"ಸುದೀಪ್ ಕಾಂಪಿಟೇಷನ್ ಅಂದ್ರೆ ಏನು?" ಉಪ್ಪಿ ಪ್ರಶ್ನೆಗೆ ಕಿಚ್ಚನ ಉತ್ತರವೇನು? ಮತ್ಯಾಕೆ ಈ ವಿಡಿಯೋ ವೈರಲ್

ಇನ್ನು 10 ದಿನಗಳ ಅಂತರದಲ್ಲಿ ಕನ್ನಡದ ಎರಡು ಬಿಗ್‌ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಉಪೇಂದ್ರ ನಿರ್ದೇಶನದ 'ಯುಐ'. ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್'. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೇಗೆ ಪೈಪೋಟಿ ಕೊಡುತ್ತವೆ ಅನ್ನೋದು ಇಬ್ಬರ ಅಭಿಮಾನಿಗಳ ಮುಂದಿರುವ ಪ್ರಶ್ನೆ. ಯಾಕಂದ್ರೆ 'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳ ನಡುವಿನ ಅಂತರ ಬರೀ 5 ದಿನ.

ಈ ಹಿಂದೆ ಕಾಂಪಿಟೇಷನ್‌ ಬಗ್ಗೆ ಪ್ರಶ್ನೆ ಮಾಡಿಕೊಂಡವರೇ ಈಗ ಬಾಕ್ಸಾಫೀಸ್‌ನಲ್ಲಿ ಪೈಪೋಟಿಗೆ ಬಿದ್ದಿದ್ದಾರೆ. ತಮ್ಮಿಬ್ಬರ ನಡುವೆ ಏನೇ ಕಾಂಪಿಟೇಷನ್ ಇಲ್ಲ ಅಂತ ಹೇಳಿಕೊಂಡಿದ್ದರು. ಕೆಲವು ವಿಚಾರಗಳಲ್ಲಿ ಇಬ್ಬರ ನಡುವೆ ಸ್ಪರ್ಧೆ ಅನ್ನೋದು ಇದ್ದೇ ಇರುತ್ತೆ. ಸದ್ಯ 'ಯುಐ Vs ಮ್ಯಾಕ್ಸ್' ಅನ್ನುವ ಪ್ರಶ್ನೆ ಹುಟ್ಟಿಕೊಂಡ ಬೆನ್ನಲ್ಲೇ ಉಪ್ಪಿ ಹಾಗೂ ಕಿಚ್ಚ ಸುದೀಪ್ ಇಬ್ಬರ ಹಳೇ ವಿಡಿಯೋ ವೈರಲ್ ಆಗುತ್ತಿದೆ.

Once Upendra asked question about compitation to Kichcha Sudeep that video is trending now

ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಎರಡು ಬಾರಿ ಒಂದೇ ಸಿನಿಮಾದಲ್ಲಿ ನಟಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ 'ಕಬ್ಜ' ಒಂದಾದರೆ, ಇನ್ನೊಂದು 2016ರಲ್ಲಿ ತೆರೆಕಂಡಿದ್ದ 'ಮುಕುಂದ ಮುರಾರಿ'. ಈ ಎರಡೂ ಸಿನಿಮಾಗಳಲ್ಲೂ ಇಬ್ಬರನ್ನು ಪ್ರೇಕ್ಷಕರು ಇಷ್ಟ ಪಟ್ಟಿದ್ದಾರೆ. 2016ರಲ್ಲಿ ಮುಕುಂದ ಮುರಾರಿ ಸಿನಿಮಾ ರಿಲೀಸ್ ವೇಳೆ ಉಪ್ಪಿ ಹಾಗೂ ಸುದೀಪ್ ಇಬ್ಬರು ನಡುವೆ 'ಕಾಂಪಿಟೇಷನ್‌' ವಿಚಾರವಾಗಿ ಒಂದು ಚರ್ಚೆ ನಡೆದಿತ್ತು. ಈಗ ಅದನ್ನೆಲ್ಲ ಸೇರಿಸಿ ವಿಡಿಯೋ ಮಾಡಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಕಿಚ್ಚ ಸುದೀಷ್‌ಗೆ ಉಪೇಂದ್ರ ಕಾಂಪಿಟೇಷನ್‌ ಅಂದರೆ ಏನು ಅಂತ ಪ್ರಶ್ನೆ ಮಾಡುವುದರಿಂದ ಆರಂಭ ಆಗುತ್ತೆ. ಅಲ್ಲಿಂದ ಕಿಚ್ಚನ ಪ್ರತ್ಯುತ್ತಮ. ಬಳಿಕ ಮತ್ತೆ ಉಪ್ಪಿ ಮರು ಪ್ರಶ್ನೆ. ಅದಕ್ಕೆ ಮತ್ತೆ ಕಿಚ್ಚನ ಪ್ರತ್ಯುತ್ತರ. ಹೀಗೆ ಮುಂದುವರೆಯುತ್ತೆ. ಇವರಿಬ್ಬರ ಈ 'ಕಾಂಪಿಟೇಷನ್ ಚಾಲೆಂಜ್‌' ಅನ್ನು ಇಬ್ಬರ ಅಭಿಮಾನಿಗಳು ತುಂಬಾನೇ ಇಷ್ಟ ಪಟ್ಟಿದ್ದರು. ಅದೇ ವಿಡಿಯೋ ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವೈರಲ್ ಆಗುತ್ತಿರುವ ವಿಡಿಯೋದ ಉಪ್ಪಿ ಪ್ರಶ್ನೆ ಹಾಗೂ ಅದಕ್ಕೆ ಕಿಚ್ಚ ಉತ್ತರ ಹೀಗಿದೆ.

ಉಪೇಂದ್ರ: ಸುದೀಪ್ ಕಾಂಪಿಟೇಷನ್ ಅಂದರೆ ಏನು? ನಿಮ್ಮ ಜೊತೆ ನೀವು ಕಾಂಪಿಟ್ ಮಾಡಿಕೊಂಡು ಗೆಲ್ಲುವುದಕ್ಕೆ ಇಷ್ಟ ಪಡುತ್ತೀರ? ಬೇರೆಯವರ ಜೊತೆ ಕಾಂಪಿಟ್ ಮಾಡಿ ಗೆಲ್ಲುವುದಕ್ಕೆ ಇಷ್ಟ ಪಡುತ್ತೀರ?

ಕಿಚ್ಚ ಸುದೀಪ್: ನನಗೆ ಕಾಂಪಿಟೇಷನ್ ಅಂದರೆ ನಾನು. ನನಗೆ ನಾನು ಒಳ್ಳೆಯ ಮನುಷ್ಯನಾಗಬೇಕು, ನನಗೆ ನಾನು ಉತ್ತಮ ನಟನಾಗಬೇಕು ಅಂತ ಇದೆ. ಹಾಗಾಗಿ ನನ್ನ ಚಾಲೆಂಜ್ ಯಾವಾಗಲೂ ನನ್ನ ಮೇಲೆ ಇರುತ್ತೆ. ನನ್ನ ಹಿಂದಿನ ದಿನಕ್ಕೆ ನಾನು ಇವತ್ತು ಹಾಕಿಕೊಳ್ಳುವ ಚಾಲೆಂಜ್. ಅದೇ ನನಗೆ ಕಾಂಪಿಟೇಷನ್ ಸರ್. ಬೇರೆಯವರ ಮುಂದೆ ಕಾಂಪಿಟೇಷನ್ ಮಾಡುವುದಲ್ಲ.

ಉಪೇಂದ್ರ: ಸುದೀಪ್ ಒಂತರ ಚೆನ್ನಾಗಿದೆ. ಆದರೆ, ನೀವು ಹೇಳುವ ಪ್ರಕಾರ, ನಮ್ಮ ಜೊತೆ ನಾವೇ ಕಾಂಪಿಟೇಷನ್ ಮಾಡಿಕೊಳ್ಳಬೇಕು ಅಂತ. ಹಾಗಾದರೆ, ನಾವೇ ಒಂದು ಪಿಕ್ಚರ್‌ನ ವಿಡಿಯೋ ಶೂಟ್ ಮಾಡಿಕೊಂಡು. ಅದನ್ನು ನಮ್ಮ ಹೋಮ್ ಥಿಯೇಟರ್‌ನಲ್ಲೇ ಹಾಕೊಂಡು ನೋಡಿ. ಇದೇನೋ ಸರಿಯಿಲ್ಲ. ಇದಕ್ಕಿಂತ ಬೆಟರ್ ಮಾಡಬೇಕು ಅಂತ ಅಂದುಕೊಳ್ಳುವುದಾ?

ಕಿಚ್ಚ ಸುದೀಪ್: ಈಗ ನೋಡಿ. ಇನ್ನೊಬ್ಬರು ಗೆಲ್ಲುವುದರಿಂದ ನಾವು ಸೋಲಲ್ಲ. ಇಲ್ಲ ಅವರು ಸೋಲುವುದರಿಂದ ನಾವು ಗೆಲ್ಲಲ್ಲ. ಗೆಲ್ಲುವುದು ನಮ್ಮ ಶ್ರಮದಿಂದ. ಸೋಲುವುದು ನಮ್ಮ ತಪ್ಪಿನಿಂದ. ಅದೇ ನಾನು ಹೇಳಿರುವ ಕಾಂಪಿಟೇಷನ್ ಅಂದರೆ,

ಉಪೇಂದ್ರ: ತುಂಬಾ ಚೆನ್ನಾಗಿ ಉತ್ತರ ಕೊಟ್ಟಿದ್ದೀರ. ಆದರೂ ಕಲೆಯಿಲ್ಲ ಕಲೆಯಿಲ್ಲ ಕಾಂತ. ಕಲೆಗೆ ಬೆಲೆ ಕಟ್ಟುವ ಗಾಂಧಿನಗರದ ತಲೆ ಇರುವವರೆಗೂ ಶಿಲೆ ಕಾಣುವುದಲ್ಲದೆ, ಕಲೆ ಎಲ್ಲಿ ಕಾಣುವುದು ಕಾಂತ.

ಹೀಗೆ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಡುವಿನ ಪ್ರಶ್ನೆ ಹಾಗೂ ಅದಕ್ಕೆ ತಕ್ಕ ಉತ್ತರ ನೀಡುವ ಚಾಲೆಂಜ್ ನಡೆದಿತ್ತು. ಅದರಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೀರಿಸಿದ್ದರು. ಈಗ 'ಯುಐ' ಹಾಗೂ 'ಮ್ಯಾಕ್ಸ್' ರಿಲೀಸ್ ಸಮಯದಲ್ಲಿ ಅದೇ ವಿಡಿಯೋ ಮತ್ತೆ ವೈರಲ್ ಮಾಡಲಾಗುತ್ತಿದೆ.

More from Filmibeat

English summary
Once Upendra asked question about compitation to Kichcha Sudeep that video is trending now;
Read more about: upendra sudeep video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X