ಕಿಚ್ಚ ಒಪ್ಪಿಲ್ಲ.. ಓಂ ಪ್ರಕಾಶ್ ರಾವ್ ಕೇಳಿಲ್ಲ? 'ಬಾಜಿಗರ್' ರಿಮೇಕ್ ಮಿಸ್ ಆಗಿದ್ದೆಲ್ಲಿ?

ಕಿಚ್ಚ ಸುದೀಪ್ ಹಾಗೂ ಓಂ ಪ್ರಕಾಶ್ ರಾವ್ ಕಾಂಬಿನೇಷನ್‌ನಲ್ಲಿ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಅದರಲ್ಲೂ 'ಹುಚ್ಚ' ಸಿನಿಮಾ ಕಿಚ್ಚ ಸುದೀಪ್ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟಿತ್ತು. ಇಲ್ಲಿಂದ ಸುದೀಪ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

ಕಿಚ್ಚ ಸುದೀಪ್‌ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದು, ಬೆರಳೆಣಿಕೆಯಷ್ಟು ಸಿನಿಮಾ ಆಗಿದ್ದರೂ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿವೆ. 'ಹುಚ್ಚ' ಬಳಿಕ 'ಪಾರ್ಥ' ಹಾಗೂ 'ಹುಬ್ಬಳ್ಳಿ' ಅಂತಹ ಸಿನಿಮಾಗಳು ಬಂದಿದ್ದವು. ಆದರೆ, ಈ ಸಿನಿಮಾಗಳ ಮಧ್ಯೆ ಓಂ ಪ್ರಕಾಶ್ ರಾವ್ ಕಿಚ್ಚನಿಗಾಗಿ ರಿಮೇಕ್ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ, ಜಸ್ಟ್ ಮಿಸ್ ಆಯ್ತು.

ಹುಚ್ಚ ಹಿಟ್ ಆಗುತ್ತಿದ್ದಂತೆ ಕಿಚ್ಚ ಸುದೀಪ್‌ಗೆ 'ಬಾಜಿಗರ್' ಸಿನಿಮಾ ಮಾಡುವಂತೆ ಸಲಹೆ ನೀಡಿದ್ದರು. ರಿಮೇಕ್ ರೈಟ್ಸ್ ತೆಗೆದುಕೊಂಡು ಬರುವಂತೆಯೂ ಹೇಳಿದ್ದರು. ಆದರೆ, ಸುದೀಪ್ ನಟಿಸಲಿಲ್ಲ. ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಲಿಲ್ಲ. ಅಸಲಿಗೆ ಅಂದು ಏನಾಯ್ತು? ಅನ್ನೋದನ್ನು ಓಂ ಪ್ರಕಾಶ್ ರಾವ್ ಫಿಲ್ಮಿಬೀಟ್‌ಗೆ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಆ ಝಲಕ್ ಇಲ್ಲಿದೆ.

'ಹುಚ್ಚ' ಸಿನಿಮಾನೇ ಮೊದಲ ರಿಮೇಕ್

'ಹುಚ್ಚ' ಸಿನಿಮಾನೇ ಮೊದಲ ರಿಮೇಕ್

"ರಿಮೇಕ್ ಮಾಡಿದ ಸಿನಿಮಾನೇ ಹುಚ್ಚ. ಆ ಟೈಂನಲ್ಲಿ ನನಗೆ ರಿಮೇಕ್ ಮಾಡುವುದಕ್ಕೆ ಬರುತ್ತಿರಲಿಲ್ಲ. ಮೊದಲ ಬಾರಿಗೆ ಸುದೀಪ್ ಅವರು ತುಂಬಾ ಫೋರ್ಸ್ ಮಾಡಿ, ನೀವು ಮಾಡಲೇ ಬೇಕು ಅಂತ ಮಾಡಿಸಿದ್ರು. ಅದನ್ನು ತುಂಬಾನೇ ರಿಸ್ಕ್ ತೆಗೆದುಕೊಂಡು, ಕೆಲಸ ಕಲಿತೇ ಸಿನಿಮಾ ಮಾಡಿದ್ದೇನೆ.ಬೇರೆ ಯಾವುದು ಇಂತಹ ಸಿನಿಮಾ ಮಾಡಿರಲಿಲ್ಲ." ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

'ಬಾಜಿಗರ್' ರಿಮೇಕ್ ಆಗಿಲ್ಲ ಯಾಕೆ?

'ಬಾಜಿಗರ್' ರಿಮೇಕ್ ಆಗಿಲ್ಲ ಯಾಕೆ?

"ಬಾಜಿಗರ್ ಅಂತ ಒಂದು ಸಿನಿಮಾ ತರಿಸಿದ್ದೆ. ಸುದೀಪ್ ಅವರಿಗಾಗಿ ತರಿಸಿದ್ದು, ಟೆನ್ನಿಸ್ ಅವರು ಹೇಳಿದ್ದು, ತುಂಬಾ ಚೆನ್ನಾಗಿದೆ ಮಾಡಿ ಸರ್. ನೀವು ಸೂಪರ್‌ಸ್ಟಾರ್ ಆಗುತ್ತೀರ ಮಾಡಿ ಅಂದಿದ್ದರು. ಏನು ತಪ್ಪು ತಿಳುವಳಿಕೆನೋ ಗೊತ್ತಿಲ್ಲ. ಸಿನಿಮಾ ಮಾಡುವುದಕ್ಕೆ ಆಗಿಲ್ಲ." ಎಂದು ಅಂದು ತಮ್ಮ ಹಾಗೂ ಕಿಚ್ಚ ಸುದೀಪ್ ನಡುವಿನ ಮಿಸ್‌ ಅಂಡರ್‌ಸ್ಟ್ಯಾಂಡಿಂಗ್ ಬಗ್ಗೆ ವಿವರಿಸಿದ್ದಾರೆ.

'ಹುಚ್ಚ' ಆದ್ಮೇಲೆ 'ಬಾಜಿಗರ್' ಮಾಡ್ಬೇಕಿತ್ತು

'ಹುಚ್ಚ' ಆದ್ಮೇಲೆ 'ಬಾಜಿಗರ್' ಮಾಡ್ಬೇಕಿತ್ತು

"ಬಾಜಿಗರ್ ಸಿನಿಮಾವನ್ನು ಸುದೀಪ್ ಸರ್‌ಗೆ ಮಾಡಬೇಕು ಅಂತ ತುಂಬಾನೇ ಆಸೆಯಿತ್ತು. ಅವರಿಗೆ ಹೇಳಿದ್ದೆ ನಾನು ಮೊದಲು ಆ ಪಿಕ್ಚರ್ ತರಿಸಿ ಅಂತ. ಹುಚ್ಚ ಆದ್ಮೇಲೆ ಬೇರೆ ಯಾವ ಸಿನಿಮಾವನ್ನಾದರೂ ಮಾಡಿ. ಬಾಜಿಗರ್ ಮಾಡಿ. ನಿಮ್ಮ ಮುಖಕ್ಕೆ. ನಿಮ್ಮ ಎಕ್ಸ್‌ಪ್ರೆಷನ್‌ಗೆ ಬಾಜಿಗರ್ ತುಂಬಾ ದೊಡ್ಡ ಸೂಪರ್‌ಸ್ಟಾರ್ ಮಾಡುತ್ತೆ ಅಂತ ತರಿಸಿದ್ದ ಸಿನಿಮಾ ಬಾಜಿಗರ್." ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

ಸಿನಿಮಾದಲ್ಲಿ ಹಾಡು, ಫೈಟ್ ನೋಡಲ್ಲ

ಸಿನಿಮಾದಲ್ಲಿ ಹಾಡು, ಫೈಟ್ ನೋಡಲ್ಲ

"ಮನೆಯಲ್ಲಿ ಇದ್ದಾಗ, ದಿನಕ್ಕೆ ಏಳರಿಂದ ಎಂಟು ಸಿನಿಮಾ ನೋಡುತ್ತೇನೆ. ಹಾಡುಗಳನ್ನು, ಫೈಟ್‌ಗಳನ್ನು ಮುಂದೆಕ್ಕೆ ಓಡಿಸಿ ಸಿನಿಮಾ ನೋಡುತ್ತೇನೆ. ಅದರಲ್ಲಿ ನಾವು ಕಲಿತು ಏನೂ ಮಾಡುವಂತಹದ್ದು ಇಲ್ಲ. ಮೇಕಿಂಗ್, ಕಥೆ, ಡೈಲಾಗ್ಸ್, ಸೀನ್ ತೆಗೆದಿರೋ ವಿಧಾನ, ಬೇರೆ ಭಾಷೆಯ ವಿವಾದ, ನಮ್ಮ ಭಾಷೆಯ ಸಿನಿಮಾಗಳೂ ಆಗಿರಬಹುದು ಅದನ್ನು ನೋಡಿ ನಾನೇನು ಕಲಿಯಬಹುದು, ಅದ್ರಿಂದ ಏನು ಸಿಗುತ್ತೆ ಅನ್ನೋ ಕೆಲಸವನ್ನು ಜಾಸ್ತಿ ಮಾಡುತ್ತೇನೆ. ಎಲ್ಲಾ ಭಾಷೆಯ ಸಿನಿಮಾ ನೋಡುತ್ತೇವೆ. ಯಾವುದೂ ಸಿನಿಮಾ ಸಿಕ್ಕಿಲ್ಲ ಅಂದ್ರೆ, ನೋಡಿದ ಸಿನಿಮಾವನ್ನೇ ಮತ್ತೆ ನೋಡುತ್ತೇನೆ."

More from Filmibeat

English summary
Om Prakash Rao requested that Kichcha Sudeep bring Baazigar rights, not happen due to a misunderstanding, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X