'ಕೆಜಿಎಫ್ 2' ಟೀಸರ್ ಬಿಡುಗಡೆಯಾಗಿ ಒಂದು ವರ್ಷ: ಯಶ್ ಮುಂದಿರುವ ಸವಾಲುಗಳೇನು?
'ಕೆಜಿಎಫ್ ಚಾಪ್ಟರ್ 1' ಸೃಷ್ಟಸಿದ ಹವಾ ಹೇಗಿತ್ತು, ಅಂದರೆ, ಒಂದೇ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿಬಿಟ್ಟರು. ಇಡೀ ವಿಶ್ವವೇ 'ಕೆಜಿಎಫ್ ಚಾಪ್ಟರ್ 2' ರಿಲೀಸ್‌ಗೆ ಕಾದು ಕೂರುವಂತಾಗಿತ್ತು. ಒಂದು ವೇಳೆ 'ಕೆಜಿಎಫ್ 1' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯದೇ ಹೋಗಿದ್ದರೆ, ಬಹುಶ: 'ಕೆಜಿಎಫ್ ಚಾಪ್ಟರ್ 2' ಸೆಟ್ಟೇರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಇನ್ನು ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿದ್ದ ಟೀಸರ್ ಕೂಡ ದೊಡ್ಡ ಮಟ್ಟದಲ್ಲಿಯೇ ಸೆನ್ಸೇಷನ್ ಹುಟ್ಟುಹಾಕಿತ್ತು.
Recommended Video
'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಬಿಡುಗಡೆಯಾದ ಭಾಷೆಗಳಲೆಲ್ಲಾ ಯಶ್‌ಗೆ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ದಾಖಲೆಗಳ ಮೇಲೆ ದಾಖಲೆ ಬರೆದ ಈ ಟೀಸರ್ ಬಿಡುಗಡೆಯಾಗಿ ಒಂದು ವರ್ಷವೇ ಕಳೆದಿದೆ. ಇನ್ನೂ ಈ ಟೀಸರ್ ಹೊಸ ಹೊಸ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಲೇ ಇದೆ. ಕೆಜಿಎಫ್ ಸಿನಿಮಾಗಿಂತಲೂ ರಾಕಿಂಗ್ ಸ್ಟಾರ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಲೆವೆಲ್‌ಗೆ ಕರೆದುಕೊಂಡು ಹೋಗಿದ್ದು, ಇದೇ ಟೀಸರ್. ಹಾಗಿದ್ದರೆ, ಯಾವ 'ಕೆಜಿಎಫ್ 2' ಟೀಸರ್‌ಗೆ ಎಷ್ಟು ವೀಕ್ಷಣೆ ಪಡೆದಿದೆ. ಎಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಏನೇನು ದಾಖಲೆಗಳನ್ನು ಬರೆದಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಕೆಜಿಎಫ್ ಚಾಪ್ಟರ್ 2 ಟೀಸರ್‌ಗೆ ಒಂದು ವರ್ಷ
'ಕೆಜಿಎಫ್ ಚಾಪರ್ 2' ಅಭಿಮಾನಿಗಳಿಗೊಂದು ಸವಿನೆನಪು. ಯಾಕಂದರೆ, ಈ ಟೀಸರ್ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆಂದು ರಿಲೀಸ್ ಆಗಿತ್ತು. ಜನವರಿ 08, 2021ಕ್ಕೆ ರಿಲೀಸ್ ಆಗಬೇಕಿದ್ದು, ಒಂದು ದಿನ ಮುಂಚಿತವಾಗಿಯೇ ಲೀಕ್ ಆಗಿತ್ತು. ಇಲ್ಲಿಂದ 'ಕೆಜಿಎಫ್ 2' ಟೀಸರ್ ಅಬ್ಬರ ನಿಂತೇ ಇಲ್ಲ. ಟೀಸರ್ ಬಿಡುಗಡೆಯಾಗಿ ಒಂದು ವರ್ಷ ಆಗಿದ್ದರೂ, ಇನ್ನೂ ಸಿನಿಪ್ರಿಯರ ಮೆಚ್ಚಿನ ಟೀಸರ್ ಆಗಿ ಹೊರ ಹೊಮ್ಮಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಮುಂದೆ ಸಾಗುತ್ತಲೇ ಇದೆ. ಪ್ರತಿ ದಿನ 'ಕೆಜಿಎಫ್ 2' ಟೀಸರ್‌ಗೆ ವೀವ್ಸ್ ಹಾಗೂ ಲೈಕ್ಸ್ ಹೆಚ್ಚಾಗುತ್ತಲೇ ಇದೆ.
ಅತೀ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ಟೀಸರ್
'ಕೆಜಿಎಫ್ ಚಾಪ್ಟರ್ 2' ಟೀಸರ್ ರಿಲೀಸ್ ಆದ ಕ್ಷಣದಿಂದ ದಾಖಲೆಗಳನ್ನು ಸೃಷ್ಟಿಸುತ್ತಾ ಮುಂದೆ ಸಾಗುತ್ತಿದೆ. ಈ ಟೀಸರ್ ವಿಶ್ವದಲ್ಲಿಯೇ ಅತೀ ಹೆಚ್ಚು ವೀಕ್ಷಣೆ ಹಾಗೂ ಮೆಚ್ಚುಗೆ ಪಡೆದ ಟೀಸರ್ ಆಗಿದೆ. ಇದೂವರೆಗೂ 'ಕೆಜಿಎಫ್ 2' ಟೀಸರ್‌ಗೆ ಸುಮಾರು 234 ಮಿಲಿಯನ್ ವೀವ್ಸ್ ಸಿಕ್ಕಿದೆ. ಹಾಗೇ 9.2 ಮಿಲಿಯನ್‌ಗೂ ಅಧಿಕ ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಒಂದು ಲೆಕ್ಕದ ಪ್ರಕಾರ, ಇಡೀ ವಿಶ್ವದಲ್ಲಿ ಯಾವುದೇ ಸಿನಿಮಾದ ಟೀಸರ್‌ಗೆ ಇಷ್ಟೊಂದು ವೀವ್ಸ್ ಹಾಗೂ ಲೈಕ್ಸ್ ಸಿಕ್ಕಿದ ಉದಾಹರಣೆಗಳು ಇಲ್ಲ. ಹೀಗಾಗಿ ಆರು ತಿಂಗಳ ಹಿಂದಿನಿಂದಲೇ ಅಭಿಮಾನಿಗಳು ವಿಶ್ವದಲ್ಲಿ ಅತೀ ಹೆಚ್ಚು ವೀವ್ಸ್ ಎಂದು ಸಂಭ್ರಮಿಸುತ್ತಿದ್ದಾರೆ.

'ಕೆಜಿಎಫ್ ಚಾಪ್ಟರ್ 2' ಟೀಸರ್ ದಾಖಲೆಗಳೇನು?
'ಕೆಜಿಎಫ್ 2' ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಈ ಟೀಸರ್ ಹಂತ ಹಂತವಾಗಿ ಹೇಗೆ 250 ಕೋಟಿ ಸಮೀಪಿಸುತ್ತಿದೆ ಎಂಬುದನ್ನು ನೋಡುವುದಾದರೇ, ಕೇವಲ ಒಂದು ಗಂಟೆಯಲ್ಲೇ ಸುಮಾರು 6 ಮಿಲಿಯನ್ ವೀವ್ಸ್ ಹಾಗೂ 8 ಲಕ್ಷ ಲೈಕ್ಸ್ ದಾಖಲಿಸಿತ್ತು. 24 ಗಂಟೆಗಳಲ್ಲಿ 78 ಮಿಲಿಯನ್ ವೀಕ್ಷಣೆ ಸಿಕ್ಕಿತ್ತು. 14 ಮಿಲಿಯನ್ ಲೈಕ್ಸ್ ಕೇವಲ 76 ನಿಮಿಷಗಳಲ್ಲಿ ಸಿಕ್ಕಿತ್ತು. ಕೇವಲ 13 ಗಂಟೆಗಳಲ್ಲಿ 2.6 ಮಿಲಿಯನ್ ಲೈಕ್ಸ್ ಪಡೆದುಕೊಂಡಿತ್ತು. ಅದೇ ಜೂನ್ ವೇಳೆಗೆ 'ಕೆಜಿಎಫ್ ಚಾಪ್ಟರ್ 2' 200 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಈಗ ಒಂದು ವರ್ಷದ ಹೊಸ್ತಿಲಲ್ಲಿ 234 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ದಿಗ್ಗಜರೊಂದಿಗೆ 'ಕೆಜಿಎಫ್ 2' ಸೆಣೆಸಾಟ
ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಈ ವೇಳೆ ಬಾಲಿವುಡ್‌ನಲ್ಲಿ ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಟಕ್ಕರ್ ಕೊಡಲು ಸಜ್ಜಾಗುತ್ತಿದೆ. ಅದೇ ಇನ್ನೊಂದು ಕಡೆ ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 'ಬೀಸ್ಟ್' ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಟಾಲಿವುಡ್‌ನಲ್ಲಿ ಮಹೇಶ್ ಬಾಬು ನಟನೆ 'ಸರ್ಕಾರು ವಾರಿ ಪಾಠ' ಸಿನಿಮಾ ರಿಲೀಸ್ ಆಗುತ್ತಿದೆ ಅನ್ನುವ ಮಾತು ಹೇಳಿಬರುತ್ತಿದೆ. ಹೀಗಾಗಿ ಬಿಡುಗಡೆಯಾಗುತ್ತಿರುವ ವೇಳೆಯೂ 'ಕೆಜಿಎಫ್ 2' ದಾಖಲೆ ಬರೆಯುತ್ತೆ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ.


Click it and Unblock the Notifications











