For Quick Alerts
  ALLOW NOTIFICATIONS  
  For Daily Alerts

  ಜೂನ್ ತಿಂಗಳ ಅತೀ ಜನಪ್ರಿಯ ನಟ ದಳಪತಿ ವಿಜಯ್: ಯಶ್‌ಗೆ ಎಷ್ಟನೇ ಸ್ಥಾನ?

  |

  2022ರ ಫಸ್ಟ್ ಹಾಫ್ ಮುಗಿದಿದೆ. ಸೆಕೆಂಡ್ ಹಾಫ್ ಈಗ ಶುರುವಾಗಿದೆ. ಆರನೇ ತಿಂಗಳಲ್ಲೂ ಸಿನಿಮಾ ಆಕ್ಟಿವಿಟಿಸ್ ಜೋರಾಗಿದೆ. ಭಾರತದ ಎಲ್ಲಾ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಫುಲ್ ಆಕ್ಟಿವ್ ಆಗಿದ್ದಾರೆ. ಒಬ್ಬೊಬ್ಬರೇ ಸೂಪರ್‌ಸ್ಟಾರ್‌ಗಳು ತಮ್ಮ ತಮ್ಮ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಈ ಬೆನ್ನಲೇ ಒರ್ಮಾಕ್ಸ್ ಸಂಸ್ಥೆ ಜೂನ್ ತಿಂಗಳಲ್ಲಿ ಅತೀ ಜನಪ್ರಿಯರಾದ ಟಾಪ್ 10 ನಟರ ಪಟ್ಟಿಯನ್ನು ರಿಲೀಸ್ ಮಾಡಿದೆ.

  ಜೂನ್ ತಿಂಗಳಲ್ಲಿ ಸೂಪರ್ ಸೌಂಡ್ ಮಾಡಿದ ಭಾರತದ ಎಲ್ಲಾ ಭಾಷೆಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಸಿನಿಮಾದ ಟೀಸರ್, ಟ್ರೈಲರ್ ಸೇರಿದಂತೆ ಜೂನ್ ತಿಂಗಳಲ್ಲಿ ವಿಶ್ವದಾದ್ಯಂತ ಸದ್ದು ಮಾಡಿದ ಟಾಪ್ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

  'ಕೆಜಿಎಫ್ 3' ಮೇಲೆ ಕಣ್ಣಿಟ್ಟ ಬಾಲಿವುಡ್‌ ಸ್ಟಾರ್‌ ನಟಿಯರು: ಯಾರಿಗೆ ಒಲಿಯುತ್ತೆ ಅದೃಷ್ಟ?'ಕೆಜಿಎಫ್ 3' ಮೇಲೆ ಕಣ್ಣಿಟ್ಟ ಬಾಲಿವುಡ್‌ ಸ್ಟಾರ್‌ ನಟಿಯರು: ಯಾರಿಗೆ ಒಲಿಯುತ್ತೆ ಅದೃಷ್ಟ?

  ಒರ್ಮ್ಯಾಕ್ಸ್ ಮೀಡಿಯಾ ಅನ್ನೋ ಸಂಸ್ಥೆ ಪ್ರತಿ ತಿಂಗಳು ಸಿನಿಮಾ ಕ್ಷೇತ್ರದಲ್ಲಿ ಸದ್ದು ಮಾಡಿದ ಸೂಪರ್‌ಸ್ಟಾರ್‌ಗಳ ಬಗ್ಗೆ ಸರ್ವೆ ನಡೆಸುತ್ತೆ. ಈ ಸರ್ವೆಯಲ್ಲಿ ಜೂನ್ ತಿಂಗಳಲ್ಲಿ ಆಲ್‌ ಇಂಡಿಯಾ ಲೆವೆಲ್‌ನಲ್ಲಿ ಜನಪ್ರಿಯರಾದ ಟಾಪ್‌ 10 ಸೂಪರ್‌ಸ್ಟಾರ್‌ಗಳ ಹೆಸರುಗಳನ್ನು ಬಹಿರಂಗ ಪಡಿಸಿದೆ. ವಿಶೇಷ ಅಂದರೆ, ಕಳೆದ ಎರಡು ತಿಂಗಳಿನಿಂದ ಯಶ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಾರಿ ಟಾಪ್ 10 ಪಟ್ಟಿಯಲ್ಲಿರುವ ಸೂಪರ್‌ಸ್ಟಾರ್ ನಟರು ಯಾರು? ಯಶ್ ಯಾವ ಸ್ಥಾನದಲ್ಲಿದ್ದಾರೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ದಳಪತಿ ವಿಜಯ್ ನಂ 1

  ದಳಪತಿ ವಿಜಯ್ ನಂ 1

  ಒರ್ಮಾಕ್ಸ್ ಮೀಡಿಯಾ ಜೂನ್ ತಿಂಗಳಲ್ಲಿ ಟಾಪ್‌ನಲ್ಲಿರುವ ಸೂಪರ್‌ಸ್ಟಾರ್ ಪಟ್ಟಿಯನ್ನು ರಿಲೀಸ್ ಮಾಡಿದೆ. ಇದರಲ್ಲಿ ಮತ್ತೆ ತಮಿಳು ನಟ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದ್ದರೂ, ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಕಾರಣ ದಳಪತಿ ವಿಜಯ್ ಅಭಿನಯದ 66ನೇ ಸಿನಿಮಾ. ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಕೈ ಜೋಡಿಸಿದ್ದಾರೆ. ಈಗಾಗಲೇ 'ವರಿಸು' ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿದೆ. ಈ ಸಿನಿಮಾ ಪೋಸ್ಟರ್ ಈಗಾಗಲೇ ಸಂಚಲನ ಸೃಷ್ಟಿಸಿದೆ.

  ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಎಷ್ಟು?

  ಡಾರ್ಲಿಂಗ್ ಪ್ರಭಾಸ್ ನಂ 2

  ಡಾರ್ಲಿಂಗ್ ಪ್ರಭಾಸ್ ನಂ 2


  ಡಾರ್ಲಿಂಗ್ ಪ್ರಭಾಸ್ ಎರಡನೇ ಸ್ಥಾನದಲ್ಲಿದ್ದಾರೆ. 'ಸಾಹೋ' ಹಾಗೂ 'ರಾಧೆ ಶ್ಯಾಮ್' ಸಿನಿಮಾದ ಸೋಲಿನ ಬಳಿಕವೂ ಸಿನಿಮಾ ಪ್ರಭಾಸ್ ಕ್ರೇಜ್ ಕಮ್ಮಿಯಾಗಿಲ್ಲ. ಇದಕ್ಕೆ ಕಾರಣ ಡಾರ್ಲಿಂಗ್ ಪ್ರಭಾಸ್ ಮುಂದಿನ ಎರಡು ಸಿನಿಮಾ. ಪ್ರಶಾಂತ್ ನೀಲ್ ಅಭಿನಯದ 'ಸಲಾರ್' ಹಾಗೂ 'ಆದಿಪುರುಷ್' ಸಿನಿಮಾ ಚರ್ಚೆಯಲ್ಲಿತ್ತು. ಈ ಕಾರಣಕ್ಕೆ ಪ್ರಭಾಸ್ ಎರಡನೇ ಸ್ಥಾನದಲ್ಲಿರಬಹುದು ಎಂದು ಅಂದಾಜಿಸಲಾಗಿದೆ.

  ರಾಕಿ ಭಾಯ್‌ಗೆ ಯಾವ ಸ್ಥಾನ?

  ರಾಕಿ ಭಾಯ್‌ಗೆ ಯಾವ ಸ್ಥಾನ?

  'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಿ ಹೆಚ್ಚು ಕಡಿಮೆ ಮೂರು ತಿಂಗಳಾಗುತ್ತಿದೆ. ಹೀಗಿದ್ದರೂ, ಯಶ್ ಹಾಗೂ 'ಕೆಜಿಎಫ್ 2' ಮೇಲಿನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಅಲ್ಲದೆ ಯಶ್ ಮುಂದಿನ ಸಿನಿಮಾದ ಬಗ್ಗೆನೂ ಚರ್ಚೆಯಾಗುತ್ತಿರುವುದರಿಂದ ಯಶ್ ಮೂರನೇ ಸ್ಥಾನದಲ್ಲಿದ್ದಾರೆ. ಮೇ ತಿಂಗಳಲ್ಲಿ ಯಶ್ ಏಳನೇ ಸ್ಥಾನದಲ್ಲಿದ್ದರು. ವಿಶೇಷ ಅಂದರೆ, ಟಾಪ್ 3 ಯಲ್ಲಿ ದಕ್ಷಿಣ ಭಾರತದ ನಟರೇ ಇದ್ದು, ಮೂರನೇ ಸ್ಥಾನದಲ್ಲಿ ಯಶ್ ಇದ್ದಾರೆ.

  ಟಾಪ್ 10 ಪಟ್ಟಿ ಹೀಗಿದೆ

  ಟಾಪ್ 10 ಪಟ್ಟಿ ಹೀಗಿದೆ

  ಜೂನ್ ತಿಂಗಳಲ್ಲೂ ಅಕ್ಷಯ್ ಕುಮಾರ್ ಬಿಟ್ಟರೆ ಬೇರೆ ಯಾವುದೇ ನಟ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಟಾಪ್ 10 ಪಟ್ಟಿಯಲ್ಲಿರುವ ನಟರೆಲ್ಲರೂ ದಕ್ಷಿಣ ಭಾರತದವರೇ. ಈ ಪಟ್ಟಿಯಲ್ಲಿ ಬಾಲಿವುಡ್‌ ಸೂಪರ್‌ಸ್ಟಾರ್‌ಗಳು ಇಲ್ಲವೇ ಇಲ್ಲ.

  ದಳಪತಿ ವಿಜಯ್ ನಂ 1
  ಪ್ರಭಾಸ್ ನಂ 2
  ಯಶ್ ನಂ 3
  ಅಜಿತ್ ಕುಮಾರ್ ನಂ 4
  ಅಕ್ಷಯ್ ಕುಮಾರ್ ನಂ 5
  ಅಲ್ಲು ಅರ್ಜುನ್ ನಂ 6
  ಜೂ.ಎನ್‌ಟಿಆರ್ ನಂ 7
  ಮಹೇಶ್ ಬಾಬು ನಂ 8
  ರಾಮ್ ಚರಣ್ ನಂ 9
  ಸೂರ್ಯ ನಂ 10

  English summary
  Ormax Most Popular Male Film Stars In India June 2022: Yash Is In The List, Know More.
  Thursday, June 23, 2022, 17:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X