24 ಪಾತ್ರಗಳಲ್ಲಿಅಭಿನಯಿಸಿದ ಯೋಗೇಶ್ ಮಾಸ್ಟರ್: ಟ್ರೈಲರ್ ರಿಲೀಸ್
ಸ್ಯಾಂಡಲ್‌ವುಡ್‌ನಲ್ಲಿ ವಿಶಿಷ್ಟವಾದ ಸಿನಿಮಾ ರಿಲೀಸ್ ಆಗಿದೆ. ಮೊದಲಬಾರಿಗೆ 24 ಪಾತ್ರಗಳಲ್ಲಿ ರಂಗಕರ್ಮಿ ಯೋಗೇಶ್ ಮಾಸ್ಟರ್ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಸಂತೋಷ್ ಕೊಡಂಕೇರಿ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾದ ಹೆಸರೇ 'ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ'. ಇತ್ತೀಚೆಗೆ ಈ ವಿಭಿನ್ನ ಪ್ರಯೋಗದ ಟೀಸರ್ ಬಿಡುಗಡೆಯಾಗಿದೆ.
ಕನ್ನಡದಲ್ಲಿ ವಿಭಿನ್ನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಪ್ರತಿಯೊಂದು ಸಿನಿಮಾವೂ ಒಂದೊಂದು ಕಾರಣಕ್ಕೆ ವಿಭಿನ್ನವಾಗಿದೆ. ಕೆಲವು ದಿನಗಳ ಹಿಂದೆ 'ಮೇಡ್ ಇನ್ ಚೈನಾ' ಕರ್ನಾಟಕದ ಮೊದಲ ವರ್ಚುವಲ್ ಸಿನಿಮಾ ವಿಶಿಷ್ಟವಾಗಿದೆ ಅಂತ ಅನಿಸಿತ್ತು. ಈಗ ಒಬ್ಬನೇ ನಟ 24 ಪಾತ್ರಗಳಲ್ಲಿ ನಟಿಸಿದ ಸಿನಿಮಾ 'ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ' ಬಿಡುಗಡೆಗೆ ಸಿದ್ಧವಾಗಿ ನಿಂತಿದೆ.
24 ಪಾತ್ರದಲ್ಲಿ ಯೋಗೇಶ್ ಮಾಸ್ಟರ್
'ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ' ಸಿನಿಮಾ ಕೂಡ ಲಾಕ್‌ಡೌನ್ ವೇಳೆ ನಿರ್ಮಾಣಗೊಂಡ ಸಿನಿಮಾ. ಈ ಸಿನಿಮಾದೊಂದು ಅಪ್ಪಟ ಪ್ರಯೋಗಾತ್ಮಕ ಸಿನಿಮಾ. ರಂಗಕರ್ಮಿ ಯೋಗೇಶ್ ಮಾಸ್ಟರ್ ಈ ಚಿತ್ರದ 24 ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಲ್ಲಿಯವರೆಗೂ ಯಾರು ಇಂತಹದ್ದೊಂದು ವಿಶಿಷ್ಟ ಪ್ರಯತ್ನದ ಅಭಿನಯಕ್ಕೆ ಕೈ ಹಾಕಿಲ್ಲ. ಈ ಚಿತ್ರದಲ್ಲಿ ಯೋಗೇಶ್ ಮಾಡ ಇವರೊಬ್ಬರೇ ಎಲ್ಲಾ ಪಾತ್ರ ನಿರ್ವಹಣೆ ಮಾಡಿದ್ದಾರೆ. ಈ ಕಾರಣಕ್ಕೆ ಇದೊಂದು ಅಪ್ಪಟ ಪ್ರಯೋಗಾತ್ಮಕ ಚಿತ್ರ ಅನ್ನುವುದರಲ್ಲಿ ಅನುಮಾನವಿಲ್ಲ.
ಈ ಸಿನಿಮಾ ರವೀಂದ್ರನಾಥ್ ಠಾಕೂರ್ ಅವರ ಕಾದಂಬರಿಯನ್ನು ಆಧಾರಿತ ಸಿನಿಮಾ. ಅಜ್ಜ ಅಜ್ಜಿಯಂದಿರು 'ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ' ಎನ್ನುವ ಕಥೆ ಹೇಳುತ್ತಿದ್ದರು. ಈ ಸಿನಿಮಾದಲ್ಲಿಯೂ ಹಾಗೆ ಅಜ್ಜಿ ಹೇಳುವ ಕಥೆಯಿಂದಲೇ ಈ ಸಿನಿಮಾ ಆರಂಭವಾಗುತ್ತದೆ. ಕಥೆ ಕೇಳುವ ಮೊಮ್ಮಗ, ತಾನೇ ಎಲ್ಲಾ ಪಾತ್ರಗಳಲ್ಲಿ ಜೀವಿಸುತ್ತಾ ಹೋಗುತ್ತಾನೆ. ಈ ಎಲ್ಲಾ ಪಾತ್ರಗಳಲ್ಲೂ ಯೋಗೇಶ್ ಮಾಸ್ಟರ್ ಅವರೇ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಾಟಕದಲ್ಲಿ ಅಭಿನಯಿಸಿದ್ದೆ, ಈಗ ಸಿನಿಮಾದಲ್ಲಿ ಯೋಗೇಶ್ ಮಾಸ್ಟರ್ ಅಭಿನಯಿಸಿದ್ದಾರೆ.
ಚಿತ್ರೋತ್ಸವದಲ್ಲಿ ಪ್ರದರ್ಶನ ಆಗದೇ ಇದ್ದಿದ್ದಕ್ಕೆ ಬೇಸರ
'ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ' ಸಿನಿಮಾ ಅನೇಕ ಚಲನಚಿತ್ರೋತ್ಸವಗಳಲ್ಲಿ ಈಗಾಗಲೇ ಪ್ರದರ್ಶನ ಕಂಡಿದೆ. ಆದರೆ ಸ್ಥಳೀಯ ಚಲನಚಿತ್ರೋತ್ಸವ ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣದೇ ಇದ್ದಿದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಆ ಬೇಸರವನ್ನೆಲ್ಲಾ ಪಕ್ಕಕ್ಕೆ ಇಟ್ಟು ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ. ಸದ್ಯದಲ್ಲೇ 'ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ' ಸಿನಿಮಾ ತೆರೆಗೆ ಬರಲಿದೆ ಎಂದು ನಿರ್ದೇಶಕ ಕಮ್ ನಿರ್ಮಾಪಕ ಸಂತೋಷ್ ಕೊಡಂಕೇರಿ ತಿಳಿಸಿದ್ದಾರೆ.

ಸಂತೋಷ್ ಕೊಡಂಕೇರಿ ಈ ಚಿತ್ರ ನಿರ್ಮಾಣ ಮಾಡಿದ್ದು, ನಿರ್ದೇಶಕರು ಮಾಡಿದ್ದರೆ. ಗೀತರಚನೆ, ಸಂಭಾಷಣೆಯನ್ನು ನಟ ಯೋಗೇಶ್ ಮಾಸ್ಟರ್ ಬರೆದಿದ್ದಾರೆ. ಹಿನ್ನೆಲೆ ಸಂಗೀತ ಚಿಂತನ್ ವಿಕಾಸ್ ನೀಡಿದ್ದಾರೆ, ಬಿ.ಆರ್ ಛಾಯಾ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಎಸ್ ಸಂಕಲನವಿದೆ.


Click it and Unblock the Notifications











