್ರಸಾದ್ ಹಾಗೂ ಅನನ್ಯಾ ಭಟ್ ಜೊತೆಯಾಗಿದ್ದಾರೆ.

  ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಕ್ಕೆ ಆತ್ಮೀಯ ಗೆಳೆಯನೇ ನಿರ್ದೇಶಕಪ್ರಜ್ವಲ್ ದೇವರಾಜ್ ಹೊಸ ಸಿನಿಮಾಕ್ಕೆ ಆತ್ಮೀಯ ಗೆಳೆಯನೇ ನಿರ್ದೇಶಕ

  'ವೀರಂ' ಚಿತ್ರದಲ್ಲಿ ಬಹುತಾರಾಗಣ

  ಪ್ರಜ್ವಲ್ ದೇವರಾಜ್ ಜೊತೆ 'ವೀರಂ' ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್, ಹಿರಿಯ ನಟಿ ಶ್ರುತಿ ಸೇರಿದಂತೆ ಹಲವು ಗಣ್ಯರು ನಟಿಸಿದ್ದಾರೆ. ಪ್ರಜ್ವಲ್ ಜೊತೆ ಶ್ರೀ ನಗರ ಕಿಟ್ಟಿ ಪಾತ್ರ ಕೂಡ ಕುತೂಹಲ ಕೆರಳಿಸಿದೆ. ಮೇ 6ಕ್ಕೆ 'ವೀರಂ' ಸಿನಿಮಾ ಬಿಡುಗಡೆಯಾಗಲಿದ್ದು, ಶಶಿಧರ್ ಎಂಬುವವರ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಖದರ್ ಕುಮಾರ್ 'ವೀರಂ' ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.

  Occasion of mahashivaratri prajwal devaraj starrer veeram kannada movie shiva shiva song released

  ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ಜೋಡಿ 'ವೀರಂ' ಸಿನಿಮಾದ ಹೈಲೈಟ್. ಇದೇ ಮೊದಲ ಬಾರಿಗೆ ಈ ಜೋಡಿ ಜೊತೆಯಾಗಿ ನಟಿಸಿದ್ದು, ಇವರಿಬ್ಬರ ಕೆಮಿಸ್ಟ್ರಿಯನ್ನು ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾದುಕೂತಿದ್ದಾರೆ. ರಚಿತಾ ರಾಮ್ ಅಭಿನಯದ 'ಏಕ್ ಲವ್ ಯಾ' ಸಿನಿಮಾ ರಿಲೀಸ್ ಆಗಿದ್ದು, ಮೇ ತಿಂಗಳಲ್ಲಿ 'ವೀರಂ' ಚಿತ್ರ ರಿಲೀಸ್ ಆಗುತ್ತಿದೆ. ಈ ವರ್ಷ ರಚಿತಾ ಅಭಿನಯದ ಸಿನಿಮಾ ಕೆಲವು ಸಿನಿಮಾಗಳು ಬಿಡುಗಡೆಯಾಗಲಿದೆ.

  English summary
  Occasion of mahashivaratri prajwal devaraj starrer veeram kannada movie shiva shiva song released.
  Monday, February 28, 2022, 20:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X