ನಿಖಿಲ್ ಕುಮಾರಸ್ವಾಮಿ ಫೋಟೊಗಳಿಗೆಲ್ಲ 'ಹೀಗೆ' ಕಾಮೆಂಟ್ ಮಾಡ್ತಿರೋದು ಯಾರು...?
'ಜಾಗ್ವಾರ್', 'ಸೀತಾರಾಮ ಕಲ್ಯಾಣ' ಮತ್ತು 'ಕುರುಕ್ಷೇತ್ರ' ಚಿತ್ರಗಳಲ್ಲಿ ನಟಿಸಿದ್ದ ನಿಖಿಲ್ ಕುಮಾರಸ್ವಾಮಿ ಸದ್ಯ ವೈವಾಹಿಕ ಬದುಕಿಗೆ ಕಾಲಿಡುವ ತಯಾರಿಯಲ್ಲಿದ್ದಾರೆ. ನಿರ್ದೇಶಕರಾದ ಎಸ್. ಕೃಷ್ಣ, ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ, ಎ.ಪಿ. ಅರ್ಜುನ್ ಅವರ ಸಿನಿಮಾಗಳು ಅವರ ಕೈಯಲ್ಲಿವೆ.
Recommended Video
ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದಲ್ಲಿ ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಮದುವೆ ತಯಾರಿಯಲ್ಲಿರುವ ನಿಖಿಲ್, ಗೃಹಸ್ಥಾಶ್ರಮಕ್ಕೆ ಕಾಲಿಡುವ ಕಾರಣದಿಂದಲೇ ಸುದ್ದಿಯಲ್ಲಿದ್ದಾರೆ. ಆ ಕೆಲಸಗಳ ನಡುವೆಯೇ ಅವರು ಸಿನಿಮಾ ಜವಾಬ್ದಾರಿಗಳನ್ನೂ ಮರೆತಿಲ್ಲ. ಮದುವೆ ಕಾರ್ಯಗಳು ಪೂರ್ಣಗೊಂಡ ಬಳಿಕ ನಿಖಿಲ್ ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯರಾಗುವ ನಿರೀಕ್ಷೆಯಿದೆ.
ನಿಶ್ಚಿತಾರ್ಥದ ನಂತರ ನಿಖಿಲ್ ತಮ್ಮ ಭಾವಿ ಪತ್ನಿ ರೇವತಿ ಅವರೊಂದಿಗೆ ಅಡ್ಡಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಅವರೊಂದಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ವಿಶೇಷವಿರುವುದು ಅವರ ಚಿತ್ರಗಳಿಗೆ ಬರುವ ಕಾಮೆಂಟ್‌ಗಳಲ್ಲಿ. ಮುಂದೆ ಓದಿ...

ಪ್ರಥಮ್ ಕಾಮೆಂಟ್ ಜನಪ್ರಿಯ
ನಿಖಿಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕುವ ಪ್ರತಿ ಚಿತ್ರಕ್ಕೂ 'ಬಿಗ್ ಬಾಸ್' ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಕಾಮೆಂಟ್ ಹಾಕುತ್ತಿದ್ದಾರೆ. ಈ ಕಾಮೆಂಟ್‌ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಅವುಗಳಿಗೇ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಎಲ್ಲ ಫೋಟೊಕ್ಕೂ ಕಾಮೆಂಟ್ ಮಾಡುತ್ತೀರಲ್ಲ. ಅದನ್ನು ಓದುವುದೇ ಮಜಾ ಎಂದು ನಿಖಿಲ್ ಅಭಿಮಾನಿಗಳು ಹೇಳುತ್ತಿದ್ದಾರೆ.

ಕುಮಾರಣ್ಣಂಗೆ ಬೇಗ ಪ್ರಮೋಷನ್ ಕೊಡಿ
ನಿಖಿಲ್ ಅವರ ಬಹುತೇಕ ಫೋಟೊಗಳಿಗೆ ಪ್ರಥಮ್, ತಮಾಷೆಯಾಗಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರೊಂದಿಗೆ ನಿಖಿಲ್ ಜೋಡಿ ನಿಂತಿದ್ದ ಫೋಟೊಗೆ ಪ್ರಥಮ್, ಎರಡು couple ಚೆನ್ನಾಗಿದೆ...! ಆದಷ್ಟು ಬೇಗ ನಮ್ ಕುಮಾರಣ್ಣರಿಗೆ promotion ಕೊಡಿ.(ತಾತನ promotion) ಗುರುಗಳೇ ಎಂದು ಬೇಡಿಕೆ ಇರಿಸಿದ್ದಾರೆ.

ಫೋಟೊಗ್ರಾಫರ್‌ನ ಬದಲಿಸಿ ಬಿಡಿ
ಇದೇ ಆಯ್ತು....ಸ್ವಲ್ಪ ಬೇರೆ ಥರ ಸಿನೆಮ್ಯಾಟಿಕ್ ಪೋಸ್ ಕೊಡೋದು ತಾನೆ?? ಇದೇ ಥರಾ ಒಂದು 50 ಫೋಟೊ ಹಾಕಿದೀರಾ? ಕ್ಯಾಮೆರಾ ಮ್ಯಾನ್‌ಗೆ ಹೇಳ್ಬಿಟ್ಟು ಆಂಗಲ್ ಚೇಂಜ್ ಮಾಡ್ಸೋದು ತಾನೇ?? ನಿಖಿಲ್ ಅಣ್ಣ, ನನಗ್ಯಾಕೋ ಸ್ಟಿಲ್ ಫೋಟೊಗ್ರಾಫರ್ನ ಚೇಂಜ್ ಮಾಡೋದು ಉತ್ತಮ ಅನ್ನಿಸ್ತಾ ಇದೆ ಎಂದು ಕಾಲೆಳೆದಿದ್ದಾರೆ.

ಅವಳಿ ಜವಳಿ ಆಗಲಿ
10 ದಿನದ ಹಿಂದೆ ನಿಮ್ಮ ಸಂದರ್ಶನದಲ್ಲಿ ನೋಡಿದ ನೆನೆಪು...! ಇನ್ನು ಮೀಟ್ ಮಾಡಿಲ್ಲ, ಮಾತಾಡಿಲ್ಲ ಅಂತ.... ಒಂದು ಸಲ ಮೀಟ್ ಮಾಡಿ ಎಂಗೇಜ್ಮೆಂಟ್ ಆಗ್ತಿದ್ದಂಗೆ ಏನಣ್ಣ ದಿನ ಅವ್ರ ಮನೆಗೆ ಅಟೆಂಡೆನ್ಸ್ ಹಾಕ್ತಿದ್ದೀರಾ.. ನೀವು-ರೇವತಿ ಅವ್ರು ಸೂಪರ್..... ಕುಮಾರಣ್ಣರಿಗೆ ಸುಕುಮಾರ ಅನ್ನೋ ಮೊಮ್ಮಗ ಆಗ್ಲಿ! ರೇವತಿ ಅವ್ರಿಗೆ ಭಾನುಮತಿ-ಇಂದುಮತಿ ಅನ್ನೋ ಅವಳಿ-ಜವಳಿನೂ ಆಗ್ಲಿ...! ಎಂದು ಕಿಚಾಯಿಸಿದ್ದಾರೆ ಪ್ರಥಮ್.


Click it and Unblock the Notifications











