ಕನ್ನಡದ ನಂ 1 ನಟ ಯಾರು? ಟಾಪ್ 5 ಪಟ್ಟಿಯಲ್ಲಿರೋ ಸ್ಯಾಂಡಲ್‌ವುಡ್ ಹೀರೊಗಳು ಇವ್ರೇ!
ಕಳೆದ ವರ್ಷ (2022) ಜುಲೈ ತಿಂಗಳು ಕನ್ನಡ ಚಿತ್ರರಂಗದ ಪಾಲಿಗೆ ಅದೃಷ್ಟದ ವರ್ಷ ಅಂತಲೇ ಸಾಬೀತಾಗಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡದ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಕನ್ನಡ ಚಿತ್ರರಂಗಕ್ಕೆ, ಸ್ಟಾರ್ ನಟರಿಗೆ ಹಿಂದೆಂದೂ ಸಿಗದಂತಹ ಯಶಸ್ಸು ಸಿಕ್ಕಿತ್ತು. ಅದೇ ಒಂದು ವರ್ಷದ (2023) ಬಳಿಕ ಎಲ್ಲವೂ ಬದಲಾಗಿದೆ.
ಕಳೆದ ಆರೇಳು ತಿಂಗಳಿಂದ ಕನ್ನಡದ ಒಂದೇ ಒಂದು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿಲ್ಲ. ಒಂದೇ ಒಂದು ಸಿನಿಮಾ ಮೆಗಾ ಬ್ಲಾಕ್‌ಬಸ್ಟರ್ ಹಿಟ್ ಆಗಿಲ್ಲ. ಸೂಪರ್‌ಸ್ಟಾರ್ಗಳು ಚಮತ್ಕಾರ ಮಾಡಿಲ್ಲ. ಆದರೂ, ಕನ್ನಡ ಚಿತ್ರರಂಗದ ಬಗ್ಗೆ ಹಾಗೂ ಸ್ಟಾರ್‌ಗಳ ಬಗ್ಗೆ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.

2023ರ ಫಸ್ಟ್ ಹಾಫ್ ಮುಗಿದಿದ್ದು, ಸೆಕೆಂಡ್ ಹಾಫ್ ಶುರುವಾಗಿದೆ. ಜೂನ್ ತಿಂಗಳವರೆಗೂ ಕನ್ನಡ ಚಿತ್ರರಂಗ ಸದ್ದು ಮಾಡಿರಲಿಲ್ಲ. ಜುಲೈ ತಿಂಗಳ ಕೊನೆಯಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಿಂದ ಯಶಸ್ಸಿನ ಪರ್ವ ಆರಂಭ ಆಗಿದೆ. ಇದೇ ವೇಳೆ ಜುಲೈ ತಿಂಗಳಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟರು ಯಾರು? ಅನ್ನೋ ಪಟ್ಟಿಯನ್ನು ಓರ್ಮ್ಯಾಕ್ಸ್ ರಿಲೀಸ್ ಮಾಡಿದೆ. ಆ ಪಟ್ಟಿ ಇಲ್ಲಿದೆ.
ಜುಲೈ ತಿಂಗಳ ಜನಪ್ರಿಯರ ನಟರ ಪಟ್ಟಿ ರಿಲೀಸ್
ಒರ್ಮ್ಯಾಕ್ಸ್ ಮೀಡಿಯಾ ಭಾರತದ ಪ್ರತಿಯೊಂದು ಚಿತ್ರರಂಗದ ಬಗ್ಗೆ ಆಗು ಹೋಗುಗಳ ಬಗ್ಗೆ ಅಂಕಿ ಅಂಶಗಳನ್ನು ಇಡುತ್ತೆ. ಇದರ ಜೊತೆ ಪ್ರತಿ ತಿಂಗಳು ಪ್ರತಿಯೊಂದು ಚಿತ್ರರಂಗದಿಂದಲ್ಲೂ ಜನಪ್ರಿಯತೆಯಲ್ಲಿದ್ದ ಸ್ಟಾರ್‌ಗಳ ಪಟ್ಟಿಯನ್ನು ರಿಲೀಸ್ ಮಾಡುತ್ತೆ. ಅದರಂತೆ 2023ಯ ಜುಲೈ ತಿಂಗಳಲ್ಲಿ ಚಾಲ್ತಿಯಲ್ಲಿದ್ದ ಟಾಪ್ 5 ಸ್ಟಾರ್‌ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಅಂದರಂತೆ ಮೊದಲ 5 ಸ್ಥಾನಗಳಲ್ಲಿ ಸುದೀಪ್,ದರ್ಶನ್, ಯಶ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹೆಸರಿದೆ. ಇವರಲ್ಲಿ ನಂ 1 ನಟ ಯಾರು? ಟಾಪ್ 5 ಸ್ಥಾನದಲ್ಲಿ ಇರೋದು ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

18 ತಿಂಗಳು ಸೈಲೆಂಟ್ ಆಗಿದ್ರೂ ನಂ 1
ಒರ್ಮ್ಯಾಕ್ಸ್ ನಡೆಸಿದ ಸರ್ವೆಯಲ್ಲಿ 2023, ಜುಲೈ ತಿಂಗಳಲ್ಲಿ ಕನ್ನಡದ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ನಂ 1 ಸ್ಥಾನದಲ್ಲಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿ 18 ತಿಂಗಳು ಕಳೆದಿವೆ. ಆದರೂ, ಯಶ್ 19ನೇ ಸಿನಿಮಾ ರಿಲೀಸ್ ಆಗಿಲ್ಲ. ಆದರೂ, ಯಶ್ ಬಗ್ಗೆನೇ ಚರ್ಚೆಯಾಗುತ್ತಿದೆ. ಈ ರಹಸ್ಯ ಒರ್ಮ್ಯಾಕ್ಸ್ ಸರ್ವೆಯಲ್ಲಿ ಹೊರಬಿದ್ದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಗಂಭೀರವಾಗಿ ಚರ್ಚೆ ಮಾಡುತ್ತಿದ್ದಾರೆ.
ನಂ 2 ಸ್ಥಾನದಲ್ಲಿ ಇರೊದ್ಯಾರು?
ಒರ್ಮ್ಯಾಕ್ಸ್ ಸರ್ವೆಯಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ ನಟ ಕಿಚ್ಚ ಸುದೀಪ್. ಜುಲೈ ತಿಂಗಳಲ್ಲಿ ಸುದೀಪ್ ತನ್ನ ಹೊಸ ಸಿನಿಮಾ ಹಾಗೂ ವಿವಾದದಿಂದ ಸುದ್ದಿಯಲ್ಲಿದ್ದರು. ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ಕಿತ್ತಾಟ ತಾರಕಕ್ಕೇರಿತ್ತು. ಹಾಗೇ 'ಕಿಚ್ಚ 46' ಕೂಡ ಚರ್ಚೆಯಾಗಿತ್ತು. ಇದೆಲ್ಲವನ್ನೂ ಸೇರಿಸಿದ ಬಳಿಕ ಸುದೀಪ್‌ಗೆ ಎರಡನೇ ಸ್ಥಾನ ಸಿಕ್ಕಿದೆ.
ಟಾಪ್ 5 ಸ್ಥಾನದಲ್ಲಿ ಯಾರಿದ್ದಾರೆ?
2023, ಜುಲೈ ತಿಂಗಳ ಟಾಪ್ 5 ಸ್ಥಾನದಲ್ಲಿರುವ ಸ್ಟಾರ್‌ಗಳ ಪಟ್ಟಿ ಹೀಗಿದೆ. ರಾಕಿಂಗ್ ಸ್ಟಾರ್ ಯಶ್ ನಂ. 1, ಕಿಚ್ಚ ಸುದೀಪ್ ಎರಡನೇ ಸ್ಥಾನದಲ್ಲಿದ್ದಾರೆ. ದರ್ಶನ್, ರಕ್ಷಿತ್ ಶೆಟ್ಟಿ, ರಕ್ಷಿತ್ ಶೆಟ್ಟಿ ನಂತರ ಸ್ಥಾನದಲ್ಲಿದ್ದಾರೆ. ಆ ಲಿಸ್ಟ್ ಇಲ್ಲಿದೆ.
ಒರ್ಮಾಕ್ಸ್ 5 ಕನ್ನಡದ ನಟರು (ಜುಲೈ)
ನಂ 1 ಯಶ್
ನಂ 2 ಕಿಚ್ಚ ಸುದೀಪ್
ನಂ 3 ದರ್ಶನ್
ನಂ 4 ರಿಷಬ್ ಶೆಟ್ಟಿ
ನಂ 5 ರಕ್ಷಿತ್ ಶೆಟ್ಟಿ


Click it and Unblock the Notifications











