ಜುಲೈ ತಿಂಗಳಲ್ಲಿ ಅತೀ ಜನಪ್ರಿಯತೆ ಗಳಿಸಿದ ಕನ್ನಡದ ನಟ ಯಾರು? ಟಾಪ್ 5 ನಟರು ಯಾರು?

2022 ಸ್ಯಾಂಡಲ್‌ವುಡ್ ಪಾಲಿಗೆ ಅದೃಷ್ಟದ ವರ್ಷ. ಕನ್ನಡದ ಸಿನಿಮಾ ಬ್ಯಾಕ್ ಟು ಬ್ಯಾಕ್ ಹಿಟ್ ಲಿಸ್ಟ್ ಸೇರುತ್ತಲೇ ಇವೆ. ಇವುಗಳಲ್ಲಿ ಕೆಲವು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ರೆ, ಮತ್ತೆ ಕೆಲವು ಕರ್ನಾಟಕದಲ್ಲಿಯೇ ಬ್ಯಾಂಡ್ ಬಜಾಯಿಸಿವೆ. ಕನ್ನಡ ಹೀರೊಗಳು ಇಂಡಿಯಾ ಲೆವೆಲ್‌ನಲ್ಲಿ ಶೈನ್ ಆಗುತ್ತಿದ್ದಾರೆ.

ಈ ವರ್ಷದ ಮೊದಲಾರ್ಧ ಮುಗಿದು ಹೋಗಿದೆ. ಸೆಕಂಡ್ ಹಾಫ್ ಶುರುವಾಗಿದೆ. ಜೂನ್‌ ಹಾಗೂ ಜುಲೈ ಎರಡೂ ತಿಂಗಳೂ ಕನ್ನಡ ಸಿನಿಮಾಗಳಿಗೆ ವರದಾನವಾಗಿಯೇ ಇದೆ. ಕನ್ನಡದ ಸೂಪರ್‌ಸ್ಟಾರ್ ಸಿನಿಮಾ, ಟ್ರೈಲರ್, ಫಸ್ಟ್ ಲುಕ್ ಅಂತ ಜುಲೈ ತಿಂಗಳು ಸದ್ದು ಮಾಡಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಜುಲೈ ತಿಂಗಳಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ ಸೂಪರ್‌ಸ್ಟಾರ್‌ಗಳ ಲಿಸ್ಟ್ ಅನ್ನು ರಿಲೀಸ್ ಮಾಡಲಾಗಿದೆ.

ಒರ್ಮ್ಯಾಕ್ಸ್ ಮೀಡಿಯಾ ಪ್ರತಿ ತಿಂಗಳೂ ಸರ್ವೆ ಮಾಡುತ್ತೆ. ಅದೇ ರೀತಿ ಜುಲೈ ತಿಂಗಳಲ್ಲಿ ಕನ್ನಡ ಯಾವ ಸೂಪರ್‌ಸ್ಟಾರ್‌ಗಳು ಹೆಚ್ಚು ಫೇಮಸ್ ಆಗಿದ್ದಾರೆ ಅನ್ನೋ ಪಟ್ಟಿಯನ್ನು ಈ ಸಂಸ್ಥೆ ಬಿಡುಗಡೆ ಮಾಡಿದೆ. ಹಾಗಿದ್ರೆ ಕನ್ನಡ ಯಾವ್ಯಾವ ನಟರು ಯಾವ್ಯಾವ ಪಟ್ಟಿಯಲ್ಲಿ ಇದ್ದಾರೆ ಅನ್ನೋ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಟಾಪ್ 5 ನಟರ ಪಟ್ಟಿ ಬಿಡುಗಡೆ

ಟಾಪ್ 5 ನಟರ ಪಟ್ಟಿ ಬಿಡುಗಡೆ

ಒರ್ಮ್ಯಾಕ್ಸ್ ಮೀಡಿಯಾ ಜುಲೈ ತಿಂಗಳಲ್ಲಿ ಸದ್ದು ಮಾಡಿದ ಟಾಪ್ 5 ಸೂಪರ್‌ಸ್ಟಾರ್‌ಗಳ ಪಟ್ಟಿಯನ್ನು ಬಹಿರಂಗ ಪಡಿಸಿದೆ. ಜುಲೈ ತಿಂಗಳಲ್ಲಿ ಜನಪ್ರಿಯತೆ ಪಡೆದ ಆಧಾರದಲ್ಲಿ ಐದು ಸೂಪರ್‌ಸ್ಟಾರ್‌ಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಈ ಪಟ್ಟಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಸ್ಯಾಂಡಲ್ 2022 ಆರಂಭದಿಂದಲೂ ಸದ್ದು ಮಾಡುತ್ತಿದ್ದು, ಪರಭಾಷೆಯ ಚಿತ್ರರಂಗದವರನ್ನೂ ಸೆಳೆಯುತ್ತಿದೆ. ಮೊದಲ 5 ಸ್ಥಾನದಲ್ಲಿ ಸುದೀಪ್, ಯಶ್, ದರ್ಶನ್, ಶಿವಣ್ಣ, ರಕ್ಷಿತ್ ಹೆಸರಿದ್ದು, ಯಾರಿಗೆ ಯಾವ ಸ್ಥಾನ ಅನ್ನೋ ಕುತೂಹಲ ಕೆರಳಿಸಿದೆ.

ನಂ 1 ಸ್ಥಾನ ಯಾರಿಗೆ?

ನಂ 1 ಸ್ಥಾನ ಯಾರಿಗೆ?

ಒರ್ಮ್ಯಾಕ್ಸ್ ಮೀಡಿಯಾ ಪಟ್ಟಿಯಲ್ಲಿ ಜುಲೈ ತಿಂಗಳಲ್ಲಿ ಕನ್ನಡದ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ನಂ 1 ಸ್ಥಾನದಲ್ಲಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ದಾಖಲೆಗಳನ್ನೆಲ್ಲಾ ಉಡೀಸ್ ಮಾಡುತ್ತಿದ್ದಂತೆ ಯಶ್ ರೇಂಜ್ ಬದಲಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗಿದ್ದರೂ, 'ಕೆಜಿಎಫ್ 2' ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಅಲ್ಲದೆ ಯಶ್ ಮುಂದಿನ ಸಿನಿಮಾ ಬಗ್ಗೆ ಪ್ರತಿ ಚರ್ಚೆಯಾಗುತ್ತಲೇ ಇದೆ. ಈ ಕಾರಣಕ್ಕೆ ಜುಲೈ ತಿಂಗಳಲ್ಲಿ ಅತೀ ಜನಪ್ರಿಯತೆ ಗಳಿಸಿದ ಕನ್ನಡದ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ನಂ 1 ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.

ನಂ 2 ಸ್ಥಾನ ಯಾರಿಗೆ?

ನಂ 2 ಸ್ಥಾನ ಯಾರಿಗೆ?

ಒರ್ಮ್ಯಾಕ್ಸ್ ಮೀಡಿಯಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರೋದು ಕಿಚ್ಚ ಸುದೀಪ್. ಜುಲೈ ತಿಂಗಳಲ್ಲಿ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಇಡೀ ತಿಂಗಳು ಸುದೀಪ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಇದೇ ವೇಳೆ ಬಿಗ್ ಬಾಸ್ ಓಟಿಟಿ ಕೂಡ ಅನೌನ್ಸ್ ಆಗಿತ್ತು. ಹೀಗಾಗಿ ಕಿಚ್ಚ ಸುದೀಪ್ ಜುಲೈ ತಿಂಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.

ಟಾಪ್ 5 ಸ್ಥಾನದಲ್ಲಿ ಇರೋದ್ಯಾರು?

ಟಾಪ್ 5 ಸ್ಥಾನದಲ್ಲಿ ಇರೋದ್ಯಾರು?

ಜುಲೈ ತಿಂಗಳಲ್ಲಿ ಟಾಪ್ 5 ಪಟ್ಟಿಯಲ್ಲಿರುವ ಕನ್ನಡದ ಸೂಪರ್‌ಸ್ಟಾರ್‌ಗಳ ಲಿಸ್ಟ್ ಹೀಗಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್ ಎರಡನೇ ಸ್ಥಾನದಲ್ಲಿದ್ದರು. ದರ್ಶನ್, ರಕ್ಷಿತ್ ಶೆಟ್ಟಿ ಹಾಗೂ ಶಿವರಾಜ್‌ಕುಮಾರ್ ಕೂಡ ಪಟ್ಟಿಯಲ್ಲಿದ್ದಾರೆ. ಆ ಲಿಸ್ಟ್ ಇಲ್ಲಿದೆ.

ಒರ್ಮಾಕ್ಸ್ 5 ಕನ್ನಡದ ನಟಿಯರು (ಜುಲೈ)

ನಂ 1 ಯಶ್
ನಂ 2 ಕಿಚ್ಚ ಸುದೀಪ್
ನಂ 3 ದರ್ಶನ್
ನಂ 4 ರಕ್ಷಿತ್ ಶೆಟ್ಟಿ
ನಂ 5 ಶಿವರಾಜ್‌ಕುಮಾರ್

More from Filmibeat

English summary
Ormax Survey: Most Popular Male Kannada Stars Yash, Sudeep, Darshan, Rakshit Shetty, Shivarajkumar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X