'KGF 2' ಟೀಸರ್ ಇಲ್ಲ, ಟ್ರೈಲರ್ ಇಲ್ಲ, ಯಶ್ ಬರ್ತ್‌ಡೇ ವಿಶೇಷತೆ ಏನು? ಜನವರಿ 07, ರಾತ್ರಿ 10.15ಕ್ಕೆ ಸಪ್ರೈಸ್

ಸೂಪರ್‌ಸ್ಟಾರ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಅಂದರೆ, ಅವರ ಅಭಿಮಾನಿಗಳಿಗೆ ಒಂದು ತಿಂಗಳಿಂದಲೇ ಹಬ್ಬ ಶುರುವಾಗಿರುತ್ತೆ. ನೆಚ್ಚಿನ ಬರ್ತ್‌ಡೇ ಹೇಗೆ ಆಚರಿಸಬೇಕು? ಯಾವ ರೀತಿ ಕೇಕ್ ಸಿದ್ಧಪಡಿಸಬೇಕು. ಎಲ್ಲೆಲ್ಲಿ ಕಟೌಟ್ ನಿಲ್ಲಿಸಬೇಕು? ದುಬಾರಿ ವೆಚ್ಚದ ಹೂವಿನ ಹಾರ ಹಾಕಬೇಕು. ನಟನೊಂದಿಗೆ ನಿಂತು ಫೋಟೊ ತೆಗೆಸಿಕೊಳ್ಳಬೇಕು. ಹೀಗೆ ಒಂದೆರಡು ಕನಸು ಕಾಣುವುದಿಲ್ಲ. ಜನವರಿ 8ರಂದು ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಕಿ ಭಾಯ್ ಅಭಿಮಾನಿಗಳು ರಾಕಿಂಗ್ ಬರ್ತ್‌ಡೇಗಾಗಿ ಕಾಯುತ್ತಿದ್ದಾರೆ.

2019ರಲ್ಲಿ ಕೊನೆಯ ಬಾರಿ ಯಶ್ ಅಭಿಮಾನಿಗಳು ರಾಕಿ ಭಾಯ್ ಹುಟ್ಟುಹಬ್ಬವನ್ನು ಆಚರಿಸಿದ್ದರು. ಕಳೆದ ವರ್ಷವೂ ಯಶ್ ಬರ್ತ್‌ಡೇ ಆಚರಿಸಿಕೊಂಡಿರಲಿಲ್ಲ. ಕೊರೊನಾ ಹಾವಳಿಯಿಂದ ಬರ್ತ್‌ಡೇ ಸೆಲೆಬ್ರೆಷನ್‌ಗೆ ಬ್ರೇಕ್ ಹಾಕಿದ್ದರು. ಈ ಬಾರಿ ಕೂಡ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ರಾಕಿಂಗ್ ಸ್ಟಾರ್‌ ನಿರ್ಧರಿಸಿದ್ದಾರೆ. ಆದರೂ ಅಭಿಮಾನಿಗಳು ತಮ್ಮದೇ ಸ್ಟೈಲ್‌ನಲ್ಲಿ ನೆಚ್ಚಿನ ನಟನ ಬರ್ತ್‌ಡೇಗೆ ಆಚರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳೇ ಅಭಿಮಾನಿಗೊಸ್ಕರ ಸರ್ಪ್ರೈಸ್ ನೀಡುವುದಕ್ಕೆ ಮುಂದಾಗಿದ್ದಾರೆ.

ಬರ್ತ್‌ಡೇ ಅಭಿಮಾನಿಗಳಿಂದಲೇ ಡಿಪಿ ರಿಲೀಸ್

ಬರ್ತ್‌ಡೇ ಅಭಿಮಾನಿಗಳಿಂದಲೇ ಡಿಪಿ ರಿಲೀಸ್

'ಕೆಜಿಎಫ್' ಸಿನಿಮಾ ಬಳಿಕ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಯಶ್‌ಗೆ ಈಗ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಭಾರತದ ಉದ್ದಗಲಕ್ಕೂ ಅಭಿಮಾನಿಗಳು ಇದ್ದಾರೆ. ಹೀಗಾಗಿ ಈ ಬಾರಿ ಯಶ್ ಹುಟ್ಟುಹಬ್ಬ ರಾಕಿಂಗ್ ಆಗಿರುತ್ತೆ ಅಂತಲೇ ಭಾವಿಸಲಾಗಿತ್ತು. ಆದರೆ, ಒಮೈಕ್ರಾನ್ ಹಾವಳಿಯಿಂದ ಸ್ವತಃ ಯಶ್ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ, ಅಭಿಮಾನಿಗಳು ಸುಮ್ಮನಿರಬೇಕಲ್ಲ. ಯಶ್ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲೇ ಯಶ್ ಹುಟ್ಟುಹಬ್ಬಕ್ಕೆ ವಿಶೇಷವಾದ ಡಿಪಿಯನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಯಶ್ ಬರ್ತ್‌ಡೇಗೆ ರಾಕಿಂಗ್ ಫೆಸ್ಟಿವಲ್

ಸೂಪರ್‌ಸ್ಟಾರ್‌ಗಳ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ವಿಶೇಷವಾದ ಡಿಪಿ ರಿಲೀಸ್ ಮಾಡುತ್ತಾರೆ. ಈ ಬಾರಿಗ ಕೂಡ ಅಭಿಮಾನಿಗಳು ಅಂತಹದ್ದೇ ಕಾಮನ್ ಡಿಪಿ ಬಿಡುಗಡೆ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಜನವರಿ 07ರಂದು ರಾತ್ರಿ 10.15ಕ್ಕೆ ಬರ್ತ್‌ಡೇ ಡಿಪಿ ಬಿಡುಗಡೆ ಮಾಡಲು ಯಶ್ ಅಭಿಮಾನಿಗಳ ಗುಂಪೊಂದು ನಿರ್ಧರಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಅನೌನ್ಸ್ ಮಾಡಲಾಗಿದೆ. ಈ ಅಭಿಯಾನದಲ್ಲಿ ರಾಕಿಂಗ್ ಸ್ಟಾರ್ ಫ್ಯಾನ್ಸ್ ಹೇಗೆ ಭಾಗವಹಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

ಬರ್ತ್‌ಡೇಗೆ 'KGF 2' ಟೀಸರ್ ಇಲ್ಲ, ಟ್ರೈಲರ್ ಇಲ್ಲ

ಬರ್ತ್‌ಡೇಗೆ 'KGF 2' ಟೀಸರ್ ಇಲ್ಲ, ಟ್ರೈಲರ್ ಇಲ್ಲ

ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಸಿನಿಮಾ ಟ್ರೈಲರ್ ರಿಲೀಸ್ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಕನಿಷ್ಠ ಪಕ್ಷ ಒಂದು ಟೀಸರ್ ಆದರೂ ರಿಲೀಸ್ ಆಗುತ್ತೆ ಎಂದು ಊಹಿಸಲಾಗಿತ್ತು. ಆದರೆ, ಯಶ್ ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಟೀಸರ್ ಕೂಡ ರಿಲೀಸ್ ಆಗಲ್ಲ. ಟ್ರೈಲರ್ ಕೂಡ ರಿಲೀಸ್ ಆಗುವುದಿಲ್ಲ ಎನ್ನುವುದನ್ನು ಯಶ್ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಆದರೂ, ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಅಭಿಮಾನಿಗಳಿಗೆ ಏನಾದರೂ ಒಂದು ಸರ್ಪ್ರೈಸ್ ನೀಡೇ ನೀಡುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಯಶ್ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಯಾಕೆ?

ಯಶ್ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಯಾಕೆ?

ಕೆಜಿಎಫ್ 2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಇದಕ್ಕೆ ಕಾರಣವೇನು? ಒಬ್ಬ ಸೂಪರ್‌ಸ್ಟಾರ್ ಒಂದು ಸಿನಿಮಾ ಒಪ್ಪಿಕೊಳ್ಳಲು ಇಷ್ಟು ಸಮಯ ತೆಗೆದುಕೊಂಡರೆ ಹೇಗೆ ಅನ್ನುವ ಮಾತು ಕೇಳಿಬಂತಿತ್ತು. ಇದಕ್ಕೆ ಯಶ್ ಉತ್ತರ ಕೊಟ್ಟಿದ್ದು, ''ತುಂಬಾ ಹುಷಾರಾಗಿ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಯಾರದ್ದೋ ಒತ್ತಡಕ್ಕೋ, ಇಲ್ಲ ಸಂಖ್ಯೆಗಾಗಿಯೋ ಸಿನಿಮಾ ಒಪ್ಪಿಕೊಳ್ಳುವುದಿಲ್ಲ. 'ಕೆಜಿಎಫ್' ಬಳಿಕ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ದೊಡ್ದದೇನೋ ಪ್ಲ್ಯಾನ್ ನಡೆಯುತ್ತಿದೆ. ಸಮಯ ಬಂದಾಗ ಹೇಳುತ್ತೇನೆ." ಎಂದು ರಾಕಿಂಗ್ ಸ್ಟಾರ್ ಹೇಳಿದ್ದಾರೆ.

More from Filmibeat

English summary
On the occasion of Yash birthday celebration, CDP will be releasing on January 07th. Yash fans announced CDP will be releasing on January 07th 10.15pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X