ನಮ್ಮ ಮೆಟ್ರೋ ಗ್ರೀನ್‌ಲೈನ್‌ ಬೋಗಿಗಳ ತುಂಬೆಲ್ಲ ಪುನೀತ್ ರಾಜ್‌ಕುಮಾರ್; ಕುಣಿದು ಕುಪ್ಪಳಿದ ಅಪ್ಪು ಫ್ಯಾನ್ಸ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಮ ಸ್ಮರಣೆ ಇತ್ತೀಚೆಗಷ್ಟೇ ನಡೆದಿದೆ. ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತಮ್ಮ ನೆಚ್ಚಿನ ನಟನಿಗೆ ಪುಷ್ಪಾರ್ಚನೆಯ ಮಾಡಿದ್ದರು. ಇದಾದ ಕೆಲವು ದಿನಗಳಲ್ಲಿಯೇ ದಿವಂಗತ ಡಾ. ಪುನೀತ್ ರಾಜ್‌ಕುಮಾರ್‌ ನಮ್ಮ ಮೆಟ್ರೋ ವಿಶೇಷ ಗೌರವವನ್ನು ಸಲ್ಲಿಸಿದೆ. ಇದು ಅಪ್ಪು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ.

ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ಅಭಿಮಾನಿಗಳು ನೊಂದು ಬೆಂದು ಹೋಗಿದ್ದಾರೆ. ಅವರ ನೆನಪಿನಲ್ಲಿಯೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಅಪ್ಪು ನೆನಪಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಹೀಗಿರುವಾಗ ಪುನೀತ್ ರಾಜ್‌ಕುಮಾರ್ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳುವುದಕ್ಕೆ ಅಭಿಮಾನಿಗಳು ಪ್ರತಿ ದಿನ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಮೆಟ್ರೋ ಕೂಡ ಸಾಥ್ ಕೊಟ್ಟಿದೆ.

On the occasion of Kannada Rajyotsava Namma Metro Green Line Train Wrapped with Photos of Late Dr Puneeth Rajkumar

ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಜೋರಾಗಿ ನಡೆಯುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕನ್ನಡ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಆದರೆ, ನಮ್ಮ ಮೆಟ್ರೋ ಈ ಬಾರಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವನ್ನು ಆಚರಣೆ ಮಾಡಿದೆ. ತನ್ನ ಬೋಗಿಗಳಿಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಅಂಟಿಸಿ ರಾಜ್ಯೋತ್ಸವನ್ನು ಆಚರಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ಪವರ್‌ಸ್ಟಾರ್ ಪುನೀತ್

ನಮ್ಮ ಮೆಟ್ರೋ ತಮ್ಮ ಪ್ರಯಾಣಿಕರೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಿದೆ. ಹಿಂದಿ ಭಾಷೆಯ ವಿಚಾರಕ್ಕೆ ಸದಾ ಚರ್ಚೆಯಲ್ಲಿ ಇರುತ್ತಿದ್ದ ನಮ್ಮ ಮೆಟ್ರೋ ಈ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸಿದ ಪರಿಗೆ ಕನ್ನಡಿಗರು ಮನಸೋತಿದ್ದಾರೆ. ತನ್ನ ಗ್ರೀನ್ ಲೈನ್‌ನಲ್ಲಿ ಸಂಚರಿಸುವ ಬೋಗಿಗಳ ಮೇಲೆ ಕನ್ನಡದ ಬಾವುಟದ ಬಣ್ಣಗಳ ಜೊತೆ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಅಂಟಿಸಿದೆ. ನಮ್ಮ ಮೆಟ್ರೋದ ಈ ಯೋಜನೆ ಕನ್ನಡಿಗರ ಮನಗೆಲ್ಲುವಂತೆ ಮಾಡಿದೆ.

ನಗು ಮುಖದ 'ರಾಜಕುಮಾರ'ನ ದರ್ಶನ

ನಮ್ಮ ಮೆಟ್ರೋ ರೈಲಿನ ಮೇಲೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಗು ನಗುತ್ತಾ ಪ್ರಯಾಣಿಕರನ್ನು ಸ್ವಾಗತಿಸುವಂತೆ ಕಾಣುತ್ತಿದೆ. ಅಲ್ಲದೆ ಈ ಪೋಸ್ಟ್‌ಗಳ ಮೇಲೆ "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ" ವಾಕ್ಯಗಳು ಗಮನ ಸೆಳೆದವು. ಒಂದ್ಕಡೆ ಕನ್ನಡ ಪ್ರೇಮ ಹಾಗೂ ಇನ್ನೊಂದು ಕಡೆ ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನ. ಇವೆರಡನ್ನೂ ಒಂದೇ ಪೋಸ್ಟ‌ರ್‌ಗಳ ಮೂಲಕ ನಮ್ಮ ಮೆಟ್ರೋ ತೋರಿಸಿದೆ.

ಅಪ್ಪು ಕಂಡು ಸಂಭ್ರಮಿಸಿದ ಪ್ರಯಾಣಿಕರು

ಗ್ರೀನ್ ಲೈನ್ ಅಂದರೆ, ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಸಿಲ್ಕ್‌ ಬೋರ್ಡ್‌ವರೆಗೆ ಸಂಚಾರ ಮಾಡುವ ರೈಲು ಬೋಗಿಗಳಲ್ಲಿ ಕನ್ನಡದ ಬಣ್ಣಗಳ ಜೊತೆಗೆ ಪವರ್‌ಸ್ಟಾರ್ ಪುನೀ್ ರಾಜ್‌ಕುಮಾರ್ ಅವರನ್ನು ನೋಡಬಹುದಾಗಿದೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಖುಷಿ ಪಟ್ಟಿದ್ದಾರೆ. ಅವರಿಗೆ ಕನ್ನಡ ರಾಜ್ಯೋತ್ಸವದ ಜೊತೆ ಅಪ್ಪು ಹಬ್ಬವನ್ನು ಆಚರಣೆ ಮಾಡುತ್ತಿರುವಂತೆ ಭಾಸವಾಗಿದೆ. ಈ ರೈಲು ಬೋಗಿಗಳನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ನಮ್ಮ ಅಪ್ಪು ನಮ್ಮ ಹೆಮ್ಮೆ

ಮೆಟ್ರೋ ಬೋಗಿಗಳ ಮೇಲೆ ಪುನೀತ್ ರಾಜ್‌ಕುಮಾರ್ ಹಾಗೂ ಕನ್ನಡದ ಬಾವುಟದ ಬಣ್ಣಗಳು ರಾರಾಜಿಸಿದ್ದವು. ಇವುಗಳ ಜೊತೆಗೆ ಪುನೀತ್ ನಟಿಸಿದ ಕೊನೆಯ ಸಿನಿಮಾ 'ಗಂಧದ ಗುಡಿ'ಯ ಪೋಸ್ಟರ್ ಕೂಡ ನೋಡುವುದಕ್ಕೆ ಸಿಗುತ್ತಿದೆ. ಮೆಟ್ರೋ ರೈಲನ್ನು ನೋಡಿ ಪುನೀತ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. "ನಮ್ಮ ಮೆಟ್ರೋ ರೈಲು Looks So Good Today. ಯೋಗವು ಒಮ್ಮೆ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದೂ ಕೊನೆಗೆ.. ನಮ್ಮ ಮೆಟ್ರೋ ನಮ್ಮ ಅಪ್ಪು.. ನಮ್ಮ ಹೆಮ್ಮೆ" ಎಂದು ಬರೆದು ಪೋಸ್ಟ್ ಮಾಡುತ್ತಿದ್ದಾರೆ.

More from Filmibeat

English summary
On the occasion of Kannada Rajyotsava Namma Metro Green Line Train Wrapped with Photos of Late Dr Puneeth Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X