"ಕನ್ನಡದ ಒಬ್ಬ ನಟನ ಬರ್ತ್‌ಡೇಗೆ ಸಾವಿರಾರು ಜನ್ರು ಸೇರಿದ್ರು": ರೋಹಿತ್ ಶೆಟ್ಟಿಯ ಹಳೇ ವಿಡಿಯೋ ಮತ್ತೆ ವೈರಲ್!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗಿರೋ ಫ್ಯಾನ್ಸ್ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಅವರ ಅಭಿಮಾನಿಗಳು ಅಖಾಡಕ್ಕೆ ಇಳಿದರೆ, ದೊಡ್ಡ ಮಟ್ಟಕ್ಕೆ ಸಂಚಲನವನ್ನೇ ಸೃಷ್ಟಿಸಿಬಿಡುತ್ತಾರೆ. ಅದರಲ್ಲೂ ಸಿನಿಮಾ ರಿಲೀಸ್ ವೇಳೆ ಫ್ಯಾನ್ಸ್ ಹಬ್ಬವನ್ನೇ ಮಾಡಿಬಿಡುತ್ತಾರೆ.

ದರ್ಶನ್ ನಟನೆಯ 56ನೇ ಸಿನಿಮಾ 'ಕಾಟೇರ' ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಪ್ರಮೋಷನ್‌ಗೂ ಸಿದ್ಧತೆಗಳು ಕೂಡ ಜೋರಾಗಿಯೇ ನಡೆಯುತ್ತಿವೆ. ದರ್ಶನ್ ಅಭಿಮಾನಿಗಳು ಈಗಾಗಲೇ ತಮ್ಮದೇ ಸ್ಟೈಲ್‌ನಲ್ಲಿ ಸಿನಿಮಾ ಪ್ರಚಾರ ಮಾಡಲು ಶುರುವಿಟ್ಟುಕೊಂಡಿದ್ದಾರೆ.

Once Rohit Shetty said about Darshan fans following Avinash repeats the same

ಕರ್ನಾಟಕದ ಮೂಲೆ ಮೂಲೆಯಲ್ಲಿ 'ಕಾಟೇರ' ಜಪ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಬಗ್ಗೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿದ್ದಾರೆನ್ನಲಾಗಿದ್ದ ವಿಡಿಯೋ ಒಂದು ಮತ್ತೆ ವೈರಲ್ ಆಗುತ್ತಿದೆ. ಇವರೊಬ್ಬರೇ ಅಲ್ಲ ಕನ್ನಡದ ಹಿರಿಯ ನಟ ಅವಿನಾಶ್ ಕೂಡ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ. ಅಷ್ಟಕ್ಕೂ ರೋಹಿತ್ ಶೆಟ್ಟಿಯ ಹಳೇ ವಿಡಿಯೋದಲ್ಲಿ ಅಂತಹದ್ದೇನಿದೆ?

ಬಾಲಿವುಡ್‌ನಲ್ಲಿ ಹೈ ವೋಲ್ಟೇಜ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡುವಲ್ಲಿ ರೋಹಿತ್ ಶೆಟ್ಟಿ ಹೆಸರು ಮುನ್ನಲೆಗೆ ಬರುತ್ತೆ. ಅದಕ್ಕೆ ಈಗಾಗಲೇ ನಿರ್ದೇಶಿಸಿರೋ 'ಸಿಂಗಂ' ಸೀರಿಸ್‌ಗಳೇ ಸಾಕ್ಷಿ. ಇಂತಹ ನಿರ್ದೇಶಕ ನಾಲ್ಕೈದು ವರ್ಷಗಳ ಹಿಂದೆ "ಕನ್ನಡದ ಒಬ್ಬ ನಟನ ಹುಟ್ಟುಹಬ್ಬಕ್ಕೆ ಮನೆ ಮುಂದೆ ಸಾವಿರ ಜನರು ಸೇರುತ್ತಾರೆ. ಆ ದಿನ ಅವರು ಪ್ರತಿಯೊಬ್ಬರನ್ನೂ ಭೇಟಿ ಮಾಡುತ್ತಾರೆ" ಎಂದು ಹೇಳಿದ್ದರು.

Once Rohit Shetty said about Darshan fans following Avinash repeats the same

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ತಮ್ಮ ಹಳೇ ವಿಡಿಯೋದಲ್ಲಿ ಏನು ಹೇಳಿದ್ದಾರೆ ನೋಡಿ. "ಕನ್ನಡ ನಟರೊಬ್ಬರ ವಿಡಿಯೋ ನೋಡಿದ್ದೇನೆ. ಅವರ ಬರ್ತ್‌ಡೇ ದಿನ ಸಾವಿರಾರು ಮಂದಿ ಅವರ ಮನೆಯ ಮುಂದೆ ನಿಂತಿರುತ್ತಾರೆ. ರಾತ್ರಿ 12 ಗಂಟೆಯಿಂದ ಮರುದಿನ ರಾತ್ರಿ 12 ಗಂಟೆಯವರೆಗೂ. ಅವರು ಪ್ರತಿಯೊಬ್ಬರನ್ನೂ ಭೇಟಿಯಾಗುತ್ತಾರೆ. ಕಮ್ಮಿ ಅಂದರೂ ಸಾವಿರ ಕೇಕ್‌ಗಳನ್ನು ಕಟ್ ಮಾಡಿರುತ್ತಾರೆ." ಎಂದು ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದರು.

'ಕಾಟೇರ' ರಿಲೀಸ್ ಆಗುತ್ತಿರುವ ಈ ಸಂದರ್ಭದಲ್ಲಿ ಇದು ದರ್ಶನ್‌ ಬಗ್ಗೆನೇ ಹೇಳಿದ ಮಾತೆಂದು ವೈರಲ್ ಆಗುತ್ತಿದೆ. ರೋಹಿತ್ ಶೆಟ್ಟಿಯ ಈ ಮಾತನ್ನು ಕನ್ನಡ ಹಿರಿಯ ನಟ ಅವಿನಾಶ್, ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪುನರಿಚ್ಚರಿಸಿದ್ದಾರೆ. ಹುಟ್ಟಹಬ್ಬದ ದಿನ ಅವರ ಮನೆ ಮುಂದೆ ಫ್ಯಾನ್ಸ್ ಕ್ರೇಜ್ ಹೇಗಿರುತ್ತೆ ಅನ್ನೋದನ್ನು ಹೇಳಿಕೊಂಡಿದ್ದಾರೆ.

"ನಾನು 15 ವರ್ಷಗಳಿಂದ ಇದ್ದೀನಿ. ನಾನು ಬಂದ್ಮೇಲೆ ದರ್ಶನ್ ಅವರು ಆ ಏರಿಯಾಗೆ ಬಂದರು. ಅಂದಿನಿಂದ ನೋಡುತ್ತಿದ್ದೇನೆ. ನನ್ನ ಪ್ರತಿವರ್ಷ ಅನುಭವವಿದು. ಪ್ರತಿವರ್ಷನೂ ನಾನು ಇವತ್ತು ಇರೋದು ಬೇಡ ಹೋಟೆಲ್‌ಗೆ ಹೊರಟು ಹೋಗೋಣ ಅನ್ನೋ ಲೆವೆಲ್‌ಗೆ ಬಂದಿದ್ದೀನಿ ನಾನು. ಕಣ್ಮುಂದೆ ಜನಜಾತ್ರೆ ಹೋಗ್ತಾ ಇರುತ್ತಾರೆ. ಇದನ್ನು ಕೊಂಡುಕೊಳ್ಳುವುದಲ್ಲ. ಪ್ರೀತಿ ಎದ್ದು ಕಾಣುತ್ತೆ. ರಾತ್ರಿ 2 ರಿಂದ 3 ಗಂಟೆಗೆ ಜೈ ಪಾರಾಕ್ ಕೇಳ್ತಾ ಇರುತ್ತೆ ನನಗೆ" ಎಂದು ಹಿರಿಯ ನಟ ಅವಿನಾಶ್ ರಿವೀಲ್ ಮಾಡಿದ್ದಾರೆ.

More from Filmibeat

English summary
Throwback Story: Once Rohit Shetty said about Darshan Fan following in an interview. Now Avinash revealed the same.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X