ದರ್ಶನ್ ಧ್ವನಿ ನೀಡಿದ್ದ ಒಂಬತ್ತನೇ ದಿಕ್ಕು ಚಿತ್ರದ ಆಮಿಮೇಷನ್ ವಿಡಿಯೋ ಬಿಡುಗಡೆಗೆ ಮುಹೂರ್ತ

ಸ್ಯಾಂಡಲ್‌ವುಡ್‌ನಲ್ಲಿ ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್. ಈಗ 'ಒಂಬತ್ತನೇ ದಿಕ್ಕು' ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದಯಾಳ್ ನಿರ್ದೇಶಿಸಿದ ಈ ಸಿನಿಮಾ ಕೂಡ ಪ್ರಯೋಗಾತ್ಮಕ ಸಿನಿಮಾವೇ ಆಗಿದ್ದು, ಪ್ರೇಕ್ಷಕರಿಗೆ ಒಂದು ವಿಭಿನ್ನ ಅನುಭವ ಕೊಡಲು ನಿರ್ದೇಶಕರು ಸಜ್ಜಾಗಿದ್ದಾರೆ.

ಪವನ್ ಕುಮಾರ್ ನಿರ್ದೇಶಿಸಿದ 'ಲೂಸಿಯಾ', ದುನಿಯಾ ಸೂರಿ ನಿರ್ದೇಶನದ 'ಟಗರು' ಈ ಸಿನಿಮಾಗಳಲ್ಲಿ ವಿಭಿನ್ನ ಸ್ಕ್ರೀನ್ ಪ್ಲೇ ಕಾಣಬಹುದಾಗಿತ್ತು. ಅದೇ ರೀತಿಯ ಚಿತ್ರಕಥೆ ಒಂಬತ್ತನೇ ದಿಕ್ಕು ಸಿನಿಮಾದಲ್ಲಿಯೂ ನೋಡಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾದಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆಯಿದೆ. ಅದೇನಂದರೆ, ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದಾರೆ. ಆ ವಿಡಿಯೋ ಬಿಡುಗಡೆಗೆ ಈಗ ನಿರ್ದೇಶಕ ದಯಾಳ್ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ದರ್ಶನ್ ಧ್ವನಿ ನೀಡಿದ ಅನಿಮೇಷನ್ ವಿಡಿಯೋ

ದರ್ಶನ್ ಧ್ವನಿ ನೀಡಿದ ಅನಿಮೇಷನ್ ವಿಡಿಯೋ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದ್ದರೆ, ಆ ಸಿನಿಮಾಗೆ ಒಂದು ಬಲ ಬರುತ್ತೆ. ಒಂದು ವರ್ಷದ ಹಿಂದೆನೇ ಈ ಸಿನಿಮಾಗೆ ದರ್ಶನ್ ವಾಯ್ಸ್ ಓವರ್ ಕೊಟ್ಟಿದ್ದರು. ಆ ಬಳಿಕ 'ಒಂಬತ್ತನೇ ದಿಕ್ಕು' ಸಿನಿಮಾ ದರ್ಶನ್ ಅವರ ಧ್ವನಿಯ ಬಗ್ಗೆ ಎಲ್ಲೂ ಪ್ರಚಾರದಲ್ಲಿ ಬಳಸಿಕೊಂಡಿರಲಿಲ್ಲ. ಈಗ ಅವರ ಸಿನಿಮಾದ ಆರಂಭ ಮತ್ತು ಅಂತ್ಯ ಎರಡು ಘಟನೆಗಳನ್ನು ಹೇಳುವ ವಿಡಿಯೋದನ್ನು ದಯಾಳ್ ಬಿಡುಗಡೆ ಮಾಡಲಿದ್ದಾರೆ. ಈ ವಿಡಿಯೋಗೆ ದರ್ಶನ್ ಧ್ವನಿ ನೀಡಿದ್ದರು. ಅದನ್ನು ಬಿಡುಗಡೆ ಹೊಸ ವರ್ಷದ ಮೊದಲ ದಿನ ಬಿಡುಗಡೆ ಮಾಡುತ್ತಿದ್ದಾರೆ.

ಎರಡು ನಿಮಿಷದ ವಿಡಿಯೋ ವಿಶೇಷತೆ ಏನು?

ಎರಡು ನಿಮಿಷದ ವಿಡಿಯೋ ವಿಶೇಷತೆ ಏನು?

'ಒಂಬತ್ತನೇ ದಿಕ್ಕು' ವಿಶಿಷ್ಟ ಸ್ಕ್ರೀನ್ ಪ್ಲೇ ಯುಳ್ಳ ಸಿನಿಮಾ ಆಗಿದೆ. ಎರಡು ಪ್ರತ್ಯೇಕ ಘಟನೆಗಳ ಮಧ್ಯೆ ನಡೆಯುವ ಕಥೆ ಇದಾಗಿದೆ. ಎರಡು ಘಟನೆಗಳನ್ನು ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡಿದರೆ ಹೇಗಿರುತ್ತೆ ಅನ್ನುವ ಕಲ್ಪನೆ ಬಂತು. ಅದನ್ನು ಆಧರಿಸಿ ಸಿನಿಮಾ ಮಾಡಿದ್ದೇವೆ. ಈ ಕಥೆಗೆ ಒಂದು ತೂಕ ಬರಬೇಕು ಅಂದರೆ, ಅದಕ್ಕೆ ದೊಡ್ಡವರು ಧ್ವನಿ ನೀಡಬೇಕಿತ್ತು. ಅದಕ್ಕೆ ದರ್ಶನ್ ಸರ್ ಅವರನ್ನು ಕೇಳಿಕೊಂಡಾಗ, ಅವರು ಶೂಟಿಂಗ್ ವೇಳೆ ಬಿಡುವು ಸಿಕ್ಕಾಗ ಬಂದು ಧ್ವನಿ ನೀಡಿದ್ದರು. ಅದೇ ವಿಡಿಯೋವನ್ನು ಜನವರಿ 9ರಂದು ಬಿಡುಗಡೆ ಮಾಡುತ್ತಿದ್ದೇವೆ." ಎಂದು ನಿರ್ದೇಶಕ ದಯಾಳ್ ಪದ್ಮನಾಭ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.

ಅನಿಮೇಷನ್ ವಿಡಿಯೋಗೆ ದರ್ಶನ್ ಧ್ವನಿ

ಅನಿಮೇಷನ್ ವಿಡಿಯೋಗೆ ದರ್ಶನ್ ಧ್ವನಿ

ಆರಂಭ ಮತ್ತು ಅಂತ್ಯ ಈ ಎರಡೂ ಘಟನೆಗಳನ್ನು ಹೇಳುವ ವಿಶಿಷ್ಟ ವಿಡಿಯೋ ಸಿನಿಮಾದಲ್ಲೂ ಇರುತ್ತೆ. ಅದಕ್ಕೆ ಪೆನ್ಸಿಲ್ ಸ್ಕೆಚ್ ಬಳಸಿ, ಹಕ್ಕಿ ಮತ್ತು ಬೇಟೆಗಾರನ ಕಲ್ಪನೆಯನ್ನಿಟ್ಟುಕೊಂಡು ಆನಿಮೇಷನ್ ಟಚ್ ನೀಡಲಾಗಿದೆ. ಈ ವಿಡಿಯೋಗೆ ಚಾಲೆಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದು, ಅದನ್ನು ಹೊಸ ವರ್ಷಕ್ಕೆ ದರ್ಶನ್ ಹಾಗೂ ಲೂಸ್ ಮಾದನ ಅಭಿಮಾನಿಗಳಿಗಾಗಿ ಉಡುಗೊರೆಯಾಗಿ ನೀಡಲು ನಿರ್ದೇಶಕ ದಯಾಳ ಪದ್ಮನಾಭ್ ಮುಂದಾಗಿದ್ದಾರೆ.

ಯೋಗಿ, ಅದಿತಿ, ಸಾಯಿಕುಮಾರ್ ನಟನೆ

ಯೋಗಿ, ಅದಿತಿ, ಸಾಯಿಕುಮಾರ್ ನಟನೆ

ಒಂಬತ್ತನೇ ದಿಕ್ಕು ದಯಾಳ್ ನಿರ್ದೇಶನದ ಪಕ್ಕಾ ಕಮರ್ಷಿಯಲ್ ಪ್ರಯೋಗಾತ್ಮಕ ಸಿನಿಮಾ. ಲೂಸ್ ಮಾದ ಯೋಗಿ, ಆದಿತಿ ಪ್ರಭುದೇವ, ರಮೇಶ್ ಭಟ್, ಸಾಯಿಕುಮಾರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ನಿಗೂಢ ಕಥೆ ಒಂದು ಹಂತದಲ್ಲಿ ಮುಖಾಮುಖಿಯಾಗುತ್ತವೆ ಎಂದಿರುವ ದಯಾಳ್ ಕಲ್ಪನೆಗೆ ಚಾಲೆಂಜಿಂಗ್ ಸ್ಟಾರ್ ಕೂಡ ಸಾಥ್ ನೀಡಿದ್ದಾರೆ. ಈ ಮೂಲಕ ಬಿಗ್ ಸ್ಕ್ರೀನ್ ಮೇಲೆ ಮತ್ತೆ ದರ್ಶನ್ ಧ್ವನಿ ಕೇಳಲು ಡಿಬಾಸ್ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

More from Filmibeat

English summary
Ombattane Dikku theme animation voice over by Darshan will be released on January 01st. Dayal Padmanabh directed and Loose Mada, Adithi Prabhudeva starrer movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X