ಸರ್ಜಾ ಒಪ್ಪಲಿಲ್ಲ.. ರಾಮು–ಓಂ ಪ್ರಕಾಶ್ ನಡುವೆ ಕಿತ್ತಾಟ ನಿಂತಿರಲಿಲ್ಲ.. ಆದರೂ 'AK 47' ಸೆಟ್ಟೇರಿದ್ದೇಗೆ?

ಕನ್ನಡ ಚಿತ್ರರಂಗದ ಅತ್ಯುತ್ತಮ ಆಕ್ಷನ್ ಸಿನಿಮಾಗಳಲ್ಲೊಂದು 'AK 47'. ಶಿವರಾಜ್‌ಕುಮಾರ್, ಓಂ ಪ್ರಕಾಶ್ ರಾವ್ ಹಾಗೂ ನಿರ್ಮಾಪಕ ರಾಮು ಕಾಂಬಿನೇಷನ್‌ನಲ್ಲಿ ಬಂದಿರೋ ಸಿನಿಮಾವಿದು. ಸುಮಾರು 175 ದಿನ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಂಡ ಸಿನಿಮಾವಿದು.

ಕನ್ನಡದ ಎವರ್‌ಗ್ರೀನ್ ಆಕ್ಷನ್‌ ಸಿನಿಮಾಗಳ ಪಟ್ಟಿಯಲ್ಲಿ 'AK 47' ಟಾಪ್‌ನಲ್ಲಿದೆ. ಅಂದ್ಹಾಗೆ ಇದು ಶಿವರಾಜ್‌ಕುಮಾರ್ ಅಭಿನಯದ 50ನೇ ಸಿನಿಮಾ ಕೂಡ ಆಗಿತ್ತು. ಆದರೆ, ಇದೇ ಸಿನಿಮಾಗಾಗಿ ಓಂ ಪ್ರಕಾಶ್‌ ರಾವ್ ಹಾಗೂ ನಿರ್ಮಾಪಕ ರಾಮು ನಡುವೆ ಕಿತ್ತಾಟವೇ ನಡೆದಿತ್ತು.

'AK 47' ಕಥೆಯಲ್ಲಿ ಶೇ.40ರಷ್ಟು ಪರಭಾಷೆಯ ಸಿನಿಮಾದ ಡೈಲಾಗ್ ಬೇಕಿತ್ತು. ಹೀಗಾಗಿ ರಾಮು ಬೆಂಗಾಲಿ ಅಂದ್ರೆ, ಓಂ ಪ್ರಕಾಶ್ ರಾವ್ ಹಿಂದಿ ಎಂದು ವಾದ ಮಾಡಿದ್ದರು. ಹೀಗಾಗಿ ಈ ಸಿನಿಮಾವನ್ನೇ ಬಿಟ್ಟು ಮತ್ತೊಂದು ಸಿನಿಮಾಗೆ ಓಂ ಪ್ರಕಾಶ್ ರಾಮ್ ಜೈ ಎಂದಿದ್ದರು. ಆ ಬಳಿಕ ರಾಮು 'AK 47' ಕಥೆಯನ್ನು ಅರ್ಜುನ್ ಸರ್ಜಾಗೆ ಹೇಳಿ, ನಾಲ್ಕು ಭಾಷೆಯಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ, ಅರ್ಜುನ್ ಸರ್ಜಾ ಈ ಸಿನಿಮಾವನ್ನು ಮಾಡೋದಿಲ್ಲ ಎಂದಿದ್ದರು. ಅದಕ್ಕೆ ಕಾರಣವೇನು? ಅನ್ನೋದನ್ನು ಓಂ ಪ್ರಕಾಶ್ ರಾವ್ ಈ ಸಂಜೆಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

 ಮೊದಲಿದ್ದ ಟೈಟಲ್ '1947ನಿಂದ AK 47'

ಮೊದಲಿದ್ದ ಟೈಟಲ್ '1947ನಿಂದ AK 47'

"ಈ ಟೈಟಲ್ ಬಂದು ನಮ್ಮ ಗುರುಗಳು ವಿ ಸೋಮಶೇಖರ್ ಅವರದ್ದು. 1947ನಿಂದ 'AK 47' ಅನ್ನೋದು ಟೈಟಲ್. ನಾನು ನೈಜ ಘಟನೆಗಳನ್ನು ಇಟ್ಟುಕೊಂಡೇ ಸಿನಿಮಾ ಮಾಡುವಂತಹ ಕೆಲಸಗಾರ ನಾನು. 1993ಯಲ್ಲಿ ಸಂಜಯ್ ದತ್ ಘಟನೆ ಬಾಂಬೆಯಲ್ಲಿ ನಡೆದಿತ್ತು. ಅವರು ಸಿಕ್ಕಿ ಹಾಕೊಂಡು ಎಲ್ಲಾ ಆಗಿದ್ದು. ಚೆನ್ನಾಗಿದೆ ವಿಷಯ ಅಂತ ಇದನ್ನು ಇಟ್ಕೊಂಡು ಮಾಡ್ಬೇಕಲ್ಲ. ಒಬ್ಬ ಅಮಾಯಕ ಇದರಲ್ಲಿ ಸಿಕ್ಕಿಕೊಂಡರೆ ಯಾವ ರೀತಿ ಬರುತ್ತಾನೆ ಅಂತ ಮಾಡಿದ್ದು. ಇದನ್ನು ರಾಮು ಅವರು ಎಸ್‌ ಬ್ರದರ್ಸ್ ಅಂತ ಇದ್ದಾರೆ ಅವರಿಗೆ ಹೇಳಿದ್ದರು. ಅವರು ಒಂದು ಲೈನ್ ಮಾಡಿದ್ದರು. ಆ ಲೈನ್ ಕಥೆ ಅವರದ್ದೇ. ಅದನ್ನು ತೆಗೆದುಕೊಂಡು ನಮ್ಮ ಕಮರ್ಷಿಯಲ್‌ ಲೈನ್‌ ಏನು ಬೇಕೋ ಅದನ್ನಿಟ್ಟುಕೊಂಡು ಪ್ಲ್ಯಾನ್ ಮಾಡಿದ್ದಿ.ಅದು ರಾಮು ಅವರಿಗೆ ಇಷ್ಟ ಆಗಲಿಲ್ಲ." ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

 'AK 47' ಸಿನಿಮಾ ನಿಂತು ಹೋಗಿತ್ತು'

'AK 47' ಸಿನಿಮಾ ನಿಂತು ಹೋಗಿತ್ತು'

"ಅವರು ಹೇಳಿದ್ದು ಬೆಂಗಾಲಿ ಭಾಷೆಯನ್ನು ಕನ್ನಡದಲ್ಲಿ ತರಬೇಕು ಅಂತ ಹೇಳಿದ್ದರು. ಅದು ಕಮ್ಮಿ ಅಂದರೂ ಶೇ.40ರಿಂದ 50ರಷ್ಟು ಇತ್ತು. ನನಗೂ ಅವರಿಗೂ ಚಿಕ್ಕ ಕ್ಲ್ಯಾಶ್ ಆಗಿತ್ತು. ರಾಮು ಸರ್‌ ಹೇಳಿದೆ ಬಂಗಾಳಿ ಭಾಷೆ ನಮ್ಮ ಜನರಿಗೆ ಗೊತ್ತಿಲ್ಲ. ನಾನು ಆ ಭಾಷೆಯನ್ನು ಜನಗಳ ಮನಸ್ಸಿಗೆ ಹಾಕೋದು ತುಂಬಾನೇ ಕಷ್ಟ ಆಗುತ್ತೆ. ಇಂದು ಲೆವೆಲ್‌ಗೆ ಹಿಂದಿ ಅರ್ಥ ಆಗುವುದೇ ಕಷ್ಟ. ಇನ್ನು ಬಂಗಾಳಿ ಭಾಷೆಯನ್ನು ಮಾಡುವುದು ಇನ್ನೂ ಕಷ್ಟ ಬೇಡ ಅಂತ ಹೇಳಿದ್ದೆ.ಈ ಬಗ್ಗೆ ಮಾತುಕತೆ ಮಾಡಿದ್ಮೇಲೆ ಫಿಕ್ಚರ್ ನಿಂತು ಹೋಯ್ತು." ಎಂದು ಈ ಸಂಜೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 ಅರ್ಜುನ್ ಸರ್ಜಾ 'AK 47' ಸಿನಿಮಾ ಮಾಡಲಿಲ್ಲ

ಅರ್ಜುನ್ ಸರ್ಜಾ 'AK 47' ಸಿನಿಮಾ ಮಾಡಲಿಲ್ಲ

"ನಾನು ಹೇಳುತ್ತಿರೋದು ಓಂ ಪ್ರಕಾಶ್‌ ರಾವ್‌ಗೆ ಅರ್ಥ ಆಗುತ್ತಿಲ್ಲವೇನೋ ಅಂತ ಅವರು ಅರ್ಜುನ್ ಸರ್ಜಾ ಅವರನ್ನು ಹಾಕೊಂಡು ಕಥೆ ಮಾಡಿದ್ದರು. ಅರ್ಜುನ್ ಸರ್ಜಾ ಅವರಿಗೆ ರಾಮು ಅವರು ಎಸ್‌ ಎಸ್‌ ಬ್ರದರ್ಸ್ ಮಾಡಿದ ಸ್ಟೋರಿ ಮತ್ತು ರಾಮು ಅಂದ್ಕೊಂಡಿದ್ದನ್ನು ಹೇಳಿದ್ದರು. ಅರ್ಜುನ್ ಸರ್ಜಾ ಅವರು ಸಲಹೆ ನೀಡಿದ್ದರು. ನೀನು ನನ್ನ ಸ್ನೇಹಿತ ಇದ್ಯಾಕೋ ರೀಚ್ ಆಗುತ್ತಿಲ್ಲ. ನನಗೇನೋ ಇಷ್ಟವಿಲ್ಲ. ನಿನಗೆ ಏಟು ಬೀಳುತ್ತೆ ಎಂದಿದ್ದರು. ನೀನು ಸೋಲುವುದು ನನಗೆ ಇಷ್ಟವಿಲ್ಲ ಎಂದಿದ್ರು." ಎನ್ನುತ್ತಾರೆ ಓಂ ಪ್ರಕಾಶ್ ರಾವ್.

 ರಾಮು ಒತ್ತಾಯಕ್ಕೆ 'AK 47' ಆಯ್ತು

ರಾಮು ಒತ್ತಾಯಕ್ಕೆ 'AK 47' ಆಯ್ತು

"ಆ ಮೇಲೆ ರಾಮು ಅವರು ಬಂದು ಮತ್ತೆ 'AK 47' ಪಿಕ್ಚರ್ ಮಾಡೋಣ ಅಂದ್ರು. ನಾನು ಮಾಡೋದು ಬೇಡ ಅಂದೆ. ಒಮ್ಮೆ ಮನಸ್ಸಿಂದ ತೆಗೆದರೆ ಮತ್ತೆ ಆ ಸಿನಿಮಾ ಮಾಡುವುಕ್ಕೆ ಕಷ್ಟ ಆಗುತ್ತೆ. ನಿಮ್ಮ ಬಳಿ 'ಲಾ ಅಂಡ್ ಆರ್ಡರ್' ಟೈಟಲ್ ಇದೆ. ನನ್ನದು ಲಾಕಪ್‌ ಡೆತ್ ಆಗಿದೆ. ದೊಡ್ಡ ಹಿಟ್ ಸಿನಿಮಾ. ಒಂದು ಪೊಲೀಸ್ ಆಫೀಸರ್ ಸ್ಕ್ರಿಪ್ಟ್ ಮಾಡೋಣ ಸಖತ್ ಆಗಿರುತ್ತೆ ಅಂತ ಹೇಳಿದ್ದೆ. ಇಲ್ಲ ಮಾಡೋಣ ಅಂತ ಎರಡು ಮೂರು ಬಾರಿ ಚರ್ಚೆ ಮಾಡಿ, ನೀವು ಹೇಳಿದ ಹಾಗೇ ಮಾಡೋಣ ಅಂತ ಹೇಳಿದ್ರು." ಎಂದು 'AK 47' ಬಗೆಗಿನ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿದ್ದಾರೆ.

More from Filmibeat

English summary
Om Prakash Rao Said Arjun Sarja Rejected Ak 47 Than It became Shivarajkumar's 50th Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X