ಸಡನ್ ಆಗಿ ಮಲಯಾಳಂ ಸಿನಿಮಾದಿಂದ ದೂರ ಇರಬೇಕು ಅನಿಸ್ತು.. ಅದಕ್ಕೆ ಕನ್ನಡ ಸಿನಿಮಾ ಮಾಡ್ದೆ"; ಜಾಕಿ ಭಾವನಾ

ಮಲಯಾಳಂ ನಟಿ ಭಾವನಾ ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿಯೂ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೀವನದಲ್ಲಿ ಕಹಿ ಘಟನೆ ನಡೆದ ಬಳಿಕ ಅವರು ಮಲಯಾಳಂ ಚಿತ್ರರಂಗದಿಂದ ದೂರವಿದ್ದರು. ಮಲಯಾಳಂ ಚಿತ್ರರಂಗದಿಂದಲೇ ಬಂದಿದ್ದರೂ ಅಲ್ಲಿ ಸಿನಿಮಾ ಮಾಡುವುದೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಹಾಗಿದ್ದರೂ ಅವರಿಗೆ ಸಾಕಷ್ಟು ಆಫರ್‌ಗಳು ಬರುತ್ತಲೇ ಇದ್ದವು.

ಮಲಯಾಳಂ ಚಿತ್ರರಂಗದ ಬಿಗ್ ಪ್ರೊಡಕ್ಷನ್ ಹೌಸ್‌ಗಳು ಸಿನಿಮಾ ಮಾಡುವುದಕ್ಕೆ ಮುಂದೆ ಬಂದಿದ್ದರು. ಆದರೂ, ಭಾವನಾ ಮಲಯಾಳಂ ಸಿನಿಮ ಬೇಡವೇ ಬೇಡ ಅಂತ ನಿರ್ಧರಿಸಿದ್ದರು. ಕೇವಲ ಕನ್ನಡ ಸಿನಿಮಾ ಮಾಡುವುದರಲ್ಲಿ ಖುಷಿಯಾಗಿದ್ದರು. ಅವರು ಕೂಡ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಅದರಲ್ಲೂ ಮದುವೆ ನಂತರ ಸಿನಿಮಾ ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

One point of time actress Bhavana decided stop doing Malayalam movies here is the reason

ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಂದ ಹಿಡಿದು ಇಂದಿನ ಸ್ಟಾರ್‌ಗಳವರೆಗೂ ನಟಿಸಿದ್ದಾರೆ. ಹೀಗಾಗಿ ಮಲಯಾಳಂ ಸಿನಿಮಾಗಳಿಗಿಂತ ಕನ್ನಡದಲ್ಲಿಯೇ ಅವರಿಗೆ ಹೆಚ್ಚು ಸಕ್ಸಸ್ ಸಿಕ್ಕಿದೆ. ಇತ್ತೀಚೆಗೆ ಗಲಾಟ ಪ್ಲಸ್ ಕ್ಲಿಪ್ಸ್‌ ಯೂಟ್ಯೂಬ್ ಚಾನೆಲ್‌ನಲ್ಲಿ ಹಳೆಯ ಸಂದರ್ಶನದ ತುಣುಕನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಮಲಯಾಳಂ ಸಿನಿಮಾ ಯಾಕೆ ಮಾಡಲಿಲ್ಲ. ಕನ್ನಡ ಸಿನಿಮಾಗಳನ್ನೇ ಮಾಡಿದ್ದು ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಇವರನ್ನು ಜಾಕಿ ಭಾವನಾ ಅಂತಲೇ ಫೇಮಸ್. ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ 'ಜಾಕಿ' ಸಿನಿಮಾದಿಂದ ಕನ್ನಡಿಗರ ಫೇವರಿಟ್ ನಟಿಯಾಗಿ ಬಿಟ್ಟರು. ಇಲ್ಲಿಂದ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಆಗೊಂದು ಈಗೊಂದು ಮಲಯಾಳಂ ಸಿನಿಮಾಗಳಲ್ಲಿಲ ಕಾಣಿಸಿಕೊಂಡಿದ್ದು ಬಿಟ್ಟರೆ, ಕನ್ನಡದಲ್ಲಿ ನಟಿಸಿದ್ದೇ ಹೆಚ್ಚು. ಅದ್ಯಾಕೆ ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

"ಇತ್ತೀಚೆಗೆ ನಾನು ಏನೂ ಪ್ಲಾನ್ ಮಾಡುತ್ತಿಲ್ಲ. ಆಡಮ್ ಜಾನ್ (2017) ಬಗ್ಗೆನೂ ನಾನು ಪ್ಲಾನ್ ಮಾಡಿಲ್ಲ. ಅದು ಹೀಗೆ ನಡೆದು ಹೋಯ್ತು. ಸಡನ್ ಆಗಿ ನನಗೆ ಮಲಯಾಳಂ ಸಿನಿಮಾದಿಂದ ದೂರ ಉಳಿಯಬೇಕು ಅಂತ ಅನಿಸಿತ್ತು. ಆ ಸಮಯದಲ್ಲಿ ಹಾಗೆ ಯಾಕೆ ಅನಿಸಿತೇನೋ.. ಆದರೆ, ನನಗೆ ಕಂಫರ್ಟೆಬಲ್ ಆಗಿತ್ತು. ಅಡಮ್ ಜಾನ್ ಮಾಡುವಾಗ ನಾನು ಮದುವೆ ಆಗಿದ್ದೆ. ಬೆಂಗಳೂರಿಗೆ ಫ್ಯಾಮಿಲಿ ಶಿಫ್ಟ್ ಮಾಡಿದ್ದೆ. ಈ ಸಮಯದಲ್ಲಿ ನನಗೆ ಏನು ಅನಿಸುತ್ತಿತ್ತು ಅಂದರೆ, ನಾನು ಅಲ್ಲಿ ಇಲ್ಲ. ನನ್ನ ಸುತ್ತಾ ಏನೂ ನಡೆಯುತ್ತಿಲ್ಲ ಅನಿಸಿತ್ತು." ಎಂದು ಜಾಕಿ ಭಾವನಾ ಹೇಳಿಕೊಂಡಿದ್ದರು.

One point of time actress Bhavana decided stop doing Malayalam movies here is the reason

ಭಾವನಾ ಮಲಯಾಳಂ ಚಿತ್ರರಂಗವೇ ಬೇಡ ಅಂತ ನಿರ್ಧರಿಸಿದಾಗ ಅಲ್ಲಿ ಫಿಲ್ಮ್ ಮೇಕರ್ಸ್ ಕಾಲ್ ಮಾಡುತ್ತಲೇ ಇದ್ದರು. ಆಫರ್‌ಗಳ ಮೇಲೆ ಆಫರ್ ಬರುತ್ತಲೇ ಇತ್ತು. ಆದರೂ ಭಾವನಾ ಒಪ್ಪಿಕೊಂಡಿಲ್ಲ. "ಮಲಯಾಳಂ ಚಿತ್ರರಂಗದಿಂದ ನಿರಂತರವಾಗಿ ಕಾಲ್ ಮಾಡುತ್ತಲೇ ಇದ್ದರೆ. ಸಿನಿಮಾ ಮಾಡು. ಇಲ್ಲಾ ಅಂದ್ರೆ ಸ್ಕ್ರಿಪ್ಟ್ ಕೇಳು ಅಂತಿದ್ರು. ಪೃಥ್ವಿರಾಜ್, ಜಯಸೂರ್ಯ, ಮಮ್ಮುಕಾ ಸಿನಿಮಾ ಕೂಡ ಬಂದಿತ್ತು. ನಾನು ಮಾಡುವುದಿಲ್ಲ ಎಂದು ಹೇಳಿದೆ. ನಾನು ಯಾಕೆ ಸಿನಿಮಾ ಮಾಡೋದಿಲ್ಲ ಅಂದೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಆ ಸಮಯದಲ್ಲಿ ನನಗೆ ಓಕೆ ಅನಿಸಿತ್ತು. ಬೇಡ ಮಲಯಾಳಂ ಸಿನಿಮಾ ಮಾಡೋದು ಬೇಡ ಅಂತ ಅನಿಸಿತ್ತು. ನಾನು ಇಲ್ಲಿ ಆರಾಮಾಗಿದ್ದೀನಿ ಅಂತ ಅನಿಸಿತ್ತು."

ಹಾಗೇ "ನನಗೆ ಮಲಯಾಳಂ ಸಿನಿಮಾ ಮಾಡುವ ಯಾವುದೇ ಪ್ಲಾನ್ ಇರಲಿಲ್ಲ. ಕನ್ನಡ ಸಿನಿಮಾ ಮಾಡುತ್ತಿದ್ದೆ. ಮನೆಗೆ ಬರುತ್ತಿದ್ದೆ. ಟಿವಿ ನೋಡುತ್ತಿದ್ದೆ. ನಾನು ಕಂಫರ್ಟ್ ಜೋನ್‌ನಲ್ಲಿ ಇರುತ್ತಿದ್ದೆ." ಎಂದು ಅಂದು ತೆಗೆದುಕೊಂಡ ನಿರ್ಧಾರದ ಬಗ್ಗೆ ರಿವೀಲ್ ಮಾಡಿದ್ದರು.

More from Filmibeat

English summary
One point of time actress Bhavana decided stop doing Malayalam movies here is the reason.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X