ಲಾಯರ್ ಜಗದೀಶ್ ಮೇಲೆ ಮತ್ತೆ ಹಲ್ಲೆ; ಪೊಲೀಸ್ ಠಾಣೆಯಿಂದಲೇ ವಿಡಿಯೋ
ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿ ಲಾಯರ್ ಜಗದೀಶ್ ಹಾಗೂ ದರ್ಶನ್ ಅಭಿಮಾನಿಗಳು ಎನ್ನಲಾದ ಕೆಲವರ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಇತ್ತೀಚೆಗಷ್ಟೇ ಲಾಯರ್ ಜಗದೀಶ್ ಮೇಲೆ ಕೆಲವರು ಹಲ್ಲೆ ಮಾಡಿದ್ದರು. ಈ ಸಂಬಂಧ ಲೈವ್‌ಗೆ ಬಂದಿದ್ದ ಲಾಯರ್ ಜಗದೀಶ್ ಆಕ್ರೋಶ ಹೊರ ಹಾಕಿದ್ದರು. ದರ್ಶನ್ ಫ್ಯಾನ್ಸ್ ವಿರುದ್ಧ ತಿರುಗಿಬಿದ್ದಿದ್ದರು. ಅಭಿಮಾನಿಗಳಿಗೆ ಎಚ್ಚರಿಕೆಯನ್ನು ನೀಡಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಲಾಯರ್ ಜಗದೀಶ್ ಮೇಲೆ ಮತ್ತೆ ಹಲ್ಲೆಯಾಗಿದೆ. ಮೂಗಿನಿಂದ ರಕ್ತ ಸೋರುವಂತೆ ಹಲ್ಲೆ ಮಾಡಲಾಗಿದೆ. ಜೊತೆಗೆ ಲಾಯರ್ ಜಗದೀಶ್ ಅವರ ಸ್ಕಾರ್ಪಿಯೋ ವಾಹನವನ್ನು ಜಕಂ ಮಾಡಲಾಗಿದೆ. ಈ ವಿಷಯವನ್ನು ಪೊಲೀಸ್ ಠಾಣೆಯಲ್ಲಿಯೇ ಕೂತು ಲಾಯರ್ ಜಗದೀಶ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆದರೆ, ಈ ಬಾರಿ ಹಲ್ಲೆ ಮಾಡಿದವರು ಯಾರು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಕಿಡಿಗೇಡಿಗಳು ಲಾಯರ್ ಜಗದೀಶ್ ಹಾಗೂ ಅವರ ಪುತ್ರನ ಮೇಲೆ ಹಲ್ಲೆಗೆ ಮಾಡಿದ್ದಾಗಿ ತಿಳಿಸಿದ್ದಾರೆ. ಜಗದೀಶ್ ಮೂಗು ಹಾಗೂ ತುಟಿಗಳಿಂದ ರಕ್ತ ಸುರಿಯುತ್ತಿದ್ದು, ಅದೇ ಸ್ಥಿತಿಯಲ್ಲಿಯೇ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದಾರೆ. ಅದರಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
"ಇದೆಲ್ಲವೂ ಆಗಿದ್ದು ಪೊಲೀಸರ ಮುಂದೆ. ನಮ್ಮ ಗನ್ ಮ್ಯಾನ್ ಕೊನೆಗೆ ವಿಧಿನೇ ಇಲ್ಲದೆ ವೆಪನ್ ತೆಗೆದು ಫೈರ್ ಮಾಡಿದ ಮೇಲೆ ಅವರು ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ನನ್ನನ್ನು ಬಚಾವ್ ಮಾಡುವುದಕ್ಕೆ ನನ್ನ ಸ್ಕಾರ್ಪಿಯೋವನ್ನು ಹಾಳು ಮಾಡಿದ್ದಾರೆ. ಹೊಸ ಸ್ಕಾರ್ಪಿಯೋ ತೆಗೆದುಕೊಂಡರೆ ಪರ್ವಾಗಿಲ್ಲ. ಸತ್ತರ ಪರ್ವಾಗಿಲ್ಲ ಮಣ್ಣು ಮಾಡೋಣ. ನಾವೇನಾದರೂ ಸತ್ತರೆ ಪ್ರಾಣ ಭಿಕ್ಷೆ ಬೇಡುವುದಿಲ್ಲ. ಆದರೆ, ಈ ವ್ಯವಸ್ಥೆ ಬದಲಾಗಬೇಕು. ಈ ವ್ಯವಸ್ಥೆ ಬದಲಾಗಬೇಕು." ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











